ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಥ್ಲಿಟ್ ಗಳ ಕನಸು ನನಸಾಗಿಸಲು ಪಿಟಿ ಉಷಾಗೆ ಆರ್ಥಿಕ ನೆರವು ನೀಡಿ

By Mahesh

ಬೆಂಗಳೂರು, ಅಕ್ಟೋಬರ್ 8: ದೇಶದ ಜನಪ್ರಿಯ ಅಥ್ಲಿಟ್ ಪಿ.ಟಿ. ಉಷಾ ಅವರ ಕ್ರೀಡಾ ಉಪಕ್ರಮದ ಒಂದು ಭಾಗವಾದ ಉಷಾ ಸ್ಕೂಲ್ ಆಫ್ ಅಥ್ಲಿಟ್ಸ್ ಇದೀಗ ಮಿಲಾಪ್ ಡಾಟ್ ಒಆರ್ ಜಿ ಜತೆ ಸಹಯೋಗ ಮಾಡಿಕೊಂಡಿದ್ದು, ಆನ್‍ಲೈನ್ ಮೂಲಕ ಧನ ಸಂಗ್ರಹ ಮಾಡಿ ಯುವ ಅಥ್ಲಿಟ್ ಗಳ ಕನಸು ನನಸಾಗಿಸುವ ದೇಶದ ಅತಿ ದೊಡ್ಡ ಕ್ರೌಡ್ ಫಂಡಿಂಗ್ ವೇದಿಕೆಯಾಗಿ ಜನಪ್ರಿಯವಾಗಿದೆ.

ಉಷಾ ಸ್ಕೂಲ್ -2002ರಲ್ಲಿ ಆರಂಭವಾದ ಈ ಶಾಲೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಯುವ ಉತ್ಸಾಹಿಗಳನ್ನು ಹುಡುಕುವ ಕಾರ್ಯ ಮಾಡುತ್ತಿದ್ದು, ಇವರ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿದೆ. ತಮ್ಮ ಕಲಿಕೆಯನ್ನು ಮುಂದುವರಿಸಿಕೊಂಡು ಹೋಗುವ ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದೆ. ಒಲಂಪಿಕ್ ನನಲ್ಲಿ ದೇಶದ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಮಾಡುವುದು ಇದರ ಪ್ರಮುಖ ಗುರಿ ಹಾಗೂ ಉದ್ದೇಶವಾಗಿದೆ. ಇಲ್ಲಿನ ಅನೇಕ ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದಾರೆ.

Ready to tap crowdfunding platforms to enable young athletes: PT Usha

2017ರ ಜನವರಿಯಿಂದ ಇಲ್ಲಿಯವರೆಗೆ ಉಷಾ ಸ್ಕೂಲ್ ತನ್ನ ಅಥ್ಲಿಟ್ ಗಳಿಗಾಗಿ ಮಿಲಾಪ್ ವೇದಿಕೆಯಡಿ ಧನ ಸಂಗ್ರಹಿಸುವ ಕಾರ್ಯ ಮಾಡಿಕೊಂಡು ಬಂದಿದೆ. ಸೌಲಭ್ಯವಂಚಿತ ಹಿನ್ನೆಲೆಯುಳ್ಳ ಹೆಣ್ಣುಮಕ್ಕಳಿಗೆ ಕ್ರೀಡೆಯಲ್ಲಿ ಉತ್ತಮ ವೇದಿಕೆ ಕಲ್ಪಿಸುವ ಮಹತ್ತರ ಉದ್ದೇಶದೊಂದಿಗೆ ಈ ಕಾರ್ಯಕ್ಕೆ ಇಳಿದಿದೆ. ಈ ಕಾರ್ಯದ ಪ್ರಮುಖ ಉದ್ದೇಶವೆಂದರೆ ಅಥ್ಲಿಟ್ ಗಳು ತಮ್ಮ ತರಬೇತಿಯನ್ನು ನಿರಾತಂಕವಾಗಿ ಮುಂದುವರಿಸಿಕೊಂಡು ಸಾಗಬೇಕು. ನಿಯಮಿತ ಪ್ರಾಯೋಜಕತ್ವ, ವಿಶ್ವಾಸಾರ್ಹವಲ್ಲದ ಮೂಲಗಳಿಂದ ಸಮಸ್ಯೆಗೆ ಒಳಗಾಗಬಾರದು ಎನ್ನುವುದು. ಆನ್‍ಲೈನ್ ಧನ ಸಂಗ್ರಾಹಕರಿಂದ ಆರ್ಥಿಕ ಬಲ ಕೋರಲಾಗುತ್ತಿದೆ. ಇದರ ಮೂಲಕ ಶಾಲೆಯಲ್ಲಿ ವೃತ್ತಿಪರ ತರಬೇತಿ, ಅಗತ್ಯ ಆಹಾರ, ಉಪಕರಣಗಳು ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಮಾನ್ಯತೆ ಹಾಗೂ ಯುವ ಅಥ್ಲಿಟ್‍ಗಳಿಗೆ ಸೀಮಾತೀತ ಕ್ರೀಡಾ ಅವಕಾಶಗಳನ್ನು ಒದಗಿಸುವುದು ಮೂಲ ಉದ್ದೇಶವಾಗಿದೆ.

ಕ್ರೀಡಾಳು ಅಭಿತಾ ಇದಕ್ಕೆ ಉತ್ತಮ ಉದಾಹರಣೆ. ಪುಣೆಯಲ್ಲಿ ನಡೆದ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಹಿರಿಯ ಮಹಿಳಾ ವಿಭಾಗದಲ್ಲಿ ಇವರು ದೇಶದ ಅತ್ಯುತ್ತಮ ಮಹಿಳಾ ಅಥ್ಲಿಟ್ ಎಂದು ಘೋಷಿತರಾಗಿದ್ದಾರೆ. ಇವರು ನ್ಯೂಜಿಲೆಂಡ್ ನ ಸಮೊವಾದಲ್ಲಿ ನಡೆದ ಕಾಮನ್‍ವೆಲ್ತ್ ಯುವ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇವಳ ತಂದೆ ಕೃಷಿಕರು. ಹದಿಹರೆಯದಲ್ಲಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವುದು ಇವರಿಗೆ ಅತ್ಯಂತ ಕಷ್ಟಕರವಾಗಿತ್ತು. ಆದಾಗ್ಯೂ ನಿಖರ ಗುರಿ ಇಟ್ಟುಕೊಂಡು 2020ಯಲ್ಲಿ ನಡೆಯುವ ಟೋಕಿಯೊ ಒಲಂಪಿಕ್‍ಗೆ ಸಜ್ಜಾಗುತ್ತಿದ್ದಾರೆ. ಪ್ರತಿನಿತ್ಯ ಕನಿಷ್ಠ 7 ಗಂಟೆ ತರಬೇತಿಯಲ್ಲಿ ಭಾಗಿಯಾಗುತ್ತಿದ್ದಾರೆ. ಉಷಾ ಸ್ಕೂಲ್‍ನಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಿಕೊಂಡು ಸಾಗುವ ಜತೆಗೆ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ಮಿಲಾಪ್ ಮೂಲಕ ಇವರ ಕ್ರೀಡಾ ತರಬೇತಿಗಾಗಿ 1 ಲಕ್ಷ ರೂಪಾಯಿಯನ್ನು ಸಂಗ್ರಹಿಸಲಾಗಿದೆ.

ಮಿಲಾಪ್ ಕುರಿತು:

ವೈಯಕ್ತಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಕ್ರೌಡ್‍ಫಂಡಿಂಗ್ ಮಾಡಲು ಮಿಲಾಪ್ ದೇಶದ ಒಂದು ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆನ್‍ಲೈನ್ ಮೂಲಕ ನಾಗರಿಕರು ತಮ್ಮದೇ ಆದ ಕಾರ್ಯಗಳಿಗೆ ಧನ ಸಂಗ್ರಹ ಮಾಡಲು ಅತ್ಯಂತ ಸರಳ ಮಾರ್ಗ ಇದಾಗಿದೆ. ಖಾಸಗಿ ಕಾರಣಗಳಿಗೆ, ಪ್ರೀತಿಸುವವರಿಗಾಗಿ, ಸಾಕುಪ್ರಾಣಿ ಹಾಗೂ ಜಾನುವಾರುಗಳು, ನೈಸರ್ಗಿಕ ವಿಕೋಪ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಸ್ಥಳೀಯ ಚಾರಿಟಿಗಳು, ತುರ್ತು ಸಂದರ್ಭ, ನೆರೆಹೊರೆ, ಕ್ರೀಡೆ, ಸಾಕ್ಷ್ಯಚಿತ್ರ, ಸ್ವಯಂಸೇವೆ, ಫೆಲೊಶಿಪ್, ಕಲೆ ಹಾಗೂ ಇತರೆ ಯೋಜನೆಗಳಿಗೆ ವೈಯಕ್ತಿಕ ಹಾಗೂ ಸಮೂಹ ಬಯಸುವ ಅನುಕೂಲ ಪಡೆಯಲು ಇದು ಸೂಕ್ತ ವೇದಿಕೆಯಾಗಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X