ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕನ್ನಡತಿ ಐಶ್ವರ್ಯ ಪಿಸೇ ಸಾಧನೆಯನ್ನು ಶ್ಲಾಘಿಸಿದ ಪ್ರಿಯಾಂಕಾ ಗಾಂಧಿ

Priyanka Gandhi on Aishwarya Pissay 2019

ಹೊಸದಿಲ್ಲಿ, ಆಗಸ್ಟ್‌ 14: ಮೂರು ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಪಡೆದು ಈ ಸಾಧನೆ ಮಾಡಿದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಕೀರ್ತಿ ಸಂಪಾದಿಸಿದ ಬೆಂಗಳೂರಿನ ಮಹಿಳಾ ರೈಡರ್‌ ಐಶ್ವರ್ಯ ಪಿಸೇ ಅವರ ಸಾಧನೆಯನ್ನು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಗುಣಗಾನ ಮಾಡಿದ್ದಾರೆ.

ಪ್ರಿಯಾಂಕ ಗಾಂಧಿ ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ, ದೇಶಕ್ಕೆ ಕೀರ್ತಿ ತಂದ ಕನ್ನಡತಿ 23 ವರ್ಷದ ಪ್ರತಿಭಾನ್ವಿತ ಯುವ ರೈಡರ್‌ನ ಸಾಧನೆಯನ್ನು ಕೊಂಡಾಡಿದ್ದಾರೆ.

ಅಂದು ಮಾಡೆಲ್‌, ಇಂದು ವಿಶ್ವ ಚಾಂಪಿಯನ್‌, ಕನ್ನಡತಿ ಐಶ್ವರ್ಯ ಯಶೋಗಾತೆಅಂದು ಮಾಡೆಲ್‌, ಇಂದು ವಿಶ್ವ ಚಾಂಪಿಯನ್‌, ಕನ್ನಡತಿ ಐಶ್ವರ್ಯ ಯಶೋಗಾತೆ

"ಐತಿಹಾಸಿಕ ಸಾಧನೆ ಮಾಡುವ ಮೂಲಕ ನಮ್ಮಲ್ಲೂ (ಮಹಿಳೆಯರಲ್ಲೂ) ತಾಕತ್ತಿದೆ ಎಂಬುದನ್ನು ನೀವು ಸಾಬೀತು ಪಡಿಸಿದ್ದೀರಿ. ನಿಮಗೆ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳು," ಎಂದು ಪ್ರಿಯಾಂಕಾ ಗಾಂಧೀ ಟ್ವೀಟ್‌ ಮೂಲಕ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಮೋಟಾರ್‌ ಸ್ಪೋರ್ಟ್ಸ್‌ನಂತಹ ಮೈ ನವಿರೇಳಿಸುವ ಸಾಹಸಮಯ ಕ್ರೀಡೆಯಲ್ಲಿ ಪುರುಷರ ಪ್ರಾಬಲ್ಯವೇ ಹೆಚ್ಚು. ಇಂತಹ ಪುರುಷ ಪ್ರಧಾನ ಕ್ರೀಡೆಯಲ್ಲಿ ಮಹಿಳೆಯರೂ ಮಿಂಚಬಲ್ಲರು ಎಂಬುದನ್ನು ಸಾಬೀತು ಪಡಿಸಿದ ಐಶ್ವರ್ಯವಿಶ್ವಕಪ್‌ ಗೆದ್ದು ಇತಿಹಾಸ ಬರೆದಿದ್ದಾರೆ.

ಪ್ರವಾಹದಲ್ಲಿ ಈಜಿ ಬಂದು ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಬಾಕ್ಸರ್‌!ಪ್ರವಾಹದಲ್ಲಿ ಈಜಿ ಬಂದು ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಬಾಕ್ಸರ್‌!

ನಾಲ್ಕು ಹಂತದ ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ ರಾಲಿ ರೇಸ್‌ನಲ್ಲಿ ಐಶ್ವರ್ಯ ಸಮಗ್ರ ಪ್ರಶಸ್ತಿ ಗೆಲ್ಲುವುದರ ಜೊತೆಗೆ ಕಿರಿಯರ ವಿಭಾಗದಲ್ಲೂ ನಾಲ್ಕನೇ ಸ್ಥಾನ ಪಡೆದು ಮಿಂಚಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾಡೆಲಿಂಗ್‌ ಕ್ಷೇತ್ರದಲ್ಲೂ ಮಿಂಚಿದ್ದ ಬೆಂಗಳೂರಿನ ಬೆಡಗಿ, ತಮ್ಮ 17ನೇ ವಯಸ್ಸಿಗೇ ರೈಡಿಂಗ್‌ ಕಲಿತು ಆರು ವರ್ಷಗಳಲ್ಲಿ ವಿಶ್ವ ಕಪ್‌ಗೆದ್ದ ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನ ಮೊದಲ ರೇಸ್‌ ದುಬೈನಲ್ಲಿ ನಡೆದು ಅದರಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಐಶ್ವರ್ಯ, ಬಳಿಕ ಪೋರ್ಚುಗಲ್‌ನಲ್ಲಿ ನಡೆದ 2ನೇ ಸುತ್ತಿನಲ್ಲಿ 3ನೇ ಹಾಗೂ ಸ್ಪೇನ್‌ನಲ್ಲಿ ನಡೆದ ರೇಸ್‌ನಲ್ಲಿ 5ನೇ ಮತ್ತು ಹಂಗರಿಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಒಟ್ಟಾರೆ 65 ಅಂಕಗಳನ್ನು ಗಳಿಸುವ ಮೂಲಕ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ ರೈಡರ್‌ ಆಗಿ ಹೊರಹೊಮ್ಮಿದರು. ಕೇವಲ 4 ಅಂಕಗಳ ಹಿನ್ನಡೆ ಅನುಭವಿಸಿದ ಪೋರ್ಚುಗಲ್‌ನ ಮಹಿಳಾ ರೈಡರ್‌ ರೀಟಾ ವಿಯೆರಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್‌!ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್‌!

"ವಿಶ್ವಕಪ್‌ ಗೆಲುವು ನಿಜಕ್ಕೂ ಬಹುದೊಡ್ಡದು. ಇಲ್ಲಿ ಸಿಕ್ಕ ಅನುಭವದಿಂದ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇನೆ. ವಿಶ್ವದ ಅತ್ಯಂತ ಕಠಿಣ ಮೋಟಾರ್‌ ಸ್ಪೋರ್ಟ್ಸ್‌ ರಾಲಿ ರೇಸ್‌ ಆಗಿರು ಡಕಾರ್‌ನಲ್ಲಿ ಪಾಲ್ಗೊಳ್ಳುವುದು ನನ್ನ ಕನಸು. ಈ ಗುರಿ ಸಾಧನೆಗೆ ಮತ್ತಷ್ಟು ಪ್ರಾಯೋಜಕತ್ವ ನನ್ನ ಕೈ ಹಿಡಿಯುತ್ತದೆ ಎಂದು ಆಶಿಸುತ್ತೇನೆ. ಏನೇ ಆಗಲಿ ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುತ್ತೇನೆಂಬ ಛಲ ನನ್ನಲ್ಲಿದೆ," ಎಂದು ವಿಶ್ವಕಪ್‌ ಗೆಲುವಿನ ಬಳಿಕ ಐಶ್ವರ್ಯ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು.

2 ವರ್ಷದ ಹಿಂದೆ ಅಪಘಾತದಲ್ಲಿ ಮೂಳೆ ಮುರಿದಿತ್ತು

2 ವರ್ಷದ ಹಿಂದೆ ಅಪಘಾತದಲ್ಲಿ ಮೂಳೆ ಮುರಿದಿತ್ತು

2016ರಲ್ಲಿ ಮೋಟಾರ್‌ ಸ್ಪೋರ್ಟ್ಸ್‌ ಅಖಾಡಕ್ಕೆ ಧುಮುಕಿದ ಯುವ ಪ್ರತಿಭೆ ಐಶ್ವರ್ಯ, ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ದಕ್ಷಿಣ್‌ ಡೇರ್‌ ರಾಲಿಯ ಮಹಿಳಾ ವಿಭಾಗದ ಚಾಂಪಿಯನ್‌ ಎನಿಸಿದರು. ಅಂದಿನಿಂದ ಇಂದಿನವರೆಗೂ ಐಶ್ವರ್ಯ ನಡೆದು ಬಂದ ಹಾದಿ ಭಾರತೀಯ ಮೋಟಾರ್‌ ಸ್ಪೋಟ್ಸ್‌ನಲ್ಲಿ ಇತಿಹಾಸದಲ್ಲಿ ನವ ಅಧ್ಯಾಯವಾಗಿದೆ. 2017ರಲ್ಲಿ ಅಪಘಾತವೊಂದರಲ್ಲಿ ಐಶ್ವರ್ಯ ಅವರ ಭುಜದ ಮೂಳೆ ಮುರಿದಿತ್ತು. ಆದರೂ, ರಾಷ್ಟ್ರೀಯ ರೋಡ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ ಹತ್ತಿರವಿದ್ದ ಕಾರಣ ಕೇವಲ 2 ವಾರಗಳ ಅಂತರದಲ್ಲಿ ಚೇತರಿಸಿ ಕಾಲರ್‌ ಬೋನ್‌ಗೆ 7 ಸ್ಕ್ರೂ ಹಾಕಿರುವ ನೋವಿನ ನಡುವೆಯೂ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದು ಸಮಗ್ರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ್ದರು. ರಾಷ್ಟ್ರೀಯ ರೋಡ್‌ರೇಸಿಂಗ್‌ ಮತ್ತು ನ್ಯಾಷನಲ್‌ ಕ್ರಾಸ್‌ಕಂಟ್ರಿ ರಾಲಿ ಚಾಂಪಿಯನ್‌ಷಿಪ್‌ ಎರಡರಲ್ಲೂ ಒಂದೇ ವರ್ಷ ಚಾಂಪಿಯನ್‌ ಪಟ್ಟ ಪಡೆದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದರು. ಇದಾದ ಎರಡು ವರ್ಷಗಳ ತರುವಾಯ ವಿಶ್ವಕಪ್‌ ಗೆದ್ದು ಇತಿಹಾಸ ವರೆದಿದ್ದಾರೆ.

ಮೊದಲು ಮಾಡೆಲಿಂಗ್‌ಗೂ ಸೈ

ಮೊದಲು ಮಾಡೆಲಿಂಗ್‌ಗೂ ಸೈ

ಕನ್ನಡತಿ ಐಶ್ವರ್ಯ, ಬೈಕ್‌ ರೇಸಿಂಗ್‌ನಲ್ಲಿ ವೃತ್ತಿ ಬದುಕು ರೂಪಿಸಿಕೊಳ್ಳುವುದಕ್ಕು ಮುನ್ನ ಮಾಡೆಲಿಂಗ್‌ನಲ್ಲೂ ಮಿಂಚಿದ್ದರು. 5.9 ಅಡಿ ಎತ್ತರದ ಚೆಲುವೆ ಪ್ರತಿಷಿತ ಬ್ರಾಂಡ್‌ಗಳಾದ ಮೋರ್ಗಾ, ಝಾರಾ ಹಾಗೂ ಕ್ಯಾಸಾಪಿಕಾಸದಲ್ಲಿ ರೂಪದರ್ಶಿಯಾಗಿ ಕಂಗೊಳಿಸಿದ್ದರು. ಬಹುಮುಖ ಪ್ರತಿಭೆಯಾಗಿರುವ ಐಶ್ವರ್ಯ ಫ್ಯಾಷನ್‌ ಡಿಸೈನಿಂಗ್‌ನಲ್ಲೂ ಪರಿಣತರಾಗಿದ್ದಾರೆ.

ಮೋಟಾರ್‌ ಸ್ಪೋರ್ಸ್ಟ್‌ನಲ್ಲಿ ಐಶ್ವರ್ಯ ಸಾಧನೆಗಳು

ಮೋಟಾರ್‌ ಸ್ಪೋರ್ಸ್ಟ್‌ನಲ್ಲಿ ಐಶ್ವರ್ಯ ಸಾಧನೆಗಳು

* ಬಹು ಬಾರಿ ದಕ್ಷಿಣ್‌ ಡೇರ್‌ ರಾಲಿ ಚಾಂಪಿಯನ್‌.
* ಕ್ರಾಸ್‌ ಕಂಟ್ರಿ ರಾಲಿ ಮತ್ತು ರೋಡ್‌ ರೇಸಿಂಗ್‌ನಲ್ಲಿಒಂದೇ ವರ್ಷ ಚಾಂಪಿಯನ್ ಪಟ್ಟ.
* ಅಂತಾರಾಷ್ಟ್ರೀಯ ರಾಲಿ ರೇಸ್‌ಗಳಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ಮಹಿಳೆ.
* ಅಂತಾರಾಷ್ಟ್ರೀಯ ಮೋಟಾರ್‌ ಸೈಕಲ್ಸ್‌ ಒಕ್ಕೂಟದ (ಎಫ್‌ಐಎಮ್‌) ವಿಶ್ವಕಪ್‌ನಲ್ಲಿ ಚಾಂಪಿಯನ್‌.
* ಮೋಟಾರ್‌ ಸ್ಪೋರ್ಟ್ಸ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.

ಅನುಭವಿ ರಾಲಿಪಟು ವಿಶ್ವಾಸ್‌ ಗುರು

ಅನುಭವಿ ರಾಲಿಪಟು ವಿಶ್ವಾಸ್‌ ಗುರು

ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ರಾಲಿ ಚಾಂಪಿಯನ್‌ಷಿಪ್‌ನಲ್ಲಿ ಟೈರ್‌ ಪಂಚರ್‌ ಆದರು ರೇಸ್‌ ಪೂರೈಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಅನುಭವಿ ರೇಸರ್‌ ವಿಶ್ವಾಸ್‌ ಎಸ್‌.ಡಿ, ಐಶ್ವರ್ಯ ಪಿಸೇ ಅವರನನ್ನು ಒಳಗೊಂಡಂತೆ ಹಲವು ಯುವ ಉದಯೋನ್ಮುಖ ರೈಡರ್‌ಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. 2016ರಲ್ಲಿ ಐಶ್ವರ್ಯ ಪಿಸೇ ದಕ್ಷಿಣ್‌ ಡೇರ್‌ ರಾಲಿ ಗೆದ್ದು, ಮೋಟಾರ್‌ಸ್ಪೋರ್ಟ್ಸ್‌ ವೃತ್ತಿ ಬದುಕಿಗೆ ಭರ್ಜರಿ ಎಂಟ್ರಿ ನೀಡಿದ್ದರ ಹಿಂದೆ ವಿಶ್ವಾಸ್‌ ಅವರ ಪಾತ್ರ ಮಹತ್ವದ್ದು. ಐಶ್ವರ್ಯಗೆ ರಾಲಿ ರೇಸ್‌ಗಳಲ್ಲಿ ಬೈಕ್‌ ಓಡಿಸುವ ಕಲೆಯ ಪಾಠ ಹೇಳಿಕೊಟ್ಟಿದ್ದು ವಿಶ್ವಾಸ್‌. ಮಹಿಳೆಯರು ಕೂಡ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಮಿಂಚಬಲ್ಲರು ಎಂಬುದನ್ನು ಅರಿತು ಹಲವರಿಗೆ ವಿಶ್ವಾಸ್‌ ಉಚಿತವಾಗಿ ಮಾರ್ಗದರ್ಶನ ನೀಡಿದ್ದಾರೆ. ಇಂದು ಐಶ್ವರ್ಯ ಅವರ ಐತಿಹಾಸಿಕ ಸಾಧನೆಯ ಶ್ರೇಯಸ್ಸು ವಿಶ್ವಾಸ್‌ ಅವರಂತಹ ಗುರುಗಳಿಗೂ ಲಭ್ಯವಾಗುತ್ತದೆ.

Story first published: Wednesday, August 14, 2019, 18:21 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X