ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಿಯೋ: ಅಗಸ್ಟ್ 06 ರಂದು ಭಾರತ ಆಡಲಿರುವ ಕ್ರೀಡೆಗಳ ವೇಳಾಪಟ್ಟಿ

By ಕ್ರೀಡಾ ಡೆಸ್ಕ್

ರಿಯೋ ಡಿ ಜನೈರೋ, ಅಗಸ್ಟ್ 06: ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ವರ್ಣರಂಜಿತವಾಗಿ ಆರಂಭಗೊಂಡಿದೆ. ಸಾಂಬಾ ನಾಡಲ್ಲಿ 31ನೇ ಆವೃತ್ತಿಯ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 4.20 ಸುಮಾರಿಗೆ ಒಲಿಂಪಿಕ್ಸ್ ಜ್ಯೋತಿ ಬೆಳಗುವುದರ ಮೂಲಕ ಅದ್ದೂರಿ ಚಾಲನೆ ಸಿಕ್ಕಿತು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಆರಂಭೋತ್ಸವದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಶೂಟರ್‌ ಅಭಿನವ್ ಬಿಂದ್ರಾ ಹಿಡಿದು ಮುನ್ನಡೆದರು. ಬ್ರೆಜಿಲ್‌ ರಾಷ್ಟ್ರಗೀತೆಯೊಂದಿಗೆ ಮನೋರಂಜನಾ ಕಾರ್ಯಕ್ರಮಗಳು ಆರಂಭಗೊಂಡವು. [ಚಿತ್ರಗಳು : ರಿಯೋ ಒಲಿಂಪಿಕ್ಸ್ 2016ಕ್ಕೆ ವರ್ಣರಂಜಿತ ಚಾಲನೆ]

ಒಲಿಂಪಿಕ್ಸ್ ಜ್ಯೋತಿ ಬೆಳಗುವ ಮೂಲಕ 17 ದಿನಗಳ ಕ್ರೀಡಾ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಇನ್ನು ಬ್ರೆಜಿಲ್‌ನ ಕಾರ್ನಿವಾಲ್, ಸಾಂಬಾ ನೃತ್ಯಗಳು ಸಮಾರಂಭದಲ್ಲಿ ಗಮನ ಸೆಳೆದವು. [ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಇಂದು ಅ.06 ಭಾರತ ಆಡಲಿರುವ ಆಟಗಳು: ರಿಯೋ ಒಲಿಂಪಿಕ್ಸ್ 02ನೇ ದಿನವಾದ ಇಂದು (ಆಗಸ್ಟ್ 06) ವಿವಾದಗಳ ನಡುವೆಯೂ ಒಲಿಂಪಿಕ್ಸ್ ನಲ್ಲಿ ಒಂದಾಗಿ ಆಡಲು ಒಪ್ಪಿಕೊಂಡಿರುವ ಲಿಯಾಂಡರ್ ಪೇಸ್‌ ಮತ್ತು ಕರ್ನಾಟಕದ ರೋಹನ್ ಬೋಪಣ್ಣ ಅವರು ಶನಿವಾರ ಡಬಲ್ಸ್‌ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. [ವಿಡಿಯೋ ಗೇಮ್ಸ್ ಆಡಿದ್ದಕ್ಕೆ 5 ಸಾವಿರ ಡಾಲರ್ ದಂಡ!]

ಇನ್ನು ಮಹಿಳಾ ಡಬಲ್ಸ್‌ ಹಣಾಹಣಿಯಲ್ಲಿ ಸಾನಿಯಾ ಮಿರ್ಜಾ ಮತ್ತು ಪ್ರಾರ್ಥನಾ ತೊಂಬಾರೆ ಒಂದಾಗಿ ಆಡಲಿದ್ದಾರೆ. [ಅಂಕಿಯಲ್ಲಿ ರಿಯೋ ಒಲಿಂಪಿಕ್ಸ್ 2016]

Rio Olympics 2016 Day 2 (August 6): India's schedule in Brazil


ಆಗಸ್ಟ್ 06 (ಶನಿವಾರ ಎರಡನೇ ದಿನದ ಆಟ)

* ಪುರುಷರ ಹಾಕಿ : ಭಾರತ v/s ಐರ್ಲೆಂಡ್ (ರಾತ್ರಿ 7.30).

* ಶೂಟಿಂಗ್ : 10ಮೀ ಏರ್ ಪಿಸ್ತೂಲ್- ಜೀತು ರೈ, ಗುರುಪ್ರೀತ್ ಸಿಂಗ್ (ರಾತ್ರಿ 9.30).

* ಟೇಬಲ್ ಟೆನಿಸ್ ; ಪುರುಷರ ಸಿಂಗಲ್ಸ್-ಅಚ್ಚನಾಥ್ ಶರತ್ ಕಮಲ್, ಸ್ವಾಮಿಜೀತ್ ಘೋಶ್,(ಸಂಜೆ 05ಕ್ಕೆ).

* ಟೇಬಲ್ ಟೆನಿಸ್: ಮಹಿಳಾ ವಿಭಾಗ: ಮೋನಿಕಾ ಬಾತ್ರ, ಮೌಮ ದಾಸ್ (ಸಂಜೆ 05ಕ್ಕೆ).

* ಟೆನಿಸ್; ಪುರುಷರ ಡಬಲ್ಸ್: ಲಿಯಾಂಡರ್ ಪೇಸ್ ಮತ್ತು ರೋಹನ್ ಭೋಪಣ್ಣ ಜೋಡಿ (ರಾತ್ರಿ 10ಕ್ಕೆ)

* ಟೆನಿಸ್; ಮಹಿಳಾ ಡಬಲ್ಸ್-ಸಾನಿಯಾ ಮಿರ್ಜಾ ಮತ್ತು ಪ್ರಾರ್ಥನಾ ತೊಂಬಾರೆ ಜೋಡಿ (ರಾತ್ರಿ 10ಕ್ಕೆ).

* ರೋಯಿಂಗ್; ಪುರುಷರ ಸಿಂಗಲ್ಸ್- ದತ್ತು ಬೋಕನಾಲ್ (ಸಂಜೆ 05ಕ್ಕೆ).

* ಕುಸ್ತಿ; ಮಹಿಳೆಯರ 48ಕೆ.ಜಿ.ವಿಭಾಗ- ಸೈಕೋಮ್ ಮಿರಾಬೀ ಚಾನು (ಅ.07. ಬೆಳಿಗ್ಗೆ 3.30ಕ್ಕೆ)

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X