ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಿಲಿಯರ್ಡ್ಸ್ : ಪಂಕಜ್ ಗೆ 12ನೇ ಚಾಂಪಿಯನ್ ಪಟ್ಟ

By Mahesh

ಲಂಡನ್, ಅ.30: ಬೆಂಗಳೂರಿನ ನಿವಾಸಿ ವಿಶ್ವದ ಅಗ್ರಮಾನ್ಯ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ತಮ್ಮ ವೃತ್ತಿ ಬದುಕಿನ 12ನೇ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್) ಇಂಗ್ಲೆಂಡಿನ ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್ ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಚಾಂಪಿಯನ್ ಆಗಿದ್ದಾರೆ.

29 ವರ್ಷದ ಪಂಕಜ್ ಅಡ್ವಾಣಿ ಅವರು 2005, 2008 ರ ನಂತರ 2014ರಲ್ಲಿ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪಂದ್ಯದ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ(746-485) ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾri ಅಂತರದಲ್ಲಿ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.

ಸೆಮಿಫೈನಲ್ ನಲ್ಲಿ ಭಾರತದ ಬಾಲಚಂದ್ರ ಭಾಸ್ಕರ್ ಅವರನ್ನು 824-978 ಅಂಕಗಳೊಂದಿಗೆ ಅತಿಥೇಯ ರಾಬರ್ಟ್ ಹಾಲ್ ಮಣಿಸಿದ್ದರು. ಅಡ್ವಾಣಿ ಅವರು 1180-1175 ಅಂತರದಲ್ಲಿ ಇಂಗ್ಲೆಂಡಿನ ಡೇವಿಡ್ ಕ್ರೂಸರ್ ವಿರುದ್ಧ ಜಯ ಸಾಧಿಸಿದ್ದರು.

Pankaj Advani

ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ. ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆಯಲ್ಲಿ ದೊಡ್ಡ ಟೂರ್ನಮೆಂಟ್ ಗೆದ್ದಿರುವುದು ಖುಷಿಗೊಟ್ಟಿದೆ ಎಂದು ಪಂದ್ಯದ ನಂತರ ಅಡ್ವಾಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸ್ನೂಕರ್ ಚಾಂಪಿಯನ್ ಪಂದ್ಯಗಳು: ಐಬಿಎಸ್ಎಫ್ ಸ್ನೂಕರ್ ಚಾಂಪಿಯನ್(ಪುರುಷ ಹಾಗೂ ಮಹಿಳೆಯರಿಗೆ) ಬೆಂಗಳೂರಿನ ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ 16 ರಿಂದ 29ರ ತನಕ ನಡೆಯಲಿದೆ. 42 ದೇಶಗಳ ಸುಮಾರು 200ಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಬೆಂಗಳೂರಿನ ಪಂಕಜ್ ಅಡ್ವಾಣಿ ಹಾಗೂ ಚಿತ್ರಾ ಎಂ ಕೂಡಾ ಸ್ಪರ್ಧಿಸಲಿದ್ದಾರೆ. [ವಿವರ ಇಲ್ಲಿದೆ]

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X