ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಬ್‌ಜಿ ಅಪ್‌ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''

Rage Gear Mode Revs up Vehicular Tactical Tournament in Latest Pubg Mobile Update

ಗೇಮಿಂಗ್ ಶೈಲಿಯನ್ನೇ ಬದಲಾಯಿಸಿದ ಮೊಬೈಲ್ ಗೇಮ್‌ಗಳಲ್ಲಿ ಪ್ರಮುಖವಾದದ್ದು ಪಬ್‌ಜಿ. ಆಗಿಂದಾಗ ಅಪ್‌ಡೇಟ್‌ಗಳನ್ನು ನೀಡುತ್ತಾ ಪಬ್‌ಜಿ ಆಟದ ರೋಚಕತೆಯನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಹೋಗಿದೆ. ಇದೀಗ ಮತ್ತೆ ಅಂತದ್ದೇ ರೋಚಕ ಎನಿಸುವ ಅಪ್‌ಡೇಟ್‌ಗಳೊಂದಿಗೆ ಪಬ್‌ಜಿ ಮತ್ತೆ ಬಂದಿದ್ದು, ಇಂದಿನಿಂದಲೇ ಹೊಸ ಅಪ್‌ಡೇಟ್‌ಗಳು ಬಂದಿದೆ.

ಏನೆಲ್ಲಾ ಹೊಸದು:

ರೇಜ್ ಗೇರ್ ಮೂಡ್:- ಇದು ಇವೋ ಗ್ರೌಂಡ್‌ ಮೂಡ್‌ನಲ್ಲಿ ಆಗಿರುವ ಪ್ರಮುಖ ಬದಲಾವಣೆಯಾಗಿದೆ. 'ಇವೋ ಗ್ರೌಂಡ್ ಮಾದರಿ'ಯಲ್ಲಿ ಹೊಸದಾಗಿ ಈ ರೇಜ್ ಗೇರ್ ಮಾದರಿಯನ್ನು ಅಳವಡಿಸಲಾಗಿದೆ. ಈ ಮಾದರಿಯಲ್ಲಿ ಎರಡು ತಂಡಗಳು ಇರಲಿದ್ದು ಡ್ರೈವರ್ ಅಥವಾ ಶೂಟರ್‌ಗಳಾಗಿ ಆಡಬೇಕು. ಪ್ರತೀ ವಾಹನಗಳು ಶಕ್ತಿಶಾಲಿ ಶಸ್ತ್ರಗಳನ್ನು ಹೊಂದಿರುತ್ತವೆ. ಎದುರಾಳಿಯ ವಾಹನಗಳನ್ನು ನಾಶ ಪಡಿಸಬೇಕು ಜೊತೆಗೆ ಉತ್ತಮ ಹೆಚ್ಚಿಸಿಕೊಂಡರೆ ಚಿಕನ್ ಡಿನ್ನರ್ ಪಡೆಯಬಹುದು. ಆದರೆ ಅಂಕಗಳ ಪೆಟ್ಟಿಗೆಯನ್ನು ಪಡೆಯಬೇಕು. ಈ ಸಂದರ್ಭದಲ್ಲಿ ವಾಹನ ನಾಶವಾದರೆ ಅಂಕಗಳ ಪೆಟ್ಟಿಗೆಯನ್ನು ಕಳೆದುಕೊಳ್ಳ ಬೇಕಾಗುತ್ತದೆ.

ಹೀಲಿಂಗ್ ವೇಗ; ಈ ಅಪ್‌ಡೇಟ್‌ನ ಮತ್ತೊಂದು ಪ್ರಮುಖ ಬದಲಾವಣೆ ಅಂದರೆ ಹೀಲಿಂಗ್‌ನಲ್ಲಿ ಮಾಡಿರುವ ವೇಗ. ಅದರಲ್ಲೂ ಪ್ರಮುಖವಾಗಿ ಈವರೆಗೆ ಆಟದಲ್ಲಿ ಮೆಡಿಕಿಟ್, ಸಿರಿಂಜ್, ಶಕ್ತಿವರ್ಧಕಗಳನ್ನು ಬಳಸುವಾಗ ನಿಂತುಕೊಳ್ಳಲೇಬೇಕಾಗಿತ್ತು. ಆದರೆ ಇನ್ನು ಮುಂದೆ ಓಡುತ್ತಿರುವಾಗಲೇ ಇವುಗಳನ್ನು ಬಳಸಿಕೊಳ್ಳಬಹುದು. ವೇಗದಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ.

ಆ್ಯಾಂಗ್ರೀ ಬರ್ಡ್ ಮತ್ತು ಪಬ್‌ಜಿ; ಆ್ಯಾಂಗ್ರಿ ಬರ್ಡ್ ಬ್ರ್ಯಾಂಡ್ ಹುಟ್ಟಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಪಬ್‌ಜಿ ಜೊತೆಗೆ ಆ್ಯಾಂಗ್ರಿ ಬರ್ಡ್ ಕೈಜೋಡಿಸಿದೆ. ಹೀಗಾಗಿ ಮಿನಿ ಆಟಗಳನ್ನು ಸಿದ್ದಪಡಿಸಲಾಗಿದ್ದು ಈ ಮೂಲಕ ಬಹುಮಾನಗಳನ್ನು ಪಡೆಯಬಹುದು.

ಇಷ್ಟು ಮಾತ್ರವಲ್ಲದೆ ಟಿಡಿಎಂ ಮಾದರಿಯಲ್ಲಿ ಗನ್‌ಗಳ ಬಟನ್‌ಗಳ ಸ್ಥಳಗಳನ್ನು ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಜೊತೆಗೆ ಟಿಪಿಪಿ ಯಿಂದ ಎಫ್‌ಪಿಪಿಗೆ ಎಫ್‌ಪಿಪಿಯಿಂದ ಟಿಪಿಪಿಗೆ ತಕ್ಷಣವೇ ಬದಲಾವಣೆ ಮಾಡಿಕೊಳ್ಳುವಂತೆ ಗುಂಡಿಯನ್ನು ನೀಡಲಾಗಿದೆ.

Story first published: Wednesday, December 11, 2019, 19:47 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X