ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್ ಆಟಗಾರ ರೋಹನ್ ಬೋಪಣ್ಣಗೆ ಅಂದಾಜು 30 ಲಕ್ಷ ರೂ ಮಂಜೂರು ಮಾಡಿದ ಟಿಒಪಿಎಸ್

Rohan Bopanna Gets Additional Funding to Train for Tokyo Olympics

2021ರ ಜನವರಿಯಿಂದ ಜೂನ್‌ವರೆಗೆ ಭಾರತದ ಟೆನಿಸ್ ಪುರುಷರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ತನ್ನ ತರಬೇತುದಾರ ಸ್ಕಾಟ್ ಡೇವಿಡ್‌‌ಅಪ್ ಮತ್ತು ಫಿಜಿಯೋಗೌರಂಗ್ ಶುಕ್ಲಾ ಅವರೊಂದಿಗೆ 12 ಟೂರ್ನಿಗಳಲ್ಲಿ ಆಟವಾಡಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಇಂದು ನಡೆದ ಮಿಷನ್ ಒಲಿಂಪಿಕ್ ಘಟಕದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಬೋಪಣ್ಣ ಸದ್ಯ ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವದ 39ನೇ ಶ್ರೇಯಾಂಕದಲ್ಲಿದ್ದಾರೆ ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಬೋಪಣ್ಣ ಅವರಿಗೆ ಒಟ್ಟಾರೆ ಟೂರ್ನಿಗಳಲ್ಲಿ ಭಾಗವಹಿಸಲು ಅಂದಾಜು 27.61 ಲಕ್ಷ ರೂ. ಅನುಮೋದನೆ ನೀಡಲಾಗಿದೆ. ಬೋಪಣ್ಣ ಈಗಾಗಲೇ ಸದ್ಯದ ಒಲಿಂಪಿಕ್ ಸೈಕಲ್‌ನಲ್ಲಿ ಟಿಒಪಿಎಸ್‌ನಿಂದ 1.24 ಕೋಟಿ ರೂ.ಗಳನ್ನು ಸ್ವೀಕರಿಸಿದ್ದಾರೆ.

ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್

ಜನವರಿಯಿಂದ ಜೂನ್‌ವರೆಗೆ 14 ಟೂರ್ನಿಗಳಲ್ಲಿ ಆಟವಾಡಲು ಪುರುಷರ ಟೆನಿಸ್ ಡಬಲ್ಸ್ ಆಟಗಾರ ದಿವಿಜ್ ಶರಣ್ ಅವರ ಪ್ರಸ್ತಾವಕ್ಕೂ ಅನುಮೋದನೆ ನೀಡಿದೆ. ಶರಣ್ ಅವರ ಪ್ರಸ್ತಾವವನ್ನು ಒಟ್ಟು ಅಂದಾಜು ವೆಚ್ಚ 30 ಲಕ್ಷ ರೂ.(ವಿಮಾನ ವೆಚ್ಚ ಸೇರಿ)ಗೆ ಸಮಿತಿ ಅನುಮೋದಿಸಿದೆ. ಇದಕ್ಕೂ ಮುನ್ನ ಶರಣ್ ಅವರಿಗೆ ಸದ್ಯದ ಒಲಿಂಪಿಕ್ ಸೈಕಲ್‌ನಲ್ಲಿ ಟಿಒಪಿಎಸ್‌ನಿಂದ 80.59 ಲಕ್ಷ ರೂ. ನೆರವು ಸ್ವೀಕರಿಸಿದ್ದಾರೆ.

ಏಷ್ಯಾ ಚಾಂಪಿಯನ್ ವಿನೇಶ್ ಫೊಗಾಟ್ ಅವರು ಈ ವರ್ಷದ ಜುಲೈನ ಒಲಿಂಪಿಕ್ ಕ್ರೀಡಾಕೂಟದವರೆಗೆ ವಿದೇಶದಲ್ಲೇ ತರಬೇತಿ ಪಡೆಯುವುದನ್ನು ಮುಂದುವರಿಸಲಿದ್ದಾರೆ. ಅವರ ಪ್ರಸ್ತಾವವನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಮೂಲಕ ಭಾರತೀಯ ಕುಸ್ತಿ ಒಕ್ಕೂಟ ಅನುಮೋದನೆ ನೀಡಿದ್ದು, ಬಲ್ಗೇರಿಯಾದಲ್ಲಿ ಅವರು ಎತ್ತರದ ಸಾಧನೆ ಪೂರ್ಣಗೊಳಿಸಿದ ನಂತರ ಹಂಗೇರಿ ಮತ್ತು ಪೋಲೆಂಡ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

IPL 2021: ಭಾರತದಲ್ಲಿ ಅನುಭವಿಸಿದ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗIPL 2021: ಭಾರತದಲ್ಲಿ ಅನುಭವಿಸಿದ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗ

ಫೊಗಾಟ್ 2019ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್ಸ್‌ನಲ್ಲಿ 53 ಕೆಜಿ ವಿಭಾಗದ ಒಲಿಂಪಿಕ್ ಕೋಟಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅವರು ಬುಡಪೆಸ್ಟ್‌ನಲ್ಲಿ ಜೂನ್ 9ರವರೆಗೆ ತರಬೇತಿ ಪಡೆಯುತ್ತಿದ್ದು, ಆನಂತರ ಪೋಲೆಂಡ್ ಓಪನ್(ಜೂನ್ 9 ರಿಂದ 13) ಪ್ರಯಾಣ ಬೆಳೆಸುವರು ಮತ್ತು ಬುಡಪೆಟೆಸ್ಟ್‌ಗೆ ವಾಪಸ್ಸಾಗಿ ಜುಲೈ 2ರವರೆಗೆ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅವರ ತರಬೇತುದಾರ ವೂಲ್ಲರ್ ಅಕೋಸ್, ಸ್ಪೇರಿಂಗ್ ಪಾಲುದಾರರಾದ ಪ್ರಿಯಾಂಕ ಮತ್ತು ಫಿಜಿಯೋಥೆರಪಿಸ್ಟ್ ಪೂರ್ಣಿಮಾ ರಾಮನ್ ಎನ್ ಗೋಮ್ದಿರ್ ಆಕೆಯ ಜೊತೆಗೆ ಇರಲಿದ್ದಾರೆ. ಆಕೆಯ ತರಬೇತಿ ಮತ್ತು ಸ್ಪರ್ಧೆಗೆ 20.21 ಲಕ್ಷ ರೂ. ಪ್ರಸ್ತಾವವಿದ್ದು ಈವರೆಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸಮಿತಿಯಿಂದ 1.13 ಕೋಟಿ ಆರ್ಥಿಕ ನೆರವನ್ನು ಪಡೆದುಕೊಂಡಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದ ಸಿದ್ಧತೆಗಾಗಿ ರೋವರ್ಸ್ ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರಿಗೆ ಜೂನ್ 1ರಿಂದ ಐದು ವಾರಗಳ ಕಾಲ ಪೋರ್ಚುಗಲ್‌ನ ಪೋಸಿನ್ಹೊ ಹೈಪರ್ ಫಾರ್ಮೆನ್ಸ್ ಕೇಂದ್ರದಲ್ಲಿ ತರಬೇತಿ ಪಡೆಯುವ ಪ್ರಸ್ತಾವಕ್ಕೆ ಎಂಒಸಿ ಅನುಮೋದನೆ ನೀಡಿದೆ. ಈ ಡಬಲ್ಸ್ ಸ್ಕೂಲರ್ಸ್ ಟೋಕಿಯಾದಲ್ಲಿ ಈ ತಿಂಗಳ ಆರಂಭದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಸಾಧಿಸಿದರು. ಪೋಲೆಂಡ್‌ನಲ್ಲಿ ಅವರ ತರಬೇತಿ ಶಿಬಿರಕ್ಕೆ ಸುಮಾರು 21 ಲಕ್ಷ ರೂ. ವೆಚ್ಚ ತಗುಲಲಿದೆ.

ಕೊವಿಡ್ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ಕಡೆಯಿಂದ 45 ಕೋಟಿ ದೇಣಿಗೆಕೊವಿಡ್ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ಕಡೆಯಿಂದ 45 ಕೋಟಿ ದೇಣಿಗೆ

ರೋವರ್ಸ್ ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಅಭಿವೃದ್ಧಿ ಗುಂಪಿನಿಂದ ಪ್ರಮುಖರ ಗುಂಪಿಗೆ ವರ್ಗಾವಣೆಗೊಂಡಿದ್ದು, ಕುಸ್ತಿಪಟುಗಳಾದ ಸೀಮಾ ಬಿಸ್ಲಾ ಮತ್ತು ಸುಮಿತ್ ಮಲಿಕ್ ಅವರು ಇತ್ತೀಚೆಗೆ ವಿಶ್ವ ಒಲಿಂಪಿಕ್ಸ್ ಅರ್ಹತಾ ಕೋಟಾದಲ್ಲಿ ಸ್ಥಾನಪಡೆದಿದ್ದಾರೆ ಹಾಗೂ ಪ್ರಮುಖರ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಟೆನಿಸ್ ಆಟಗಾರ ಅಂಕಿತ್ ರೈನಾ ಅವರು ಇತ್ತೀಚೆಗೆ ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವ ಅಗ್ರ 100ರ ಸ್ಥಾನಕ್ಕೇರಿದ್ದಾರೆ ಮತ್ತು ಬಿಲ್ಲಿ ಜೀನ್ ಕಿಂಗ್ ಕಪ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಪಾಲುದಾರರಾಗಿ ಆಡಲಿದ್ದಾರೆ ಮತ್ತು ಟಿಒಪಿಎಸ್‌ನ ಪ್ರಮುಖ ಗುಂಪು ಸೇರ್ಪಡೆಯಾಗಲಿದ್ದಾರೆ.

Story first published: Tuesday, May 25, 2021, 13:45 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X