ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಟರಿ ಬೆಂಗಳೂರು ಐಟಿ ಕಾರಿಡಾರ್ 13ನೇ ಆವೃತ್ತಿಯ ಮಧ್ಯರಾತ್ರಿ ಮ್ಯಾರಥಾನ್ ಗೆ ನಾಳೆ ಚಾಲನೆ

PhonePe Bengaluru Midnight Marathon 2019

ಬೆಂಗಳೂರು, ಶುಕ್ರವಾರ, ಡಿಸೆಂಬರ್ 6, 2019: ದೇಶದ ಅತ್ಯಂತ ಹಳೆಯ ಮ್ಯಾರಥಾನ್‍ಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿರುವ ಮತ್ತು ದೇಶದ ಏಕೈಕ ಮಿಡ್‍ನೈಟ್ ಮ್ಯಾರಥಾನ್ ಆಗಿರುವ ಪ್ರತಿಷ್ಠಿತ ಫೋನ್‍ಪೆ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್ (ಬಿಎಂಎಂ)ನ 13ನೇ ಆವೃತ್ತಿಗೆ ನಾಳೆ ಚಾಲನೆ ಸಿಗಲಿದೆ.

ಫೋನ್‍ಪೆ ಬಿಎಂಎಂ 2019 ಸಂಪೂರ್ಣ ಡಿಜಿಟಲ್ ಆಗಿಯೇ ನಡೆಯಲಿದ್ದು, ನೋಂದಣಿ ಪ್ರಕ್ರಿಯೆ, ಪ್ರಚಾರ ಚಟುವಟಿಕೆಗಳಿಗೆ ಡಿಜಿಟಲ್ ಸ್ಕ್ರೀನ್‍ಗಳು, ಮಾರ್ಕೆಟಿಂಗ್ ಹಾಗೂ ಮ್ಯಾರಥಾನ್ ದಿನ ಮಾರ್ಗ ಸೂಚಕಗಳನ್ನು ಪ್ರದರ್ಶಿಸಲು ಡಿಜಿಟಲ್ ಸೈನ್‍ಬೋರ್ಡ್‍ಗಳನ್ನು ಬಳಸಲಾಗುತ್ತಿದೆ.

ಬಿಎಂಎಂ 2019ರ ಚೇರ್ಮನ್ ಅನಿಲ್ ದಂತಿ ಮಾತನಾಡಿ, 'ಆರಂಭದಿಂದಲೂ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ರಾತ್ರಿ ನಡೆಯುವ ಏಕೈಕ ಮ್ಯಾರಥಾನ್ ಇದು ಎಂಬ ವಿಶೇಷತೆಯನ್ನೂ ಬಿಎಂಎಂ ಪಡೆದಿದೆ. ಬೆಂಗಳೂರಿನ ಉತ್ಸಾಹವನ್ನು ಹಾಗೂ ಸೃಜನಶೀಲ ಸ್ಫೂರ್ತಿಯನ್ನು ಸಂಭ್ರಮಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಫೋನ್‍ಪೆ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್‍ನಲ್ಲಿ ಈ ವರ್ಷ 6000ಕ್ಕೂ ಅಧಿಕ ಓಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಭವಿಷ್ಯದ ಬಗ್ಗೆ ಇರುವ ಭರವಸೆಯ ಪ್ರತೀಕವಾಗಿ ಮುಂದಿನ ದಿನಗಳಲ್ಲಿ ಬಿಎಂಎಂ ಗುರುತಿಸಿಕೊಳ್ಳಲಿದೆ ಎಂಬ ನಂಬಿಕೆ ನಮ್ಮದು' ಎಂದು ಹೇಳಿದರು. ಕಾರ್ಪೋರೇಟ್ ಪ್ರಪಂಚದಿಂದ ದೇಶದಾದ್ಯಂತದ ಓಟಗಾರರನ್ನು ಕರೆ ತರುವುದಕ್ಕೆ ಆರ್ ಬಿ ಐ ಟಿ ಸಿ ಕಾನ್ಪೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಜೊತೆ ಸಹಭಾಗಿತ್ವ ಹೊಂದಿದೆ.

ಡಿಜಿಟಲ್ ಇಂಡಿಯಾಕ್ಕಾಗಿ ಓಟ:

ಈ ವರ್ಷದ ಥೀಮ್ 'ರನ್ ಫಾರ್ ಡಿಜಿಟಲ್ ಇಂಡಿಯಾ' (ಡಿಜಿಟಲ್ ಇಂಡಿಯಾಕ್ಕಾಗಿ ಓಡಿ). ದೇಶವು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಪೂರಕವಾಗಿ ಈ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾವಿರಾರು ವೃತ್ತಿಪರ ಓಟಗಾರರು, ಅಂತಾರಾಷ್ಟ್ರೀಯ ಅಥ್ಲೀಟ್‍ಗಳು, ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕರು, ಕಾರ್ಪೊರೇಟ್‍ಗಳು ಹಾಗೂ ಎನ್‍ಜಿಒ ಸದಸ್ಯರು ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‍ಬಿಐಟಿಸಿ) ವತಿಯಿಂದ ವೈಟ್‍ಫೀಲ್ಡ್‍ನ ಕೆಟಿಪಿಒದಲ್ಲಿ ನಾಳೆ ( ಡಿ.7ರಂದು2019ರ ಶನಿವಾರ) ಆಯೋಜಿಸಲಾಗಿರುವ ಫೋನ್‍ಪೆ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್‍ನಲ್ಲಿ ಭಾಗವಹಿಸಲಿದ್ದಾರೆ.

ಏನೆಲ್ಲಾ ಇರಲಿವೆ?

ನಾಳೆ (ಡಿಸೆಂಬರ್ 7ರಂದು) ನಡೆಯುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿಯಲ್ಲಿ ಫೋನ್‍ಪೆ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, ಅಕಮೈ 10ಕೆ ರನ್, 5ಕೆ ಐಟಿ ಸಿಟಿ ಫನ್ ರನ್, ಎಚ್‍ಪಿಸಿಎಲ್ ಕಮ್ಯುನಿಟಿ ರಿಲೇ, ಏರ್‍ಬಸ್ ಕಾರ್ಪೊರೇಟ್ ರಿಲೇ ಹಾಗೂ ಪ್ರೈಮ್ ವೆಂಚರ್ಸ್ ಪಾಟ್ರ್ನರ್ಸ್ ಫಿಟ್‍ನೆಸ್ ಸ್ಟಾರ್ಟಪ್ ರಿಲೇ ಸೇರಿವೆ.ನಾಳೆ ನಡೆಯಲಿರುವ ಮ್ಯಾರಥಾನ್ ನಲ್ಲಿ 6000ಕ್ಕೂ ಅಧಿಕ ಓಟಗಾರರು ಪಾಲ್ಗೊಳ್ಳುತ್ತಿದ್ದಾರೆ. ನಾಳೆ ಇಡೀ ರಾತ್ರಿ ಓಟಗಾರರನ್ನು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಉತ್ಸಾಹದಿಂದ ಇರಿಸಲು ಲೈವ್ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ನಾನಾ ರೀತಿಯ ತಿಂಡಿ ತಿನಿಸುಗಳ ಫುಡ್‍ಕೋರ್ಟ್‍ಗಳು ಇರಲಿವೆ.

ಮಾರ್ಗ ಸಂಚಾರ ನಿಭಂಧನೆಗಳು :

ಡಿಸೆಂಬರ್ 07, 2019 ರಂದು 2019ರ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಕಾರಣದಿಂದಾಗಿ,ಸಂಚಾರದ ಚಲನೆಯಲ್ಲಿನ ಬದಲಾವಣೆಗಳು ಈ ಕೆಳಗಿನವುಗಳಾಗಿದ್ದು, ಡಿಸೆಂಬರ್ 08 2019ರ ಭಾನುವಾರ ಸಂಜೆ 7 ರಿಂದ ಬೆಳಿಗ್ಗೆ 6.00 ರವರೆಗೆ ಸಾರ್ವಜನಿಕರ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಬದಲಾಯಿಸಲಾಗುವುದು. ಮ್ಯಾರಥಾನ್ ಕೆಟಿಪಿಒ, ವೈಟ್‌ಫೀಲ್ಡ್‌ನಿಂದ ಪ್ರಾರಂಭವಾಗಲಿದ್ದು, ಈ ಕೆಳಗಿನ ರಸ್ತೆಗಳಲ್ಲಿ ಚಲಿಸಲಿದೆ. ಜಿಂಜರ್ ಹೋಟೆಲ್ ಜಂಕ್ಷನ್ನಿಂದ ವೈಧೇಹಿ ಆಸ್ಪತ್ರೆ ಜಂಕ್ಷನ್ಗೆ ಪ್ರಾರಂಭವಾಗುವ ಗ್ರ್ಯಾಫೈಟ್ ಇಂಡಿಯಾ ರಸ್ತೆ ಮತ್ತು ಅಲ್ಲಿಂದ ಮ್ಯಾರಿಯಟ್ ಹೋಟೆಲ್ ಕಡೆಗೆ ಮರ್ಸಿಡಿಸ್ ಬೆಂಜ್ ನ ಜಂಕ್ಷನ್ ವರೆಗೆ ಯು ಟರ್ನ್ ತೆಗೆದುಕೊಳ್ಳುತ್ತದೆ. ಎಕ್ಸ್ಚೇಂಜಿಂಗ್ ಅನ್ನು ದಾಟಿ ನಂತರ ಫಾರ್ಮುಲಾ ಒನ್ ಹೋಟೆಲ್ ಮತ್ತು ಎಲ್ & ಟಿ ಕಡೆಗೆ ಬಲಕ್ಕೆ ಹೋಗಿ ಕೆಟಿಪಿಒ ಜಂಕ್ಷನ್ ತನಕ ಲೂಪ್ ಮುಚ್ಚುತ್ತದೆ. ಕೆಟಿಪಿಒ ಪಾರ್ಕಿಂಗ್ ಏರಿಯಾದೊಳಗೆ ಎಲ್ಲಾ ಪಾರ್ಕಿಂಗ್ ಮಾಡಬೇಕು.

ವೈದ್ಯಕೀಯ ನೆರವು :

ವೈದ್ಯಕೀಯ ಸಹಾಯವು ಪ್ರಾರಂಭ/ಮುಕ್ತಾಯ ಮತ್ತು ಮಾರ್ಗದ ನಿರ್ದಿಷ್ಟ ಸ್ಥಳಗಳಲ್ಲಿ ಲಭ್ಯವಿದೆ.

ವೈದ್ಯಕೀಯ ತಂಡವು ಓಟಗಾರರ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ತಿರುಚಿದ ಪಾದದಿಂದ ಹಿಡಿದು ನೀರಿಳಿಕೆ ಮತ್ತು ಹೈಪರ್ನಾಟ್ರೀಮಿಯಾದಂತಹ ನಿರ್ದಿಷ್ಟ ಪರಿಸ್ಥಿತಿಗಳಿಗೆ ಓಟಗಾರನನ್ನು ನಿಭಾಯಿಸಲು ಸಿದ್ಧವಾಗಿದೆ. ಮಾರ್ಗದಲ್ಲಿ ಐದು ಸ್ಥಳಗಳಲ್ಲಿ ವೈದ್ಯಕೀಯ ಡೇರೆಗಳಿವೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್‌ಗಳು ಮಾರ್ಗದಲ್ಲಿ ಗಸ್ತು ತಿರುಗುತ್ತಿರುತ್ತವೆ.

ರೇಸ್ ಬಗ್ಗೆ ಹೆಚ್ಚಿನ ವಿವರಗಳಿಗೆ ನೋಡಿ www.midnightmarathon.in

Story first published: Friday, December 6, 2019, 20:22 [IST]
Other articles published on Dec 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X