ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚೆನ್ನೈ ಒಲಿಂಪಿಯಾಡ್: ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

Prime Minister Narendra Modi will inaugurate the 44th Chess Olympiad in Chennai

ಜುಲೈ 28ರಂದು ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್ ಆರಂಭವಾಗಲಿದ್ದು ಈ ಪ್ರತಿಷ್ಠಿತ ಟೂರ್ನಿಯ ಉದ್ಘಾಟನೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಚೆನ್ನೈನ ಜವಾಹರ್‌ಲಾಲ್ ನೆಹರು ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುಮಾರು 200 ದೇಶಗಳಿಂದ 2000ದಷ್ಟು ಸ್ಪರ್ಧಿಗಳು ಈ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಚೆನ್ನೈ ಸರ್ವ ಸಿದ್ಧತೆಯನ್ನು ನಡೆಸಿಕೊಂಡಿದೆ. 44 ನೇ ಚೆಸ್ ಒಲಂಪಿಯಾಡ್ ಸಂಬಂಧಿಸಿದ ಅನೇಕ ಪ್ರಮುಖ ಸ್ಥಳಗಳಲ್ಲಿ ಚೆಸ್ ಆಟವನ್ನು ಥೀಮ್ ಆಗಿಟ್ಟುಕೊಂಡು ಸ್ವಾಗತಿಸಲಾಗುತ್ತಿದೆ. "ನಮ್ಮ ಚೆನ್ನೈ, ನಮ್ಮ ಚೆಸ್" ಎಂಬ ಸಾಲುಗಳೊಂದಿಗೆ ಜನರನ್ನು ಈ ಕ್ರೀಡಾಕೂಟದ ಲಾಂಛನ ಜನರನ್ನು ಸ್ವಾಗತಿಸುತ್ತಿದೆ.

ಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣುಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣು

ಇನ್ನು ಒಲಿಂಪಿಯಾಡ್ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಐದು ಹಂತದ ಭದ್ರತಾ ವ್ಯವಸ್ಥೆಯನ್ನು ನಗರದಾದ್ಯಂತ ಕೈಗೊಳ್ಳಲಾಗಿದೆ. ಭದ್ರತೆಗಾಗಿ 22,000 ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಜುಲೈ 28 ಮತ್ತು 29 ರಂದು ಚೆನ್ನೈ ನಗರ ವ್ಯಾಪ್ತಿಯಲ್ಲಿ ಡ್ರೋನ್ ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಪ್ರಧಾನಿಯವರು ಜುಲೈ 28 ರಂದು ಚೆಸ್ ಒಲಿಂಪಿಯಾಡ್ ಅನ್ನು ಉದ್ಘಾಟಿಸಲಿದ್ದು ಜುಲೈ 29 ರಂದು ಗಿಂಡಿಯ ಅಣ್ಣಾ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಜುಲೈ 27 ರಂದು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜು ಮೈದಾನದಿಂದ ಜವಾಹರಲಾಲ್ ನೆಹರು ಕ್ರೀಡಾಂಗಣದವರೆಗೆ ಒಲಂಪಿಯಾಡ್ ಜ್ಯೋತಿ ರ್ಯಾಲಿಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಚೆನ್ನೈನ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದರು.

IND vs WI 3rd ODI: ಭಾರತ ಆಡುವ 11ರ ಬಳಗ ಹೀಗಿದೆ; ಪದಾರ್ಪಣೆ ಮಾಡುತ್ತಾರಾ ಅರ್ಷದೀಪ್?IND vs WI 3rd ODI: ಭಾರತ ಆಡುವ 11ರ ಬಳಗ ಹೀಗಿದೆ; ಪದಾರ್ಪಣೆ ಮಾಡುತ್ತಾರಾ ಅರ್ಷದೀಪ್?

ದೊಡ್ಡ ಚೆಸ್‌ ಬೋರ್ಡ್‌ ಸಿದ್ಧಪಡಿಸಿದ ವಿದ್ಯಾರ್ಥಿಗಳು: ಇದೇ ವೇಳೆ ಚೆಸ್ ಒಲಿಂಪಿಯಾಡ್ ಸ್ವಾಗತಕ್ಕೆ ತಮಿಳುನಾಡಿನ ಪೆರಂಪುರದ ಖಾಸಗಿ ಶಾಲೆಯ ವಿದ್ಯಾರ್ಥಿಗಳು 6400 ಚದರ ಅಡಿಯ ಬೃಹತ್ ಚೆಸ್ ಬೋರ್ಡ್ ಸಿದ್ಧಪಡಿಸಿರುವುದು ಕುತೂಹಲ ಮೂಡಿಸಿದೆ. ಈ ದೈತ್ಯ ಚೆಸ್ ಬೋರ್ಡ್ ಅನ್ನು ಸಚಿವ ಶೇಖರ್ ಬಾಬು ಮತ್ತು ಚೆನ್ನೈ ಮೇಯರ್ ಪ್ರಿಯಾ ರಾಜನ್ ಉದ್ಘಾಟಿಸಿದರು. 32 ವಿದ್ಯಾರ್ಥಿಗಳು ಚದುರಂಗದ ವೇಷ ಧರಿಸಿ ಆಕರ್ಷಕರಾಗಿದ್ದರು. ವಿದ್ಯಾರ್ಥಿಗಳು 16 ಅಡಿ ಎತ್ತರ ಮತ್ತು ಆರು ಅಡಿ ಅಗಲದ ಮ್ಯಾಸ್ಕಾಟ್ ತಂಬಿಯ ಕಟೌಟ್ ಅನ್ನು ಸಹ ಸಿದ್ಧಪಡಿಸಿದರು.

Story first published: Thursday, July 28, 2022, 10:46 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X