ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಠಿಣ ಸಂದರ್ಭದಲ್ಲೂ ಒಲಿಂಪಿಕ್ಸ್ ನಡೆಸಿದ ಜಪಾನ್‌ಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

PM Narendra Modi lauds Tokyo 2020 hosts

ಕಳೆದ ವರ್ಷ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ ಕೊರೊನಾ ವೈರಸ್ ಹಾವಳಿಗೆ ಕಾರಣದಿಂದಾಗಿ ಒಂದು ವರ್ಷ ತಡವಾಗಿ ಈ ವರ್ಷ ಯಾವುದೇ ಅಡಚಣೆಯಿಲ್ಲದೆ ನಡೆದಿದೆ. ಜುಲೈ 23ರಂದು ಆರಂಭವಾದ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನ್ನು ಯಾವುದೇ ತೊಂದರೆಗಳು ಬಾರದಂತೆ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಜಪಾನ್‌ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊರೊನಾದ ಕಷ್ಟದ ಸಮಯದಲ್ಲಿಯೂ ಯಾವುದೇ ಅಡಚಣೆಗಳು ಬಾರದಂತೆ ಒಲಿಂಪಿಕ್ಸ್ ನಡೆಸಿಕೊಟ್ಟ ಜಪಾನ್ ಸರ್ಕಾರಕ್ಕೆ ಹಾಗೂ ಜಪಾನ್ ದೇಶದ ಪ್ರಜೆಗಳಿಗೆ ಮತ್ತು ವಿಶೇಷವಾಗಿ ಅತ್ಯುತ್ತಮ ಆಟಗಳನ್ನು ಆಯೋಜಿಸಿದ್ದ ಟೋಕಿಯೋಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇಂತಹ ಕಠಿಣ ಸಮಯದಲ್ಲಿಯೂ ಒಲಿಂಪಿಕ್ಸ್‌ನ್ನು ನಡೆಸುವುದರ ಮೂಲಕ ಕ್ರೀಡಾಸ್ಫೂರ್ತಿಯನ್ನು ಸಾರಿದ್ದಕ್ಕೆ ಜಪಾನ್ ದೇಶವನ್ನು ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.

ಭಾರತೀಯರ ಒಲಿಂಪಿಕ್ಸ್ ದಾಖಲೆ

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಹಿಂದೆಂದೂ ತಲುಪದ ಹಂತವನ್ನು ಭಾರತ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಮೂಲಕ ತಲುಪಿದ್ದು ಇದೇ ಮೊದಲ ಬಾರಿಗೆ 7 ಪದಕಗಳನ್ನು ತನ್ನದಾಗಿಸಿಕೊಂಡು ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಭಾರತದ ಪರ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ , ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ದಾಹಿಯಾ ಬೆಳ್ಳಿ, ಭಾರತದ ಪುರುಷರ ಹಾಕಿ ತಂಡ ಕಂಚು, ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಲವ್ಲಿನಾ ಬೋರ್ಗೊಹೈನ್ ಕಂಚು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧೂ ಕಂಚು ಮತ್ತು ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾಗೆ ಬಹುಮಾನಗಳ ಮಹಾಪೂರ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಸುತ್ತಿನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿರುವ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಪಂಜಾಬ್ ರಾಜ್ಯ ಸರ್ಕಾರ ಕೂಡ ನಗದು ಪುರಸ್ಕಾರವನ್ನು ಘೋಷಿಸುವುದರ ಮೂಲಕ ಗೌರವ ಸಲ್ಲಿಸಿದೆ. ಪಂಜಾಬ್ ರಾಜ್ಯ ಸರ್ಕಾರ ಬಂಗಾರದ ಹುಡುಗ ನೀರಜ್ ಚೋಪ್ರಾಗೆ 2 ಕೋಟಿ ನಗದು ಪುರಸ್ಕಾರವನ್ನು ಘೋಷಣೆ ಮಾಡಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತದ ಯಾವುದೇ ಅಥ್ಲೀಟ್ ಮಾಡದ ಸಾಧನೆಯನ್ನು ಮಾಡಿ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಉಚಿತ ಟಿಕೆಟ್ ಸೌಲಭ್ಯವನ್ನು ಘೋಷಣೆ ಮಾಡಿದೆ. ಒಂದು ವರ್ಷದ ಅವಧಿಗೆ ನೀರಜ್ ಚೋಪ್ರಾಗೆ ಇಂಡಿಗೋ ಏರ್‌ಲೈನ್ಸ್ ವಿಮಾನಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ.

Tokyo Olympics | Neeraj ಚಿನ್ನ ಗೆದ್ದ ಕ್ಷಣ ನೋಡಿ ಕುಣಿದು ಕುಪ್ಪಳಿಸಿದ Sunil Gavaskar ಟೀಂ |Oneindia Kannada

ಕರ್ನಾಟಕದಿಂದಲೂ ಕೊಡುಗೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಐತಿಹಾಸಿಕ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಗೋಲ್ಡನ್ ಪಾಸ್ ಸಿಕ್ಕಿದೆ. ಐತಿಹಾಸಿಕ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾಗೆ ಉಚಿತ ಗೋಲ್ಡನ್ ಪಾಸ್ ನೀಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕೃತವಾಗಿ ಘೋಷಣೆ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಲಾಗುವ ಈ ಗೋಲ್ಡನ್ ಪಾಸ್‌ ಬಳಸಿಕೊಂಡು ನಿಗಮದ ಯಾವುದೇ ಬಸ್ಸುಗಳಲ್ಲಿ ರಾಜ್ಯ ಮತ್ತು ಅಂತಾರಾಜ್ಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇನ್ನು ಈ ಗೋಲ್ಡನ್ ಪಾಸ್ ಬಳಸಿ ಜೀವಿತಾವಧಿವರೆಗೆ ನೀರಜ್ ಚೋಪ್ರಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.

Story first published: Tuesday, August 10, 2021, 9:51 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X