ಪ್ಯಾರಾಲಿಂಪಿಕ್ಸ್: ನಿಮ್ಮೆಲರಿಂದ ಸ್ಪೂರ್ತಿಯನ್ನು ಪಡೆದಿದ್ದೇನೆ; ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಹರ್ಷ

ನವದೆಹಲಿ, ಸೆಪ್ಟೆಂಬರ್ 12: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳೊಂದಿಗೆ ಸಂವಾದವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಟೋಕಿಯೋದಲ್ಲಿ ನೀಡಿದ ಅಮೋಘ ಪ್ರದರ್ಶನಕ್ಕೆ ಎಲ್ಲಾ ಕ್ರೀಡಾಪಟುಗಳಿಗೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ 54 ಕ್ರೀಡಾಪಟುಗಳು 9 ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಅಮೋಘ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳು ಒಟ್ಟು 19 ಪದಗಳೊಂದಿಗೆ ವಾಪಾಸಾಗಿದ್ದಾರೆ. ಇದರಲ್ಲಿ ಐದು ಚಿನ್ನದ ಪದಕ 8 ಬೆಳ್ಳಿ ಪದಕ ಹಾಗೂ 6 ಕಂಚಿನ ಪದಕ ಸೇರಿದೆ. ಈ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕ್ರೀಡಾಪಟುಗಳ ಸಾಧನೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮೆಲ್ಲರ ಸಾಧನೆಯಿಂದ ನಾನು ಪ್ರೇರಣೆ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

ಟೆಸ್ಟ್ ರದ್ದಿಗೆ ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆಟೆಸ್ಟ್ ರದ್ದಿಗೆ ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆ

ಕಳೆದ ಗುರುವಾರ ಬೆಳಗ್ಗೆ ಕ್ರೀಡಾಪಟುಗಳೊಂದಿಗೆ ತಮ್ಮ ನಿವಾಸದಲ್ಲಿ ಬೆಳಗಿನ ಲಘು ಉಪಹಾರಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತೀಯ ಕ್ರೀಡಾಪಟುಗಳನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಈ ಸಂವಾದ ನಡೆಯಿತು. ಇದರ ವಿಡಿಯೋವನ್ನು ಭಾನುವಾರ ಪ್ರಧಾನಿ ಮೋದಿಯ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ "ನಿಮ್ಮ ಸಾಧನೆಗಳಿಂದ ನೀವು ಸೋಲಿನ ಮನಸ್ಥಿತಿಯನ್ನು ಸೋಲಿಸಿದ್ದೀರಿ, ಇದು ದೊಡ್ಡ ವಿಷಯ" ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಚಿನ್ನದ ಪದಕ ಗೆದ್ದ ಶಟ್ಲರ್ ಕೃಷ್ಣ ನಗರ್ ತಮ್ಮ ಪದಕವನ್ನು ಕೋವಿಡ್ ವಾರಿಯರ್ಸ್‌ಗೆ ಅರ್ಪಿಸಿದ್ದರು. ಈ ವಿಚಾರವಾಗಿ ಪ್ರಧಾನಿ ಮೋದಿ ನಗರ್ ಬಳಿ ಇಂತಾ ನಿರ್ಧಾರಕ್ಕೆ ಕಾರಣವೇನು ಎಂದು ಕೇಳಿದ್ದಾರೆ. "ನಿಮ್ಮ ನಿರ್ಧಾರ ನನ್ನ ಮನಸ್ಸನ್ನು ನಾಟಿದೆ. ಆದರೆ ನೀವು ಹೇಳೀಕೊಂಡಾಗ ಯಾವ ರೀತಿಯಾಗಿ ಯೋಚಿಸುತ್ತಿದ್ದಿರಿ?" ಎಂದು ಮೋದಿ ಕೇಳಿದರು. ಇದಕ್ಕೆ ಉತ್ತರಿಸಿದ ಕೃಷ್ಣ ನಗರ್"ಆರೋಗ್ಯ ಕಾರ್ಯಕರ್ತರು ತಮ್ಮ ಬಗ್ಗೆ ಚಿಂತಿಸದೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದನ್ನು ನಾನು ನೋಡಿದೆ. ಇದು ನನಗೆ ಪ್ರೇರಣೆ ನೀಡಿತು" ಎಂದು ನಗರ್ ಪ್ರತಿಕ್ರಿಯಿಸಿದ್ದಾರೆ.

ಭವಾನಿಬೆನ್ ಪಟೇಲ್ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಆರಂಭವಾದ ಭಾರತದ ಕ್ರೀಡಾಪಟುಗಳ ಈ ಪದಕ ಬೇಟೆ ಟೂರ್ನಿಯ ಕೊನೆಯ ದಿನ ಒಂದು ಬೆಳ್ಳಿ ಹಾಗೂ ಒಂದು ಚಿನ್ನದ ಪದಕ ಗೆಲ್ಲುವ ಮೂಲಕ ಅಂತ್ಯಕಂಡಿದೆ. ಸಮಾರೋಪ ಸಮಾರಂಭದ ದಿನ ಕೃಷ್ಣ ನಗರ್ ಚಿನ್ನದ ಪದಕ ಗೆದ್ದಿದ್ದರೆ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅವನಿ ಲೇಖಿರಾ ಚಿನ್ನ ಹಾಗೂ ಕಂಚಿನ ಪದಕ ಗೆದ್ದರೆ ಸಿಂಗ್‌ರಾಜ್ ಶೂಟಿಂಗ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ವಿವರ:

1. ಭವೀನಾಬೆನ್ ಪಟೇಲ್- ಬೆಳ್ಳಿ ಪದಕ- ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47
3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
4. ದೇವೇಂದ್ರ ಝಝಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56
7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64
8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್‌ಎಚ್ 1
9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42
10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42
11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64
12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ರೈಫಲ್ ಎಸ್‌ಹೆಚ್ 1
13. ಹರ್ವಿಂದರ್ ಸಿಂಗ್‌- ಕಂಚಿನ ಪದಕ- ಪುರುಷರ ಆರ್ಚರಿ ಸಿಂಗಲ್ಸ್ ರಿಕ್ಯೂರ್ವ್
14. ಮನೀಷ್ ನರ್ವಾಲ್ - ಚಿನ್ನದ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
15. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
16. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
17. ಪ್ರಮೋದ್ ಭಗತ್- ಬೆಳ್ಳಿ ಪದಕ - ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-3 ವಿಭಾಗ
18. ಸುಹಾಸ್ ಯತಿರಾಜ್- ಬೆಳ್ಳಿ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗ
19. ಕೃಷ್ಣ ನಗರ್- ಚಿನ್ನದ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಹೆಚ್ 6 ವಿಭಾಗ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, September 12, 2021, 16:35 [IST]
Other articles published on Sep 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X