ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶುಭಾಶಯ ಕೋರುವ ಭರದಲ್ಲಿ ಎಡವಟ್ಟು: ಸದ್ಗುರುಗೆ ಟ್ವೀಟ್ ಬಿಸಿ!

Jaggi Vasudev Controversy

ಹೊಸದಿಲ್ಲಿ, ಜುಲೈ 25: ಭಾರತದ ಯುವ ಸ್ಪ್ರಿಂಟ್‌ ರನ್ನರ್‌ ಹಿಮಾ ದಾಸ್‌ ಕಳೆದ ಒಂದು ತಿಂಗಳ ಅವಧಿಯಲ್ಲಿ 5 ಸ್ವರ್ಣ ಪದಕ ಗೆದಿದ್ದು, ಈ ಸಂದರ್ಭದಲ್ಲಿ ಶುಭಾಶಯ ಕೋರುವ ಭರದಲ್ಲಿ ಪದಗಳ ಬಳಕೆಯಲ್ಲಿ ಎಡವಿ ಟ್ವೀಟ್‌ ಮಾಡಿರುವ ಸದ್ಗುರು ಜಗ್ಗಿ ವಾಸುದೇವ್‌ ಅನಗತ್ಯ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

"ಹಿಮಾ ದಾಸ್‌, ಭಾರತಕ್ಕೆ ಸ್ವರ್ಣ ಸ್ನಾನ (ಗೋಲ್ಡನ್‌ ಶವರ್‌). ಶುಭಾಶಯಗಳು ಮತ್ತು ಆಶೀರ್ವಾದಗಳು. -ಸದ್ಗುರು," ಎಂದು ಜಗ್ಗಿ ವಾಸುದೇವ್‌ ಟ್ವೀಟ್‌ ಮಾಡಿದ್ದರು. ಆದರೆ, ಈ ಟ್ವೀಟ್‌ನಲ್ಲಿ ಸದ್ಗುರು ತಮಗರಿವಿಲ್ಲದೆ ಮಾಡಿರುವ ಎಡವಟ್ಟಿಗೆ ಇದೀಗ ಟ್ವಿಟರ್‌ ಬಳಕೆದಾರರು ಬಿಸಿ ಮುಟ್ಟಿಸಿದ್ದಾರೆ.

 ಚಿನ್ನದ ಹುಡುಗಿ ಹಿಮಾ ದಾಸ್‌ಳ ಬೆನ್ನು ತಟ್ಟಿದ ಮೋದಿ, ತೆಂಡೂಲ್ಕರ್, ಪಂತ್ ಚಿನ್ನದ ಹುಡುಗಿ ಹಿಮಾ ದಾಸ್‌ಳ ಬೆನ್ನು ತಟ್ಟಿದ ಮೋದಿ, ತೆಂಡೂಲ್ಕರ್, ಪಂತ್

ಸದ್ಗುರು ತಮ್ಮ ಟ್ವೀಟ್‌ನಲ್ಲಿ ಬಳಕೆ ಮಾಡಿರುವ 'ಗೋಲ್ಡನ್‌ ಶವರ್‌' ಪದ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಹಿಗ್ಗಾಮಗ್ಗ ಟ್ರೋಲ್‌ ಶುರುವಾಗಿದೆ. ಅಂದಹಾಗೆ 'ಗೋಲ್ಡನ್‌ ಶವರ್‌' ಪದಕ್ಕೆ ಅಸಭ್ಯ ಅರ್ಥವೊಂದಿದ್ದು, ಸ್ಥಳೀಯ ಬಳಕೆಯಲ್ಲಿ ಲೈಂಗಿಕಕ್ರಿಯೆ ನಡೆಸುವ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಈ ರೀತಿ ಕರೆಯಲಾಗುತ್ತದೆ.

ಎಲ್ಲವನ್ನೂ ಬಲ್ಲವರಾಗಿರುವ ಸದ್ಗುರುಗೆ ಇಷ್ಟು ಸೂಕ್ಷ್ಮತೆ ಯಾಕೆ ಅರ್ಥವಾಗಲಿಲ್ಲ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದ್ದು, ಸದ್ಗುರುವಿಂದ ಇಂಥದ್ದೊಂದು ಎಡವಟ್ಟನ್ನು ನಿರೀಕ್ಷಿಸಿರಲಿಲ್ಲ ಎಂದು ಜರಿಯಲಾರಂಭಿಸಿದ್ದಾರೆ.

ಅಥ್ಲೆಟಿಕ್ಸ್: ಭಾರತಕ್ಕೆ 5ನೇ ಬಂಗಾರ ಗೆದ್ದ ಚಿನ್ನದ ಹುಡುಗಿ ಹಿಮಾ ದಾಸ್ಅಥ್ಲೆಟಿಕ್ಸ್: ಭಾರತಕ್ಕೆ 5ನೇ ಬಂಗಾರ ಗೆದ್ದ ಚಿನ್ನದ ಹುಡುಗಿ ಹಿಮಾ ದಾಸ್

ಹಿಮಾ ದಾಸ್‌, ಕಳೆದ ಶನಿವಾರ ಪ್ರಾಗ್‌ನಲ್ಲಿ ನಡೆದ ನ ಅಥ್ಲೆಟಿಕ್ಸ್‌ ಕೂಟವೊಂದರಲ್ಲಿ 400 ಮೀ. ಓಟವನ್ನು 52.09 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಕಳೆದ ಒಂದು ತಿಂಗಳ ಅವಧಿಯಲ್ಲಿ ತಮ್ಮ 5ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಈ ವಿಭಾಗದಲ್ಲಿ ಅವರ ಶ್ರೇಷ್ಠ ಸಾಧನೆ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಹೊರಬಂದಿದ್ದು, 50.79 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು.

15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಚಿನ್ನ ಗೆದ್ದ ಅಥ್ಲೀಟ್ ಹಿಮಾ ದಾಸ್15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಚಿನ್ನ ಗೆದ್ದ ಅಥ್ಲೀಟ್ ಹಿಮಾ ದಾಸ್

ಅಸ್ಸಾಮ್‌ ಮೂಲದ ಭವಿಷ್ಯದ ಸ್ಪ್ರಿಂಟ್‌ ತಾರೆ ಹಿಮಾ, ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಟಿಕೆಟ್‌ ಸಲುವಾಗಿ ಅವರು 51.80 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಬೇಕಿತ್ತು.

Story first published: Friday, July 26, 2019, 14:05 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X