ಆರ್ಚರಿಯಲ್ಲಿ ಅಚ್ಚರಿ ಮೂಡಿಸಿದ ದೀಪಿಕಾ:
ಮಹಿಳೆಯರ ಆರ್ಚರಿ(ಬಿಲ್ಲುಗಾರಿಕೆ) ವಿಭಾಗದಲ್ಲಿ ಭಾರತದ ದೀಪಾ ಕುಮಾರಿ ಅವರು 1ನೇ ರೌಂಡ್ ನಲ್ಲಿ 27-26, 29-29, 30-27, 27-29, 29-29 ಅಂತರದಲ್ಲಿ ಜಾರ್ಜಿಯಾದ ಕ್ರಿಸ್ಟಿನೆ ಎಸೆಬುವಾ ಅವರ ವಿರುದ್ಧ ಜಯಗಳಿಸಿ ಅಚ್ಚರಿ ಮೂಡಿಸಿದರು. ನಂತರ ನಡೆದ 32ನೇ ರೌಂಡಿನಲ್ಲಿ ದೀಪಿಕಾ ಇಟಲಿಯ ಗೆಂಡಲಿನಾ ಸಾರಟೋರಿ ವಿರುದ್ಧ 27-26, 29-29, 30-27, 29-29, 29-29ರ ಅಂತರದಲ್ಲಿ ದೀಪಿಕಾ ಗೆಲುವು ಸಾಧಿಸಿ ಪ್ರೀ ಕ್ವಾಟರ್ ಫೈನಲ್ ಗೆ ಪ್ರವೇಶಿಸಿದರು
ಬೊಂಬಾಲ್ಯ ದೇವಿ ಪ್ರೀ ಕ್ವಾರ್ಟರ್ ಫೈನಲಿಗೆ
ಭಾರತದ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಅವರು 64ರ ಘಟ್ಟದ ಮೂರು ಸುತ್ತಿನಲ್ಲಿ 28-24, 27-23, 26-24 ಅಂಕಗಳೊಂದಿಗೆ ಲಾರೆನ್ಸ್ ಅವರನ್ನು ಮಣಿಸುವುದರ ಮೂಲಕಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಮನೋಜ್ ಕುಮಾರ್ ಪಂಚಿಂಗ್
ಪುರುಷರ ಲೈಟ್ವೇಟ್ ಬಾಕ್ಸಿಂಗ್ನ 32ನೇ ರೌಂಡ್ನಲ್ಲಿ 29-28, 29-28, 28-29ರ ಅಂತರದಲ್ಲಿ ಮನೋಜ್ ಗೆಲುವು ದಾಖಲಿಸಿದರು. ಆಗಸ್ಟ್ 14ರಂದು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಉಜ್ಬೇಕಿಸ್ತಾನದ ಫಜುಲುದ್ದೀನ್ಗೈಜ್ನಾಜರೋವರನ್ನು ಮನೋಜ್ ಕುಮಾರ್ ಎದುರಿಸಲಿದ್ದಾರೆ.
ಆಸೀಸ್ ವಿರುದ್ಧ ಸೋತ ಭಾರತದ ವನಿತೆಯರು
ಮಹಿಳೆಯ ಹಾಕಿಯಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 1-6 ಅಂತರ ಗೋಲುಗಳಿಂದ ಆಸೀಸ್ ಗೆ ಸುಲಭವಾಗಿ ತುತ್ತಾಯಿತು. ಇದರಿಂದ ಭಾರತದ ವನಿತೆಯರು ರಿಯೋನಿಂದ ಹೊರ ಹೋದರು.
ಕೈಕೊಟ್ಟ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ
ಬುಧವಾರ (ಆ.10) ರಂದು ನಡೆದ 50 ಮೀಟರ್ ಪುರುಷರ ವಿಭಾಗದ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ ಈ ಇಬ್ಬರು ಶೂಟರ್ ಗಳು 12 ಮತ್ತು 25 ಕ್ಕೆ ತೃಪ್ತಿ ಪಟ್ಟು ಫೈನಲ್ ಹಂತಕ್ಕೆ ವಿಫಲವಾಗಿದ್ದಾರೆ
ವೇಟ್ ಲಿಫ್ಟಿಂಗ್ ನಲ್ಲಿ ಭಾರತ ವೇಸ್ಟ್
ಪುರುಷರ 77 ಕೆ.ಜಿ ವಿಭಾಗ ಗ್ರುಪ್ B ಹಾಗು ಪುರುಷರ 77 ಕೆ.ಜಿ ವಿಭಾಗ ಗ್ರೂಪ್ A ವೇಟ್ ಲಿಫ್ಟಿಂಗ್ ನಲ್ಲಿ ಭಾತರದ ಸ್ಪರ್ಧಿಗಳು ವೇಟ್ ಎತ್ತಲಾಗದೆ ವೇಸ್ಟ್ ಆಗಿ ಹೊರ ಬಂದರು. ಚಿತ್ರದಲ್ಲಿ ಸತೀಶ್ ಕುಮಾರ್
ಜೂಡೊ ಪಟು ಅವತಾರ್ ಸಿಂಗ್
ಪುರುಷರ 90 ಕೆಜಿ ವಿಭಾಗದ ಜೂಡೊನಲ್ಲಿ ಭಾರತದ ಜೂಡೊ ಪಟು ಅವತಾರ್ ಸಿಂಗ್ ನಿರಾಶ್ರಿತರ ತಂಡದ ಪಿ. ಮಿಸೆಂಗ ಅವರ ವಿರುದ್ಧ ಪರಾಭವಗೊಂಡರು.