ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ನಿಂದ ಹಿಂಸರಿದ ಫಿಲಿಪೈನ್ಸ್ ಬಾಸ್ಕೆಟ್ ಬಾಲ್ ತಂಡ!

Philippines basketball pulls out of Asian Games

ಮನಿಲಾ, ಜುಲೈ 27: ವಿಶ್ವಕಪ್ 2019ಕ್ಕಾಗಿ ಆಸ್ಟ್ರೇಲಿಯಾ-ಫಿಲಿಪೈನ್ಸ್ ಕ್ವಾಲಿಫೈಯರ್ ಪಂದ್ಯದ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ತನ್ನ ತಂಡದ ಆಟಗಾರರು ತರಬೇತುದಾರಿಗೆ ನಿರ್ಭಂಧ ವಿಧಿಸಿರುವುದನ್ನು ಪ್ರಶ್ನಿಸಲು ಮುಂದಾಗಿರುವ ಫಿಲಿಪೈನ್ಸ್ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ನಿಂದ ಹಿಂಸರಿದಿದೆ.

ಉದ್ದೀಪನ ಪರೀಕ್ಷೆಯಲ್ಲಿ ಸಂಜಿತಾ ಫೇಲಾಗಿದ್ದು IWF ತಪ್ಪಿನಿಂದ!ಉದ್ದೀಪನ ಪರೀಕ್ಷೆಯಲ್ಲಿ ಸಂಜಿತಾ ಫೇಲಾಗಿದ್ದು IWF ತಪ್ಪಿನಿಂದ!

ಜಲೈ 2ರಂದು ಮನಿಲಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ಫಿಲಿಪೈನ್ಸ್ ಪಂದ್ಯದ ವೇಳೆ ಬಾಸ್ಕೆಟ್ ಬಾಲ್ ಆಟಗಾರರು ಮತ್ತು ಅಭಿಮಾನಿಗಳ ಮಧ್ಯೆ ಗುದ್ದಾಟ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಬಾಸ್ಕೆಟ್ ಬಾಲ್ ಆಡಳಿತ ಸಮಿತಿ ಫಿಬಾ, ಫಿಲಿಪೈನ್ಸ್ ರಾಷ್ಟ್ರೀಯ ತಂಡದಿಂದ 10 ಮಂದಿ ಆಟಗಾರರನ್ನು ಮತ್ತು ಇಬ್ಬರು ಕೋಚ್ ಗಳನ್ನು ಅಮಾನತು ಗೊಳಿಸಿತ್ತು.

Philippines basketball pulls out of Asian Games

'ಏಷ್ಯನ್ ಗೇಮ್ಸ್ ಗಾಗಿ ಕಳುಹಿಸಲು ನಮ್ಮಲ್ಲಿ ಸೂಕ್ತ ಬಾಸ್ಕೆಟ್ ಬಾಲ್ ತಂಡವಿಲ್ಲ. ತಂಡ ಹೊಂದಿಸಲು ನಮಗೆ ಕಾಲಾವಕಾಶವೂ ಇಲ್ಲ. ಮುಂದಿನ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆಗೆ ನಾವು ತಂಡವನ್ನು ರೂಪಿಸುವತ್ತ ಗಮನ ಹರಿಸಲಿದ್ದೇವೆ' ಎಂದು ಫಿಲಿಪೈನ್ಸ್ ಬಾಸ್ಕೆಟ್ ಬಾಲ್ ಫೆಡರೇಶನ್ ನ (ಎಸ್.ಬಿ.ಪಿ.) ಅಧ್ಯಕ್ಷ ಅಲ್ ಪಾನಿಲಿಯೊ ಶುಕ್ರವಾರ (ಜುಲೈ 27) ತಿಳಿಸಿದ್ದಾರೆ.

ಎಸ್.ಬಿ.ಪಿ.ಯ ಈ ನಿರ್ಧಾರ ಒಂದು ರೀತಿಯಲ್ಲಿ ಏಷ್ಯಾನ್ ಗೇಮ್ಸ್ ಆಯೋಜಕರಿಗೆ ಅಘಾತ ನೀಡಲಿದೆ. ಯಾಕೆಂದರೆ ಬಾಸ್ಕೆಟ್ ಬಾಲ್ ನಲ್ಲಿ ಹೆಚ್ಚು ಜನಪ್ರಿಯ ತಂಡವಾಗಿರುವ ಫಿಲಿಪೈನ್ಸ್ ಏಷ್ಯನ್ ಗೇಮ್ಸ್ ನಿಂದ ಹೊರಗುಳಿದಿರುವುದು ಸಹಜವಾಗೇ ಬಾಸ್ಕೆಟ್ ಅಭಿಮಾನಿಗಳು ನಿರಾಶೆಗೊಳಗಾಗಲಿದ್ದಾರೆ.

Story first published: Friday, August 17, 2018, 12:35 [IST]
Other articles published on Aug 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X