ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮುಂದಿನ 2 ಒಲಿಂಪಿಕ್ಸ್‌ನಲ್ಲಿ ರಷ್ಯಾ ತನ್ನ ಧ್ವಜ, ರಾಷ್ಟ್ರಗೀತೆ ಬಳಸುವಂತಿಲ್ಲ

Russia can’t use its name and flag at the next 2 Olympics

ಮಾಸ್ಕೋ: ಮುಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಅಥವಾ ಯಾವುದೇ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ರಷ್ಯಾ ಮುಂದಿನ ಎರಡು ವರ್ಷಗಳ ಕಾಲ ತನ್ನ ರಾಷ್ಟ್ರದ ಧ್ವಜ, ರಾಷ್ಟ್ರೀಯ ಗೀತೆ ಬಳಸುವಂತಿಲ್ಲ. ಕ್ರೀಡೆಗಾಗಿ ಮಧ್ಯಸ್ಥಿಕೆ ನ್ಯಾಯಾಲಯ ಗುರುವಾರ (ಡಿಸೆಂಬರ್ 17) ಈ ತೀರ್ಪು ನೀಡಿದೆ.

ಇಲಿ ನಜ್ವಾ ಸಾದಿಕ್ ವರಿಸಿದ ಭಾರತದ ಹಾಕಿ ನಾಯಕ ಮನ್ಪ್ರೀತ್ ಸಿಂಗ್ಇಲಿ ನಜ್ವಾ ಸಾದಿಕ್ ವರಿಸಿದ ಭಾರತದ ಹಾಕಿ ನಾಯಕ ಮನ್ಪ್ರೀತ್ ಸಿಂಗ್

ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ ರಷ್ಯಾ ವಿರುದ್ಧ ಪ್ರಸ್ತಾಪಿಸಿದ್ದ ನಾಲ್ಕು ವರ್ಷಗಳ ನಿಷೇಧ ಶಿಕ್ಷೆಯನ್ನು ಸ್ವಿಜರ್‌ಲ್ಯಾಂಡ್‌ನ ಲೌಸನ್ನೆ ಮೂಲದ ಕೋರ್ಟ್ ಅರ್ಧಕ್ಕೆ ನಿಲ್ಲಿಸಿದೆ. ರಷ್ಯಾ ದೇಶ ಮುಂದಿನ ವರ್ಷಗಳ ಕಾಲ ಯಾವುದೇ ಪ್ರಮುಖ ಕ್ರೀಡಾಕೂಟಗಳ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವಂತೆಯೂ ಇಲ್ಲ.

ರಷ್ಯಾದ ಅಥ್ಲೀಟ್‌ಗಳು ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮತ್ತು 2022ರಲ್ಲಿ ನಡೆಯಲಿರುವ ಬೀಜಿಂಗ್ ವಿಂಟರ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. 2022ರಲ್ಲಿ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನಲ್ಲೂ ರಷ್ಯಾ ಅಥ್ಲೀಟ್‌ಗಳು ಪಾಲ್ಗೊಳ್ಳಬಹುದಾಗಿದೆ.

'ಯೋಗಾಸನ'ಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮನ್ನಣೆಯಿತ್ತ ಕ್ರೀಡಾ ಸಚಿವಾಲಯ'ಯೋಗಾಸನ'ಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮನ್ನಣೆಯಿತ್ತ ಕ್ರೀಡಾ ಸಚಿವಾಲಯ

ಡೋಪಿಂಗ್‌ ಟೆಸ್ಟ್‌ನಲ್ಲಿ ರಷ್ಯಾ ಅಥ್ಲೀಟ್‌ಗಳು ಪಾಸಿಟಿವ್ ಬಂದರೆ ಅಂಥ ಅಥ್ಲೀಟ್‌ಗಳು ಮುಂದಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಉಳಿದಂತೆ ಯಾವುದೇ ಕ್ರೀಡಾಪಟು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬಹುದು. ಆದರೆ ತಾನು ರಷ್ಯಾದ ಪ್ರತಿನಿಧಿ ಅನ್ನುವುದಕ್ಕೆ ಧ್ವಜ, ರಾಷ್ಟ್ರಗೀತೆ ಬಳಸುವಂತಿಲ್ಲ.

Story first published: Thursday, December 17, 2020, 22:22 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X