ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿನ್ನದ ಹುಡುಗಿ ಹಿಮಾ ದಾಸ್‌ಳ ಬೆನ್ನು ತಟ್ಟಿದ ಮೋದಿ, ತೆಂಡೂಲ್ಕರ್, ಪಂತ್

PM Modi, Sachin Tendulkar congratulate Hima Das

ನವದೆಹಲಿ, ಜುಲೈ 22: ಕೇವಲ 20 ದಿನಗಳ ಅಂತರದಲ್ಲಿ ಭಾರತಕ್ಕೆ 5 ಅಂತಾರಾಷ್ಟ್ರೀಯ ಬಂಗಾರ ಪದಕಗಳ ಗೌರವ ತಂದ ಸ್ಟ್ರಿಂಟರ್ ಹಿಮಾ ದಾಸ್‌ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಮತ್ತು ಯುವ ಕ್ರಿಕೆಟಿಗ ರಿಷಬ್ ಪಂತ್ ಭಾನುವಾರ (ಜುಲೈ 21) ಅಭಿನಂದಿಸಿದ್ದಾರೆ.

ರುತುರಾಜ್‌, ಶುಭ್‌ಮಾನ್‌ ಜೊತೆಯಾಟಕ್ಕೆ ಶರಣೆಂದ ವೆಸ್ಟ್ ಇಂಡೀಸ್ 'ಎ'ರುತುರಾಜ್‌, ಶುಭ್‌ಮಾನ್‌ ಜೊತೆಯಾಟಕ್ಕೆ ಶರಣೆಂದ ವೆಸ್ಟ್ ಇಂಡೀಸ್ 'ಎ'

ಯುರೋಪ್‌ನಲ್ಲಿ ಬೇರೆ ಬೇರೆ ಕಡೆಗಳಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟಗಳ 200 ಮೀಟರ್ ಓಟ ಮತ್ತು 400 ಮೀಟರ್ ಓಟದಲ್ಲಿ ಭಾರತಕ್ಕೆ ಒಟ್ಟು 5 ಬಂಗಾರದ ಪದಕಗಳನ್ನು ಗೆದ್ದಿದ್ದ ಹಿಮಾ, ಭಾರತದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನತ್ತ ವಿಶ್ವದ ಗಮನ ಸೆಳೆದಿದ್ದರು.

ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಪೋಲೆಂಡ್‌ನಲ್ಲಿ ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್‌ ಪ್ರಿಕ್ಸ್, ಪೋಲೆಂಡ್‌ನಲ್ಲಿ ಕುಂಟೋ ಅಥ್ಲೆಟಿಕ್ಸ್ ಮೀಟ್, ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ಹೀಗೆ ಒಟ್ಟು 5 ಬಂಗಾರದ ಪದಕಗಳು ಹಿಮಾಗೆ ಲಭಿಸಿದ್ದವು.

ಭಾರತೀಯರಿಂದ ಶುಭಾಶಯ

ಫೈನಲ್‌ನಲ್ಲಿ ರೋಮಾಂಚಕಾರಿ ಓಟದ ಸ್ಪರ್ಧೆಯಲ್ಲಿ ವಿಶ್ವದ ಓಟಗಾರ್ತಿಯರನ್ನ ಸರಿಗಟ್ಟಿ ಚಿನ್ನಕ್ಕೆ ಕೊರಳೊಡ್ಡಿದ್ದ ದಾಸ್‌ಗೆ ಭಾರತೀಯರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಭಾನುವಾರ, ಭಾರತದ ಪ್ರಧಾನಿ ಮೋದಿ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಟ್ವಿಟರ್ ಮೂಲಕ ದಾಸ್‌ಳ ಬೆನ್ನು ತಟ್ಟಿದ್ದಾರೆ (400 ಮೀಟರ್‌ ನಲ್ಲಿ ಬಂಗಾರ ಗೆದ್ದ ಹಿಮಾಳ ರೋಮಾಂಚಕಾರಿ ಓಟದ ವಿಡಿಯೋ ಮೇಲಿದೆ).

ಭಾರತಕ್ಕೆ ಹೆಮ್ಮೆ

ಭಾರತಕ್ಕೆ ಹೆಮ್ಮೆ

'ಕಳೆದ ಕೆಲವು ದಿನಗಳಿಂದ ಅಸಾಧಾರಣ ಸಾಧನೆ ತೋರುತ್ತಿರುವ ಹಿಮಾ ದಾಸ್‌ಳ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ. ಬೇರೆ ಬೇರೆ ಕ್ರೀಡಾಟೂಟಗಳಲ್ಲಿ ಭಾರತಕ್ಕೆ ಐದು ಬಂಗಾರದ ಪದಕಗಳನ್ನು ತಂದಿರುವ ದಾಸ್‌ಳ ಸಾಧನೆ ಪ್ರತಿಯೊಬ್ಬರಿಗೂ ಹರ್ಷ ತಂದಿದೆ. ಮುಂದಿನ ಸ್ಪರ್ಧೆಗಳಿಗೂ ಹಿಮಾಳಿಗೆ ಶುಭಾಶಯಗಳು,' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಯುವ ಜನತೆಗೆ ಸ್ಫೂರ್ತಿ ನೀನು

'ಕಳೆದ 19 ದಿನಗಳಲ್ಲಿ ಯುರೋಪಿನಂಗಳದಲ್ಲಿ ನೀನು ಓಡಿದ ಪರಿ ಮೆಚ್ಚುಗೆಯಾಗಿದೆ. ಗೆಲ್ಲಬೇಕೆಂಬ ನಿನ್ನ ಹಸಿವು, ಹಂಬಲ ಯುವ ಜನತೆಗೆ ಸ್ಫೂರ್ತಿಯಾಗಿದೆ. ಐದು ಬಂಗಾರದ ಪದಕಗಳಿಗಾಗಿ ಶುಭಾಶಯಗಳು. ಭವಿಷ್ಯಕ್ಕೂ ಶುಭ ಹಾರೈಕೆಗಳು,' ಎಂದು ತೆಂಡೂಲ್ಕರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗೋಲ್ಡನ್ ಗರ್ಲ್ ಎಂದ ಪಂತ್

ಹಿಮಾಳಿಗೆ ಶುಭಾಶಯ ಕೋರಿ ಬಂದಿರುವ ಸಾವಿರಾರು ಟ್ವೀಟ್‌ಗಳ ಮಧ್ಯೆ ಟೀಮ್ ಇಂಡಿಯಾ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆಯುವಂತಿದೆ. 'ಹಿಮಾ ದಾಸ್, ನೀನು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀಯ. ಭಾರತದ ಚಿನ್ನದ ಹುಡುಗಿ ನಿನಗೆ ನಮನಗಳು,' ಎಂದು ಪಂತ್ ಟ್ವೀಟ್ ಮಾಡಿದ್ದಾರೆ.

Story first published: Monday, July 22, 2019, 13:40 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X