ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಅವನಿ ಲೇಖರಾ

Paralympics: Shooter Avani Lekhara won Paralympic gold for India
Tokyo Paralympics: Avani Lekhara Creates History, Wins Gold For India In Para Shooting | Oneindia

ಟೋಕಿಯೋ, ಆಗಸ್ಟ್ 30: ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರೀಡಾಪಟುಗಳು ತಮ್ಮ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. 10 ಮೀಟರ್ ಏರ್‌ ರೈಫಲ್ ಸ್ಪರ್ಧೆಯಲ್ಲಿ ಇಂದು ಭಾರತದ ಶೂಟರ್ ಅವನಿ ಲೇಖರಾ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದೆ.

ಅವನಿ ಲೇಖರಾ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿ ಗೆದ್ದ ಪ್ರಪ್ರಥಮ ಚಿನ್ನದ ಪದಕ ಎಂಬ ಐತಿಹಾಸಿಕ ಸಾಧನೆಯಾನ್ನು ತಮ್ಮದಾಗಿಸಿದ್ದಾರೆ. ಇದು ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದ ಒಟ್ಟಾರೆ ಐದನೇ ಚಿನ್ನದ ಪದಕವಾಗಿದೆ.

ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!

ಅವನಿ ಲೇಖರಾ ಫೈನಲ್‌ನಲ್ಲಿ ಒಟ್ಟು 249.6 ಅಂಕಗಳನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆಯನ್ನು ಕೂಡ ಸರಿಗಟ್ಟಿದ ಸಾಧನೆ ಮಾಡಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಉಕ್ರೈನ್‌ನ ಇರ್ಯಾನಾ ಶೆಟ್ನಿಕ್ ಇಷ್ಟೇ ಅಂಕಗಳನ್ನು ಸಂಪಾದಿಸುವ ಮೂಲಕ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಭಾರತೀಯ ಶೂಟರ್ ಸರಿಗಟ್ಟಿದ್ದಾರೆ.

19ರ ಹರೆಯದ ಅವನಿ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ನಂತರ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸುತ್ತಾ ಸಾಗಿದ್ದರು. ಕ್ವಾಲಿಫಿಕೇಶನ್ ಸುತ್ತಿನಲ್ಲಿ 621.7 ಅಂಕಗಳನ್ನು ಸಂಪಾದಿಸಿ 7ನೇ ಸ್ಥಾನವನ್ನು ಪಡೆದುಕೊಂಡು ಫೈನಲ್‌ಗೆ ಪ್ರವೇಶ ಪಡೆದಿದ್ದರು. ಆದರೆ ಫೈನಲ್ ಹಂತದಲ್ಲಿ ದಾಖಲೆಯ ಪ್ರದರ್ಶನ ನೀಡುವಲ್ಲಿ ಅವನಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಅವನಿ 2012 ರಲ್ಲಿ ಕೇವಲ 11 ವರ್ಷದವರಾಗಿದ್ದಾಗ ಒಂದು ದೊಡ್ಡ ಅಪಘಾತಕ್ಕೆ ಒಳಗಾಗಿದ್ದರು. ಈ ಅಪಘಾತದಲ್ಲಿ ಬೆನ್ನುಹುರಿಯಗೆ ಭಾರೀ ಘಾಸಿಯಾಗಿತ್ತು. ಹೀಗಾಗಿ ಗಾಲಿಕುರ್ಚಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ಆದರೆ ಆಕೆ ತನ್ನ ಹೆತ್ತವರ ಸಹಾಯದಿಂದ ಪ್ಯಾರಾ ಕ್ರೀಡೆಗಳತ್ತ ಮುಖ ಮಾಡಿದರು. ಶೂಟಿಂಗ್ ಮತ್ತು ಬಿಲ್ಲುಗಾರಿಕೆಯತ್ತ ಚಿತ್ತ ನೆಟ್ಟರು. ಅಂತಿಮವಾಗಿ ಶೂಟಿಂಗ್‌ಅನ್ನು ಆಯ್ಕೆ ಮಾಡಿಕೊಂಡಿದ್ದರು. ಜೈಪುರದ ಜಗತ್ಪುರ ಕ್ರೀಡಾ ಸಂಕೀರ್ಣದಲ್ಲಿ ತರಬೇತಿಯನ್ನು ಮುಂದುವರಿಸಿದರು.

ಭಾರತದ ಮಾಜಿ ಶೂಟರ್ ಸುಮಾ ಶಿರೂರ್ ಅವನಿಗೆ ತರಬೇತುದಾರರಾಗಿದ್ದಾರೆ. ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸುವ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು ಅವನಿ. 2018 ರಲ್ಲಿ ಪ್ಯಾರಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 9 ನೇ ಸ್ಥಾನದಲ್ಲಿ ಪಡೆದುಕೊಂಡಿದ್ದರು. ಆದರೆ ನಂತರ ಅದೇ ವರ್ಷದಲ್ಲಿ ಪ್ಯಾರಾ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದರು. ಈಗ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ,. ಅವನಿ ಅವರ ಈ ಸಾಧನೆಯಿಂದಾಗಿ ಇಡೀ ದೇಶ ಸಂಭ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಸಾಕಷ್ಟು ಗಣ್ಯರು ಈ ಸಾಧನೆಗೆ ಪ್ರಶಂಸೆಯನ್ನು ಪ್ಯಕ್ತಪಡಿಸಿದ್ದಾರೆ

Story first published: Monday, August 30, 2021, 17:38 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X