ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

RJ Malishkas Dance For Neeraj Chopra Sparks Major Backlash On Social Media

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಬಂಗಾರದ ಪದಕ ವಿಜೇತ ನೀರಜ್ ಚೋಪ್ರಾ ಎದುರು ರೆಡ್ ಎಫ್‌ಎಂ ರೇಡಿಯೋ ಜಾಕಿ ಮಲಿಷ್ಕಾ ಮತ್ತವರ ತಂಡ ಕುಣಿದಿದ್ದು ಸಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಆನ್ ಲೈನ್ ಇಂಟರ್‌ವ್ಯೂ ವೇಳೆ ಈ ವಿವಾದ ಸೃಷ್ಟಿಯಾಗಿದೆ. ಒಲಿಂಪಿಕ್ಸ್ ಬಂಗಾರ ವಿಜೇತ ಅಥ್ಲೀಟ್ ನೀರಜ್ ಎದುರು ಮಲಿಷ್ಕಾ ಮತ್ತು ಅವರ ತಂಡ ಎಲ್ಲೆ ಮೀರಿ ವರ್ತಿಸಿದೆ, ಅಥ್ಲೀಟ್‌ನ ಗೌರವಕ್ಕೆ ಚ್ಯುತಿ ಬರುವ ಹಾಗೆ ನಡೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ತೋರಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಆರ್‌ಜೆ ಮಲಿಷ್ಕಾ ಮತ್ತವರ ಎಫ್‌ಎಂ ತಂಡದ ಇತರ ಸದಸ್ಯರು ಕುಣಿದಿರುವ ಚಿತ್ರಣವಿದೆ. 'ನಯಾ ದೌರ್' ಚಿತ್ರದ ಉಡೆನ್ ಜಬ್ ಜಬ್ ಝುಲ್ಫಿನ್ ತೇರಿ ಚಿತ್ರದ ಹಾಡಿಗೆ ಕುಣಿದಿದ್ದು ವಿವಾದಕ್ಕೆ ಕಾರಣವಾಗಿದೆ.

ಏನಿದೆ ಮಲಿಷ್ಕಾ ಡ್ಯಾನ್ಸ್ ನ ವೈರಲ್ ವಿಡಿಯೋದಲ್ಲಿ?

ಏನಿದೆ ಮಲಿಷ್ಕಾ ಡ್ಯಾನ್ಸ್ ನ ವೈರಲ್ ವಿಡಿಯೋದಲ್ಲಿ?

ಸಂದರ್ಶನಕ್ಕಾಗಿ ನೀರಜ್ ಚೋಪ್ರಾ ಅವರನ್ನು ರೆಡ್ ಎಫ್‌ಎಂ ತಂಡ ಝೂಮ್ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿತ್ತು. ದೇಶಕ್ಕಾಗಿ ಚಿನ್ನ ಗೆದ್ದ ಅಥ್ಲೀಟ್ ಎದುರು ಆರ್‌ಜೆ ತಂಡ ಕುಣಿದು ಸಂಭ್ರಮಿಸಿತ್ತು. ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗಲೂ ತುಂಬಾ ಫ್ರೀಯಾಗಿ ಮಲಿಷ್ಕಾ ವರ್ತಿಸಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಸಂದರ್ಶನದ ವೇಳೆ ನೀರಜ್ ಮಾತ್ರ ಸಹಜವಾಗೆ, ಸೌಜನ್ಯಯುತವಾಗೇ ಮಾತನಾಡಿದ್ದರು. ನೀರಜ್ ಇದನ್ನು ಲಘುವಾಗಿ ತೆಗೆದುಕೊಂಡಿದ್ದರಾದರೂ ನೋಡುಗರು ಇದರ ವಿರುದ್ಧ ಅಸಮಾಧಾನ ತೋರಿಕೊಂಡಿದ್ದಾರೆ. ಆರ್‌ಜೆ ಮಲಿಷ್ಕಾ ಜವಾಬ್ದಾರಿ ಮರೆತು ಅಶ್ಲೀಲ ರೀತಿಯಲ್ಲಿ ಅಥ್ಲೀಟ್‌ ಜೊತೆಗೆ ವರ್ತಿಸಿದ್ದಾರೆ. 23ರ ಹರೆಯದ ನೀರಜ್ ಜೊತೆ 40ರ ಹರೆಯದ ಮಲಿಷ್ಕಾರ ಈ ಚೆಲ್ಲಾಟ ಬೇಡವಾಗಿತ್ತು ಎಂದು ಅನೇಕರು ಕಿಡಿ ಕಾರಿದ್ದಾರೆ. ಈ ವೈರಲ್ ವಿಡಿಯೋವನ್ನು ಮಲಿಷ್ಕಾ ಅವರೇ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದರು.
'ಲೇಡೀಸ್..ಹೌದು, ನನಗೆ ಗಟ್ಟಿಯಾದ ಉತ್ತರಗಳು ಸಿಕ್ಕಿತು ಆದರೆ .. ನಾವು ಯಾರಿಗಾಗಿ ನೃತ್ಯ ಮಾಡುತ್ತಿದ್ದೇವೆ ಎಂದು ಊಹಿಸಲು ಝೂಮ್ ಕಾಮ್ ಕರೆಗೆ ಚಲಿಸುವ ಮೊದಲು ಮೊದಲ 4 ಸೆಕೆಂಡುಗಳನ್ನು ತೆಗೆದುಕೊಳ್ಳಿ' ಎಂದು ಬರೆಯಲಾಗಿತ್ತು. ಝೂಮ್ ವಿಡಿಯೋ ಆಗಲೇ ಚಾಲ್ತಿಯಲ್ಲಿದ್ದರಿಂದ ಮಲಿಷ್ಕಾ ಮತ್ತವರ ತಂಡದ ನೃತ್ಯಕ್ಕೆ ನೀರಜ್ ಸ್ವಲ್ಪ ನಾಚಿದಂತೆ ತೋರಿತ್ತು. ಈ ವಿಡಿಯೋವನ್ನು ಮಲಿಷ್ಕಾ ತನ್ನ ಟ್ವಿಟರ್ ಖಾತೆಯಲ್ಲಿ ಆಗಸ್ಟ್ 19ರಂದು ಹಾಕಿಕೊಂಡಿದ್ದರು. ವಿಡಿಯೋ ಹಾಕಿದ ಕೆಲವೇ ಕ್ಷಣಗಳಲ್ಲಿ ಬಹಳಷ್ಟು ಜನರಿಂದ ವಿಡಿಯೋ ವೀಕ್ಷಿಸಲ್ಪಟ್ಟಿತ್ತು. ಮುಂಬೈ ಕಿ ರಾಣಿ ಹೆಸರಿನ ಖಾತೆಯಿಂದ ಮಲಿಷ್ಕಾ ವಿಡಿಯೋ ಪೋಸ್ಟ್ ಮಾಡಿದ್ದರು.

ನಾಚಿಗೆ ಬರಿಸುತ್ತಿದೆ ವಿಡಿಯೋ, ಅಶ್ಲೀಲವಾಗಿದೆ!

ಮಲಿಷ್ಕಾ ಮತ್ತವರ ತಂಡದವರು ಮಾಡಿರುವ ಈ ವಿಡಿಯೋ ಡ್ಯಾನ್ಸ್ ನಾಚಿಕೆ ತರಿಸುತ್ತಿದೆ. ಒಂದು ವೇಳೆ ಇದನ್ನೇ ಹುಡುಗನೊಬ್ಬ ಮಾಡಿದ್ದರೆ ಅದು ಅಶ್ಲೀಲವೆನಿಸಿ ಗಂಭೀರ ವಿಚಾರವಾಗುತ್ತಿತ್ತು. ಲೈಂಗಿಕ ಕಿರುಕುಳ ಎನಿಸುತ್ತಿತ್ತು ಎಂದು ಆಕಾಂಚ ಶ್ರೀವತ್ಸವ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡುವ ಯಾರಿಗಾದರೂ ಕಟ್ಟ ಭಾವನೆ ಮೂಡುವಂತಿದೆ ಎಂದು ಇನ್ನೂ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೂನಿಯರ್ ಕಮೀಶನರ್ ಆಫೀಸರ್ ಆಗಿ ನೀರಜ್ ಚೋಪ್ರಾ ಮಾತ್ರ ಬಹಳ ಸಂಕೋಚದಿಂದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥದ್ದು ನೋಡೋಕೆ ಬೇಜಾರಾಗುತ್ತಿದೆ. ಮುಖ್ಯವಾಗಿ ರೆಡ್ ಎಫ್‌ಎಂ ಇಂಥದ್ದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬೇಜಾರಿನ ಸಂಗತಿ ಎಂದು ಬಹಳಷ್ಟು ಮಂದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ 21ರಂದಷ್ಟೇ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನ ಸ್ಟೇಡಿಯಂ ಒಂದಕ್ಕೆ ನೀರಜ್ ಚೋಪ್ರಾ ಹೆಸರಿಡುವುದಾಗಿ ಘೋಷಣೆಯಾಗಿತ್ತು. ಅದರ ಬೆನ್ನಲ್ಲೇ ನೀರಜ್ ವಿವಾದಾತ್ಮಕ ಸಂಗತಿಯೊಂದಕ್ಕೆ ಥಳುಕು ಹಾಕಿಕೊಂಡಿದ್ದಾತೆ.

ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ವಿಶೇಷ ದಾಖಲೆ ಬರೆದಿದ್ದ ಚೋಪ್ರಾ

ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ವಿಶೇಷ ದಾಖಲೆ ಬರೆದಿದ್ದ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ (ಈಟಿ) ಎಸೆತದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 23ರ ಹರೆಯ ನೀರಜ್ ಚೋಪ್ರಾ, 87.58 ಮೀಟರ್ ಸಾಧನೆಯೊಂದಿಗೆ ಬಂಗಾರ ಗೆದ್ದಿದ್ದರು. ಈ ಬಂಗಾರದ ಪದಕ ಹಲವಾರು ದಾಖಲೆಗಳಿಗೆ ಕಾರಣವಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಚಿನ್ನವಾಗಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಮೊದಲನೇ ಬಂಗಾರದ ಪದಕವಾಗಿ, ಒಲಿಂಪಿಕ್ಸ್‌ನಲ್ಲಿ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಪದಕವಾಗಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕವಾಗಿ ಈ ಸಾಧನೆ ಗುರುತಿಸಿಕೊಂಡಿದೆ. ಭಾರತಕ್ಕೆ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬಂದಿದ್ದು ಬ್ರಿಟಿಷ್-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರಿಗೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿಚರ್ಡ್ 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಬಂಗಾರ ಗೆದ್ದ ಹಿರಿಮೆ ಶೂಟರ್ ಅಭಿನವ್ ಬಿಂದ್ರಾಗೆ ಸಲ್ಲುತ್ತದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ 10 ಮೀಟರ್ ಏರ್ ರೈಫಲ್‌ನಲ್ಲಿ ಬಂಗಾರ ಗೆದ್ದಿದ್ದರು.

Story first published: Sunday, August 22, 2021, 1:56 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X