ಟೋಕಿಯೋ ಪ್ಯಾರಾಲಂಪಿಕ್ಸ್ ತಂಡಕ್ಕೆ ಸ್ಫೂರ್ತಿ ತುಂಬಿದ ಪ್ರಧಾನಿ ಮೋದಿ

By ಪ್ರತಿನಿಧಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಟೋಕಿಯೋ 2020 ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಪ್ಯಾರಾ ಅಥ್ಲೀಟ್ ತಂಡ ಹಾಗೂ ಅವರ ಕುಟುಂಬ, ಪಾಲಕರು ಮತ್ತು ತರಬೇತುದಾರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ; ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ! ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ಯಾರಾ ಅಥ್ಲೀಟ್ ಗಳ ಮನೋಬಲ ಮತ್ತು ಇಚ್ಛಾಶಕ್ತಿಯನ್ನು ಪ್ರಶಂಸಿಸಿದರು. ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಇದುವರೆಗಿನ ಅತಿದೊಡ್ಡ ತಂಡ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರ ಶ್ರಮವನ್ನು ಪ್ರಧಾನಿ ಶ್ಲಾಘಿಸಿದರು. ಪ್ಯಾರಾ ಅಥ್ಲೀಟ್‌ ಗಳೊಂದಿಗೆ ಸಂವಾದ ನಡೆಸಿದ ನಂತರ, ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು ಹೊಸ ಇತಿಹಾಸವನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಂದಿನ ನವ ಭಾರತವು ಕ್ರೀಡಾಪಟುಗಳ ಮೇಲೆ ಪದಕಗಳಿಗಾಗಿ ಒತ್ತಡ ಹೇರುವುದಿಲ್ಲ ಆದರೆ ಅವರು ಅತ್ಯುತ್ತಮವಾದುದ್ದನ್ನು ನೀಡುಬೇಕು ಎಂದು ನಿರೀಕ್ಷಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚಿನ ಒಲಿಂಪಿಕ್ಸ್ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ರೀಡಾಪಟುಗಳು ಗೆದ್ದರೂ, ಸೋತರೂ ಅವರ ಪ್ರಯತ್ನದಲ್ಲಿ ದೇಶವು ದೃಢವಾಗಿತ್ತು ಎಂದು ಹೇಳಿದರು.

ಪ್ರಧಾನಮಂತ್ರಿಯವರು ಮೈದಾನದಲ್ಲಿ ದೈಹಿಕ ಬಲದ ಜೊತೆಗೆ ಮಾಸಿಕ ಬಲದ ಮಹತ್ವವನ್ನೂ ಪ್ರತಿಪಾದಿಸಿದರು. ಪರಿಸ್ಥಿತಿಯ ಸವಾಲುಗಳನ್ನು ಮೆಟ್ಟಿ ಮುಂದೆ ಸಾಗುತ್ತರುವ ಪ್ಯಾರಾ ಅಥ್ಲೀಟ್ ಗಳನ್ನು ಅವರು ಪ್ರಶಂಸಿಸಿದರು. ತಂಡವು ಹೊಂದಿಕೊಳ್ಳಬೇಕಾದ ಹೊಸ ಸ್ಥಳ, ಹೊಸ ಜನರು ಮತ್ತು ಅಂತಾರಾಷ್ಟ್ರೀಯ ಸ್ಥಾಪನೆಗಳ ಕೊರತೆ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಾಗಾರ ಮತ್ತು ಕ್ರೀಡಾ ಮನೋಸ್ಥಿತಿ ಕುರಿತು ವಿಚಾರ ಸಂಕಿರಣಗಳ ಮೂರು ಅಧಿವೇಶನಗಳನ್ನು ನಡೆಸಲಾಯಿತು ಎಂದರು.

'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!

ನಮ್ಮ ಹಳ್ಳಿಗಳು ಮತ್ತು ದೂರದ ಪ್ರದೇಶಗಳು ಪ್ರತಿಭೆಯಿಂದ ತುಂಬಿದ್ದು, ಪ್ಯಾರಾ ಕ್ರೀಡಾಪಟುಗಳ ತಂಡವು ಅದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಾವು ನಮ್ಮ ಯುವಕರ ಬಗ್ಗೆ ಯೋಚಿಸಬೇಕು ಮತ್ತು ಅವರು ಎಲ್ಲಾ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಪ್ರದೇಶಗಳಲ್ಲಿ ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವ ಅನೇಕ ಯುವ ಆಟಗಾರರಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ದೇಶ ಅವರನ್ನು ತಲುಪಲು ಪ್ರಯತ್ನಿಸುತ್ತಿದೆ, ಗ್ರಾಮೀಣ ಪ್ರದೇಶಕ್ಕೆ ವಿಶೇಷ ಗಮನ ಹರಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು, 360 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಶೀಘ್ರದಲ್ಲೇ ಈ ಸಂಖ್ಯೆಯನ್ನು 1000 ಕೇಂದ್ರಗಳಿಗೆ ಹೆಚ್ಚಿಸಲಾಗುವುದು. ಕ್ರೀಡಾ ಸಲಕರಣೆಗಳು, ಮೈದಾನಗಳು ಮತ್ತು ಇತರ ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳನ್ನು ಕ್ರೀಡಾಪಟುಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ದೇಶವು ತನ್ನ ಕ್ರೀಡಾಪಟುಗಳಿಗೆ ಮುಕ್ತ ಹೃದಯದಿಂದ ನೆರವು ನೀಡುತ್ತಿದೆ. 'ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್' ಮೂಲಕ ದೇಶವು ಅಗತ್ಯ ಸೌಲಭ್ಯಗಳನ್ನು ಮತ್ತು ಗುರಿಗಳನ್ನು ಒದಗಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಒಂದು ವೇಳೆ ಮಗು ಕ್ರೀಡೆಗಳಲ್ಲಿ ಉತ್ತುಂಗವನ್ನು ತಲುಪಲು, ಆಸಕ್ತಿ ಹೊಂದಿದ್ದರೆ, ಒಂದೆರೆಡು ಕ್ರೀಡೆಯಲ್ಲಿ ಮಾತ್ರ ಜೀವನಕ್ಕೆ ಭವಿಷ್ಯವಿದೆ ಎಂದು ಹಳೆಯ ಪೀಳಿಗೆಯ ಪಾಲಕರ ಹೃದಯದಲ್ಲಿ ಮನೆ ಮಾಡಿರುವಂತೆ ಆತಂಕ ಪಡುವ ಅಗತ್ಯವಿಲ್ಲ. ಈ ಅಸುರಕ್ಷತೆಯನ್ನು ಹೋಗಲಾಡಿಸಬೇಕಾಗಿದೆ ಎಂದರು. ನಾವು ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ನಮ್ಮ ಮಾರ್ಗ ಮತ್ತು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅಂತಾರಾಷ್ಟ್ರೀಯ ಕ್ರೀಡೆಗಳ ಉತ್ತೇಜನದೊಂದಿಗೆ ಸಾಂಪ್ರದಾಯಿಕ ಕ್ರೀಡೆಗಳು ಹೊಸ ಗುರುತನ್ನು ಪಡೆಯುತ್ತಿವೆ ಎಂದು ಅವರು ಗಮನಸೆಳೆದರು. ಮಣಿಪುರದ ಇಂಫಾಲ್‌ ನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗಳಿಗೆ ಸ್ಥಾನ ಮತ್ತು ಖೇಲೋ ಇಂಡಿಯಾ ಆಂದೋಲನ ಆ ನಿಟ್ಟಿನಲ್ಲಿ ಪ್ರಮುಖ ಹಂತಗಳಾಗಿವೆ ಎಂದು ಅವರು ಉಲ್ಲೇಖಿಸಿದರು.

IPL 2021: ಯುಎಇ ಸ್ಟೇಡಿಯಂ ಒಳಗೆ ಕೇಳಲಿದೆ ಪ್ರೇಕ್ಷಕರ ಕೇಕೆ!IPL 2021: ಯುಎಇ ಸ್ಟೇಡಿಯಂ ಒಳಗೆ ಕೇಳಲಿದೆ ಪ್ರೇಕ್ಷಕರ ಕೇಕೆ!

ಅಥ್ಲೀಟ್ ಗಳು ತಾವು ಪ್ರತಿನಿಧಿಸುವ ಕ್ರೀಡೆಗಳಲ್ಲಿ, ಏಕ ಭಾರತ ಶ್ರೇಷ್ಠ ಭಾರತದ ಮನೋಭಾವವನ್ನು ಬಲಪಡಿಸುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. "ನೀವು ಯಾವುದೇ ರಾಜ್ಯ, ಪ್ರದೇಶಕ್ಕೆ ಸೇರಿದವರಾಗಿರಿ, ನೀವು ಯಾವುದೇ ಭಾಷೆ ಮಾತನಾಡುತ್ತೀರಿ, ಎಲ್ಲಕ್ಕಿಂತ ಹೆಚ್ಚಾಗಿ, ಇಂದು ನೀವು 'ಟೀಮ್ ಇಂಡಿಯಾ ಆಗಿದ್ದೀರಿ. ಈ ಚೈತನ್ಯವು ನಮ್ಮ ಸಮಾಜದ ಪ್ರತಿಯೊಂದು ಭಾಗದಲ್ಲೂ, ಪ್ರತಿ ಹಂತದಲ್ಲೂ ವ್ಯಾಪಿಸಬೇಕು "ಎಂದು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು.

ಈ ಹಿಂದೆ ದಿವ್ಯಾಂಗ ಜನರಿಗೆ ಸೌಲಭ್ಯಗಳನ್ನು ನೀಡುವುದು ಕಲ್ಯಾಣವೆಂದು ಪರಿಗಣಿಸಲಾಗುತ್ತಿತ್ತು, ಇಂದು ದೇಶವು ತನ್ನ ಜವಾಬ್ದಾರಿಯ ಭಾಗವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕಾಗಿಯೇ, ಸಂಸತ್ತು 'ದಿವ್ಯಾಂಗ ಜನ'ರಿಗೆ ಸಮಗ್ರ ಭದ್ರತೆ ಒದಗಿಸಲು ವಿಕಲಚೇತನರ ಹಕ್ಕುಗಳ ಕಾಯ್ದೆಯಂತಹ ಕಾನೂನನ್ನು ಜಾರಿಗೆ ತಂದಿದೆ ಎಂದರು. ಈ ಹೊಸ ಚಿಂತನೆಗೆ 'ಸುಗಮ್ಯ ಭಾರತ ಅಭಿಯಾನ' ದೊಡ್ಡ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಇಂದು ನೂರಾರು ಸರ್ಕಾರಿ ಕಟ್ಟಡಗಳು, ರೈಲು ನಿಲ್ದಾಣಗಳು, ರೈಲು ಬೋಗಿಗಳು, ದೇಶೀಯ ವಿಮಾನ ನಿಲ್ದಾಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ದಿವ್ಯಾಂಗ ಸ್ನೇಹಿಯನ್ನಾಗಿ ಮಾಡಲಾಗುತ್ತಿದೆ. ಭಾರತೀಯ ಸಂಜ್ಞಾ ಭಾಷೆಯ ಪ್ರಮಾಣಿತ ನಿಘಂಟು, ಎನ್‌.ಸಿ.ಇ.ಆರ್‌.ಟಿ.ಯ ಸಂಜ್ಞಾ ಭಾಷೆಯ ಅನುವಾದವು ಜೀವನವನ್ನೇ ಬದಲಾಯಿಸುತ್ತಿದೆ ಮತ್ತು ದೇಶಾದ್ಯಂತ ಹಲವಾರು ಪ್ರತಿಭೆಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿಗಳು ತಮ್ಮ ಭಾಷಣ ಮುಗಿಸಿದರು.

9 ಕ್ರೀಡಾ ಪ್ರಕಾರಗಳ 54 ಪ್ಯಾರಾ ಅಥ್ಲೀಟ್ ಗಳು ದೇಶವನ್ನು ಪ್ರತಿನಿಧಿಸಲು ಟೋಕಿಟೋಗೆ ತೆರಳುತ್ತಿದ್ದಾರೆ. ಇದು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅತಿ ದೊಡ್ಡ ತಂಡವಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 17, 2021, 18:03 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X