ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ಯಾರಮ್, ಬಾಕ್ಸಿಂಗ್‌ನಲ್ಲಿ 100 ದಾಖಲೆಗಳ ದಾಖಲೆ ಬರೆದ ರಮೇಶ್ ಬಾಬು

Ramesh Babu all crossed century of records in Carrom and Boxing

ಬೆಂಗಳೂರು: 64ರ ಹರೆಯದ ನಿವೃತ್ತ ಮೆಟಲರ್ಜಿಕಲ್ ಸೈಂಟಿಸ್ಟ್ ಡಾಕ್ಟರ್ ರಮೇಶ್ ಬಾಬು ಅವರಿಗೆ ಬದುಕಿನಲ್ಲಿ ಹೊಸದೇನನ್ನೋ ಸಾಧಿಸುವ ಹುಮ್ಮಸ್ಸು. ಸಾಧನೆಯ ಈ ಹಪಹಪಿಯಿಂದಲೇ ಈಗಾಗಲೇ ರಮೇಶ್ ಅನೇಕ ರಾಷ್ಟ್ರೀಯ, ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ದಾಖಲೆಗಳ ಸಾಲಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಬೆಂಗಳೂರಿನಲ್ಲಿ 'ಟಾಪ್ ಆಫ್‌ ದ ವರ್ಲ್ಡ್' ಎನ್ನುವ ಸಂಸ್ಥೆಗೆ ಸ್ಥಾಪಕ ನಿರ್ದೇಶಕರಾಗಿರುವ ರಮೇಶ್ ಇಂಥ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.

ಬ್ಯಾಟಿಂಗ್‌ನಲ್ಲಿ ಹೊಸ ದಾಖಲೆ ಬರೆದ ಬೌಲರ್ ಜಸ್‌ಪ್ರೀತ್‌ ಬೂಮ್ರಾ!ಬ್ಯಾಟಿಂಗ್‌ನಲ್ಲಿ ಹೊಸ ದಾಖಲೆ ಬರೆದ ಬೌಲರ್ ಜಸ್‌ಪ್ರೀತ್‌ ಬೂಮ್ರಾ!

ಈ ಮೊದಲು ಡಾ. ರಮೇಶ್ ಬಾಬು ಅವರು 100 ಕ್ಯಾರಮ್ ಕಾಯಿನ್‌ಗಳನ್ನು ಅತೀ ವೇಗವಾಗಿ ಹೊಡೆದು ಮತ್ತು ಅತೀ ವೇಗವಾಗಿ ಬಾಕ್ಸಿಂಗ್ ಪಂಚ್‌ಗಳನ್ನು ನೀಡಿ 90 ವಿಶ್ವದಾಖಲೆಗಳನ್ನು ಮತ್ತು 9 ರಾಷ್ಟ್ರೀಯ ದಾಖಲೆಗಳನ್ನು (ಒಟ್ಟಿಗೆ 99 ದಾಖಲೆ) ನಿರ್ಮಿಸಿದ್ದರು. ಈಗ ಬಾಬು ಮತ್ತೆರಡು ವಿಶ್ವದಾಖಲೆಗಳನ್ನು ಸೇರಿಸಿ ಒಟ್ಟು 101 ದಾಖಲೆಗಳನ್ನು ನಿರ್ಮಿಸಿದ್ದಾರೆ.

2020ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಿಂದ ಟಿ20 ವಿಶ್ವಕಪ್‌ವರೆಗೆ ಕೊರೊನಾ ಬಲಿಯಾದ ಟೂರ್ನಿಗಳು2020ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಿಂದ ಟಿ20 ವಿಶ್ವಕಪ್‌ವರೆಗೆ ಕೊರೊನಾ ಬಲಿಯಾದ ಟೂರ್ನಿಗಳು

ತನ್ನ 100ನೇ ದಾಖಲೆಯನ್ನು ರಮೇಶ್ ಅವರು ದಿವಂಗತ ಸಹೋದರ ಎಸ್‌ ರಾಜಶೇಖರ ರಾವ್‌ಗೆ ಮತ್ತು 101ನೇ ದಾಖಲೆಯನ್ನು ಪುತ್ರಿ ಶೃತಿ ರಮೇಶ್ ಹೆಸರಿಗೆ ಅರ್ಪಿಸಿದ್ದಾರೆ.

ಎರಡು ಹೊಸ ವಿಶ್ವ ದಾಖಲೆಗಳು

ಎರಡು ಹೊಸ ವಿಶ್ವ ದಾಖಲೆಗಳು

ಡಿಸೆಂಬರ್ 11ರಂದು ಬೆಂಗಳೂರಿನಲ್ಲಿ ರಮೇಶ್ ಬಾಬು ನಿವಾಸ 'ಸಾಧನೆ'ಯಲ್ಲಿ ನಡೆದ ವಿಶ್ವದಾಖಲೆ ಪ್ರದರ್ಶನದ ವೇಳೆ ಬಾಬು ಅವರು 4 ನಿಮಿಷ 41 ಸೆಕೆಂಡ್‌ಗಳಲ್ಲಿ 100 ಕ್ಯಾರಮ್ ಕಾಯಿನ್‌ಗಳನ್ನು ಹೆಬ್ಬೆರಳಿನ ಸಹಾಯದಿಂದ ವೇಗ ಹೊಡೆಯುವ ಮೂಲಕ ಮತ್ತು 30 ಸೆಕೆಂಡ್‌ಗಳಲ್ಲಿ 178 ಬಾಕ್ಸಿಂಗ್ ಪಂಚ್‌ಗಳನ್ನು ನೀಡುವ ಮೂಲಕ ಎರಡು ಹೊಸ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ.

ಭಾರತದಲ್ಲಿ ರಮೇಶ್ ಮೊದಲಿಗ

ಹೊಸ ದಾಖಲೆಯ ಪ್ರಕಾರ ರಮೇಶ್ ಬಾಬು ಹೊಡೆದ 100 ಕ್ಯಾರಮ್ ಕಾಯಿನ್‌ಗಳಲ್ಲಿ ನಿಮಿಷಕ್ಕೆ 25.8 ಕಾಯಿನ್‌ಗಳನ್ನು ವೇಗ ಹೊಡೆದಂತಾಗುತ್ತದೆ. ಇನ್ನು ವೇಗದ ಬಾಕ್ಸಿಂಗ್‌ ಪಂಚ್‌ಗಳ ಲೆಕ್ಕಾಚಾರ ತೆಗೆದರೆ, 30 ಸೆಕೆಂಡ್‌ಗಳಲ್ಲಿ 178 ಪಂಚ್‌ಗಳು ಎಂದರೆ ಸೆಕೆಂಡ್‌ಗೆ 5.93 ಪಂಚ್‌ನಂತಾಗುತ್ತದೆ. ಭಾರತದವರಾಗಿ ಅದರಲ್ಲೂ ಹಿರಿಯ ನಾಗರಿಕರಲ್ಲಿ ಈ ದಾಖಲೆ ನಿರ್ಮಿಸಿದವರಲ್ಲಿ ರಮೇಶ್ ಬಾಬು ಮೊದಲಿಗ.

ಗಿನ್ನಿಸ್ ದಾಖಲೆಯೂ ಬದಿಗೆ

30 ಸೆಕೆಂಡ್‌ಗಳಲ್ಲಿ ಬಾರಿಸಿದ 178 ಪಂಚ್‌ಗಳನ್ನು ನಿಮಿಷಕ್ಕೆ ಬದಲಾಯಿಸಿದರೆ 356 ಪಂಚ್‌ಗಳಾಗುತ್ತವೆ. ಇದೇ ದಾಖಲೆಯನ್ನು ಸದ್ಯದ ಗಿನ್ನಿಸ್ ದಾಖಲೆಗೆ ಹೋಲಿಸಿದರೆ, ಗಿನ್ನಿಸ್ ದಾಖಲೆಯಿರುವ 25ರ ಹರೆಯದ ಸ್ಲೋವಾಕಿಯಾ ಮಾರ್ಷಲ್ ಆರ್ಟಿಸ್ಟ್ ಅವರ ದಾಖಲೆ ಮೀರಿಸಿದಂತಾಗುತ್ತದೆ. ಸ್ಲೋವಾಕಿಯಾ ಮಾರ್ಷಲ್ ಆರ್ಟಿಸ್ಟ್ ನಿಮಿಷಕ್ಕೆ 322 ಪಂಚ್‌ಗಳನ್ನು ನೀಡಿದ್ದರು.

Story first published: Friday, December 11, 2020, 19:47 [IST]
Other articles published on Dec 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X