ಅಜರುದ್ದೀನ್ ಮಗನ ಜತೆ ಸಾನಿಯಾ ಮಿರ್ಜಾ ತಂಗಿ ಮದುವೆ

ಹೈದರಾಬಾದ್, ಅಕ್ಟೋಬರ್ 8: ಟೆನ್ನಿಸ್ ಪಟು ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಮತ್ತೆ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಮಗ ಅಸದ್ ಜತೆ.

ಅನಮ್ ಮಿರ್ಜಾ ಮದುವೆ ಕುರಿತಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದವು. ಅದಕ್ಕೆ ತೆರೆಬಿದ್ದಿದೆ. ಈಗ ಸಾನಿಯಾ ಕುಟುಂಬದಿಂದ ಅಧಿಕೃತವಾಗಿ ಹೇಳಿಕೆ ಹೊರಬಿದ್ದಿದ್ದು, ಅಜರ್ ಮಗನೊಂದಿಗೆ ಅನಮ್ ಹೊಸ ಬದುಕು ಆರಂಭಿಸಲಿದ್ದಾರೆ. ಅನಮ್ ವೃತ್ತಿಯಿಂದ ಫ್ಯಾಷನ್ ಸ್ಟೈಲಿಸ್ಟ್ ಆಗಿದ್ದಾರೆ.

ಅಪರೂಪದ ದಾಖಲೆ ಬರೆದ ಜಡೇಜ ಮರೆತ ಸೆಹ್ವಾಗ್ ಗೆ ಟ್ವೀಟ್ ಟಾಂಗ್!

'ಆಕೆ ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿದ್ದಾಳೆ. ಆಕೆಯ ಕೊನೆಯ ಬ್ಯಾಚುಲರ್ ಜೀವನದ ಪ್ರವಾಸವನ್ನು ಪ್ಯಾರಿಸ್‌ನಲ್ಲಿ ಮುಗಿಸಿ ಬಂದಿದ್ದೇವೆ. ಮದುವೆ ವಿಚಾರಕ್ಕೆ ನಾವು ತುಂಬು ಉತ್ಸುಕರಾಗಿದ್ದೇವೆ' ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

'ಅವಳು ಮುದ್ದಾದ ಹುಡುಗನನ್ನು ವರಿಸುತ್ತಿದ್ದಾಳೆ. ಆತನ ಹೆಸರು ಅಸದ್. ಆತ ಮೊಹಮ್ಮದ್ ಅಜರುದ್ದೀನ್ ಅವರ ಮಗ. ಈ ಬಗ್ಗೆ ನಾವು ನಿಜಕ್ಕೂ ಎಕ್ಸೈಟ್ ಆಗಿದ್ದೇವೆ' ಎಂದಿದ್ದಾರೆ.

ಇನ್‌ಸ್ಟಾದಲ್ಲಿ ಬ್ರೈಡ್ ಟು ಬಿ ಫೋಟೊ

ಇನ್‌ಸ್ಟಾದಲ್ಲಿ ಬ್ರೈಡ್ ಟು ಬಿ ಫೋಟೊ

ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಅನಮ್ ಹಂಚಿಕೊಂಡಿದ್ದರು. ಅದರಲ್ಲಿ ಕೊಠಡಿಯನ್ನು ಬಲೂನುಗಳಿಂದ ಸಿಂಗರಿಸಿದ್ದು, ಕಿಟಕಿ ಗಾಜಿನ ಮೇಲೆ 'ಬ್ರೈಡ್ ಟು ಬಿ' ಎಂದು ಬರೆಯಲಾಗಿತ್ತು. ಅನಮ್ ಅವರು ವಿವಾಹ ಬಂಧನಕ್ಕೆ ಒಳಪಡಲು ಸಿದ್ಧತೆ ನಡೆಸಿದ್ದಾರೆ ಎಂಬ ಸೂಚನೆ ಸಿಕ್ಕಿತ್ತು. ಆದರೆ ಯಾರೊಂದಿಗೆ ಮದುವೆ ಎನ್ನುವುದು ಬಹಿರಂಗವಾಗಿರಲಿಲ್ಲ. ಅಸದ್ ಜತೆಗಿರುವ ಫೋಟೊಗಳು ಈ ಬಗ್ಗೆ ಸುಳಿವು ನೀಡಿದ್ದವು.

ಅನಮ್‌ಗೆ ಶುಭಾಶಯ

ಅನಮ್‌ಗೆ ಶುಭಾಶಯ

ಅನಮ್ ಹಂಚಿಕೊಂಡಿದ್ದ ಆ ಫೋಟೊ ಅವರ ಬ್ಯಾಚುಲರ್ ಜೀವನದ ಸಂಭ್ರಮದ ಗಳಿಗೆಯದಾಗಿತ್ತು. ಡಿಸೆಂಬರ್‌ನಲ್ಲಿ ಇಬ್ಬರು ಮದುವೆಯಾಗುತ್ತಿದ್ದಾರೆ ಎಂದು ಸಾನಿಯಾ ಖಚಿತಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನಮ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಾಜಿ ನಾಯಕ ಎಂಎಸ್ ಧೋನಿ ವೃತ್ತಿ ಬದುಕು ಮಸುಕು ಮಸುಕು!

ಫರಾಹ್ ಖಾನ್ ಫೋಟೊ

ಫರಾಹ್ ಖಾನ್ ಫೋಟೊ

ಅಸದ್ ಎಂದೇ ಗುರುತಿಸಿಕೊಂಡಿರುವ ಮೊಹಮದ್ ಅಸದುದ್ದೀನ್ ಮತ್ತು ಅನಮ್ ಇಬ್ಬರೂ ತಾವು ಒಟ್ಟಿಗಿರುವ ಅನೇಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇವು ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಸಾನಿಯಾ ಆಪ್ತರಾಗಿರುವ ಸಿನಿಮಾ ನಿರ್ದೇಶಕಿ ಫರಾಹ್ ಖಾನ್ ಕೂಡ ಮದುಮಗಳೊಂದಿಗಿನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡನೆಯ ಮದುವೆ

ಎರಡನೆಯ ಮದುವೆ

ಅಂದಹಾಗೆ, ಇದು ಅನಮ್ ಮಿರ್ಜಾ ಅವರ ಎರಡನೆಯ ಮದುವೆ. 2016ರ ನವೆಂಬರ್ 18ರಂದು ಅವರು ಉದ್ಯಮಿ ಅಕ್ಬರ್ ರಶೀದ್ ಜತೆ ಮದುವೆಯಾಗಿದ್ದರು. ಎರಡೇ ವರ್ಷದಲ್ಲಿ ಅವರ ದಾಂಪತ್ಯ ಜೀವನ ಅಂತ್ಯಗೊಂಡಿತ್ತು. ಅವರ ಮೊದಲ ಮದುವೆಯಲ್ಲಿ ಸಲ್ಮಾನ್ ಖಾನ್, ಪರಿಣೀತಿ ಚೋಪ್ರಾ, ಫಾರಾಹ್ ಖಾನ್, ಹುಮಾ ಖುರೇಷಿ, ಲಾರಾ ದತ್ತಾ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಮುತ್ತಯ್ಯ ಸಮಕ್ಕೆ ನಿಂತು 350 ವಿಕೆಟ್ ಕ್ಲಬ್ ಸೇರಿದ ರವಿಚಂದ್ರನ್ ಅಶ್ವಿನ್

For Quick Alerts
ALLOW NOTIFICATIONS
For Daily Alerts
Story first published: Tuesday, October 8, 2019, 13:26 [IST]
Other articles published on Oct 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X