ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಂಚಿನ ಪದಕ ಗೆದ್ದ ಸಾಕ್ಷಿ ಸಾಧನೆ ಹಿಂದಿನ ಕಥೆ

By ಕ್ರೀಡಾ ಡೆಸ್ಕ್

ರಿಯೋ ಒಲಿಂಪಿಕ್ಸ್ ನ ಕಂಚಿನ ಪದಕ ಪಡೆದು ಇತಿಹಾಸ ನಿರ್ಮಿಸಿದ ಸಾಕ್ಷಿ ಮಲಿಕ್ ಕುಸ್ತಿ ವೃತ್ತಿಜೀವನಕ್ಕೆ ಕರೆತಂದು ಪ್ರೋತ್ಸಾಹಿಸಿದ್ದು ಅಕೆಯ ಪೋಷಕರಾದ ಸುದೇಶ್ ಹಾಗೂ ಸುಕ್ಬೀರ್. ಈ ಪೋಷಕರ ಆಸೆಯ ಚಿಗುರನ್ನು ಹೆಮ್ಮೆರವಾಗುವಂತೆ ಬೆಳೆಸಿದ ಕೀರ್ತಿ ಕೋಚ್ ಈಶ್ವರ್ ಸಿಂಗ್ ದಾಹಿಯಾರಿಗೆ ಸಲ್ಲುತ್ತದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರೋಹ್ಟಕ್ ಹತ್ತಿರವಿರುವ ಪುಟ್ಟಗ್ರಾಮ ಮೊಖರದ ಚೋಟು ರಾಮ್ ಕುಸ್ತಿ ಅಕಾಡೆಮಿ ಸ್ಟೇಡಿಯಂಗೆ ಪ್ರತಿದಿನ ಬೆಳಗ್ಗೆ ತನ್ನ ತಾಯಿ ಸುದೇಶ್ ಜೊತೆ ಕುಸ್ತಿ ಅಭ್ಯಾಸ ಮಾಡಲು ಸಾಕ್ಷಿ ಬರುತ್ತಿದ್ದರು. [ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಆಗಿನ್ನು ಸಾಕ್ಷಿಗೆ ಕೇವಲ 10 ವರ್ಷಗಳು ಮಾತ್ರ. ಚೋಟು ರಾಮ್ ಸ್ಟೇಡಿಯಂ ಸಾಕ್ಷಿ ಅವರ ಅಭ್ಯಾಸದ ಅಖಾಡವಾಗಿತ್ತು. ಸಾಕ್ಷಿ ಅವರನ್ನು ಗಂಡು ಹುಡುಗರ ಜೊತೆ ಕುಸ್ತಿಯಾಡಿಸುವ ಮೂಲಕ ತರಬೇತಿಯನ್ನು ನೀಡಲಾಗುತ್ತಿತ್ತು. [12 ವರ್ಷಗಳ ನನ್ನ ತಪಸ್ಸಿಗೆ ಈಗ ಫಲ ಸಿಕ್ಕಿದೆ: ಸಾಕ್ಷಿ]

Sakshi Malik has done her village Mokhra and whole India proud: coach Ishwar Singh Dahiya

ಹೆಣ್ಮಗಳಾಗಿ ಸಾಕ್ಷಿ ಯುವಕರು ಅಭ್ಯಾಸ ನಡೆಸುವಲ್ಲಿ ಬರುವುದು ಸೂಕ್ತವಲ್ಲ ಎನ್ನುವ ಅನೇಕರ ಆಕ್ಷೇಪದ ನಡುವೆಯೂ ಕೋಚ್ ಸಹಕಾರದಿಂದ ಅಭ್ಯಾಸದಿಂದ ಈ ಸಾಧನೆ ಮಾಡಿ ತೋರಿಸಿದ್ದಾರೆ.[ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

ಹರ್ಯಾಣದಲ್ಲಿ ಹುಡುಗಿಯರು ಕುಸ್ತಿಯಲ್ಲಿ ಸಾಧನೆ ಮಾಡಲು ಅಂಥಾ ಪ್ರೋತ್ಸಾಹ ಕೂಡಾ ಇರದ ಪರಿಸ್ಥಿತಿಯಲ್ಲಿ ಕೋಚ್ ಈಶ್ವರ್ ಅವರು ಸಾಕ್ಷಿಯನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. [ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ]

ಇಂದು ಸಾಕ್ಷಿ ಅವರು ಯುವಕರು ನಾಚಿಕೊಳ್ಳುವಂತಹ ಪ್ರದರ್ಶನ ನೀಡಿ ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದಾರೆ. ಎಂದು ಕೋಚ್ ಈಶ್ವರ್ ಸಿಂಗ್ ದಾಹಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.

Sakshi Malik has done her village Mokhra and whole India proud: coach Ishwar Singh Dahiya

ಈಶ್ವರ್ ಸಿಂಗ್ ದಾಹಿಯಾ ಅವರ ಅಡಿಯಲ್ಲಿ ಸಕತ್ ಆಗಿ ಪಳಗಿದ ಸಾಕ್ಷಿ ಮೊದಲ ಬಾರಿಗೆ 2006ರಲ್ಲಿ ನಡೆದ ಏಷ್ಯನ್ ಸಬ್ ಜೂನಿಯರ್ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಯಶಸ್ವಿ ಕಂಡರು. [ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸಾಕ್ಷಿ ತನಕ]

ನಂತರ ಅಂದಿನ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಜಿಎಸ್ ಮಂದಿರ್ ಅವರು ಸಾಕ್ಷಿಯವರನ್ನು ಆಗಿನ ಕುಸ್ತಿ ಸ್ಪರ್ಧಿಗಳಾಗಿದ್ದ ಗೀತಾ ಮತ್ತು ಅನೀತಾ ಹಾಗು ಕೋಚ್ ಮಲಿಕ್ ಅವರ ಒಳಗೊಂಡ ಕುಸ್ತಿ ಫೆಡರೇಶನ್ ಕ್ಯಾಂಪ್ ಗೆ ಸೇರಿಸಿಕೊಂಡರು.

ಗೀತಾ ನನಗೆ ಸ್ಫೂರ್ತಿ: ಅಂದಿನಿಂದ ಬೆಳಕಿಗೆ ಬಂದ ಸಾಕ್ಷಿ 12 ವರ್ಷಗಳ ನಿರಂತರ ಅಭ್ಯಾಸದಿಂದ ಈ ಪದಕ ಸಾಧನೆ ಮಾಡಲು ಸಾಧ್ಯವಾಗಿದೆ. ಕಂಚಿನ ಪದಕ ಗೆದ್ದ ಬಳಿಕ ಗೀತಾ ಫೋಗಟ್ ಅಕ್ಕ ಮಾಡಿದ ಸಾಧನೆ ನನಗೆ ಸ್ಫೂರ್ತಿಯಾಗಿದೆ ಎಂದು ಸಾಕ್ಷಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. [ಸಾಕ್ಷಿ ಸಾಧನೆಗೆ ಬಹುಪರಾಕ್ ಎಂದ ಪ್ರಧಾನಿ ಮೋದಿ]

Sakshi Malik has done her village Mokhra and whole India proud: coach Ishwar Singh Dahiya

ಗೀತಾ ಸಾಧನೆಯ ಸಂಪೂರ್ಣ ವಿವರ ನೋಡಿ:
* 2010ರಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್​ಷಿಪ್​ನ 59ಕೆಜಿ ವಿಭಾಗದ ಕುಸ್ತಿಯಲ್ಲಿ ಜಯ ಸಾಧಿಸಿ, ಕಂಚು ಗೆದ್ದುಕೊಂಡಿದ್ದರು. ಆಗ ಸಾಕ್ಷಿಗೆ 18 ವರ್ಷ.

* 2014ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕುಸ್ತಿಗೆ ಪದಾರ್ಪಣೆ ಮಾಡಿ, ಡೇವ್ ಸುಲ್ತಾಜ್ ಅಂತಾರಾಷ್ಟ್ರೀಯ ಕುಸ್ತಿ ಟೂನಿಯ 60 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು.

* 2014, ಜುಲೈ- ಆಗಸ್ಟ್​ನಲ್ಲಿ ಗ್ಲಾಸ್​ಗೋನಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ವೃತ್ತಿಪರ ಅಂತಾರಾಷ್ಟ್ರೀಯ ಕುಸ್ತಿಪಟುವಾಗಿ ಪಾಲ್ಗೊಂಡಿದ್ದ ಸಾಕ್ಷಿ ಬೆಳ್ಳಿ ಗೆದ್ದುಕೊಂಡಿದ್ದರು.

* ತಾಷ್ಕೆಂಟ್​ನಲ್ಲಿ 2014,ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನ ಕ್ವಾರ್ಟರ್ ಫೈನಲ್ ಪ್ರವೇಶಿಸಿ ನಿರ್ಗಮಿಸಿದರು.

Sakshi Malik has done her village Mokhra and whole India proud: coach Ishwar Singh Dahiya

* 2015, ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

* 2016ರ ಜುಲೈನಲ್ಲಿ ನಡೆದ ಸ್ಪಾನೀಷ್ ಗ್ರ್ಯಾಂಡ್ ಪ್ರೀ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು,
* ರಿಯೋ ಒಲಿಂಪಿಕ್ಸ್​ 2016ರಲ್ಲಿ ಕಂಚು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X