ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಲೇಶಿಯನ್ ಓಪನ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಗೆದ್ದು ದಾಖಲೆ ಬರೆದ ಭಾರತದ ಸೌರವ್ ಘೋಸಲ್

Saurav Ghosal Historical achievement won malaysian open squash championships

ಭಾರತದ ಸ್ಕ್ವಾಶ್ ತಾರೆ ಸೌರವ್ ಘೋಸಲ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಮಲೇಶಿಯನ್ ಓಪನ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಉನ್ನತ ಶ್ರೇಯಾಂಕದ ಮೈಗುವೆಲ್ ರೋಡ್ರಿಗಸ್ ವಿರುದ್ಧ ಗೆದ್ದು ಚಾಂಪಿಯನ್ ಎನಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಸಿಸಿದ್ದಾರೆ ಸೌರವ್ ಘೋಸಲ್.

ಭಾರತದ ಪ್ರಮುಖ ಸ್ಕ್ವಾಶ್ ಆಟಗಾರನಾಗಿರುವ ಸೌರವ್ ಘೋಸಲ್ ಅಮೋಘ ಆಟವನ್ನು ಪ್ರದರ್ಶಿಸುವ ಮೂಲಕ ಅಗ್ರ ಶ್ರೇಯಾಂಕಿತ ಆಟಗಾರನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕೊಲಂಬಿಯಾದ ರೋಡ್ರಿಗಸ್ ವಿರುದ್ಧ 11-7, 11-8, 13-11 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಈ ಪ್ರತಿಷ್ಠಿತ ಟೂರ್ನಿಯ ಚಾಂಪಿಯನ್‌ಶಿಪ್‌ ಗೆದ್ದ ಪ್ರಥಮ ಭಾರತೀಯ ಎನಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!

ಈ ಸಾಧನೆಯ ಬಳಿಕ ಸೌರವ್ ಘೋಸಲ್ ಪ್ರತಿಕ್ರಿಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. "ಖಂಡಿತವಾಗಿಯೂ ಇದು ಅದ್ಭುತವಾದ ಅನುಭವವಾಗಿದೆ. ಈ ಹಾದಿಯಲ್ಲಿ ನಾನು ಕೆಲ ಅತ್ಯುತ್ತಮ ಆಟಗಾರರ ವಿರುದ್ಧ ಗೆಲುವು ಸಾಧಿಸಿದ್ದೇನೆ" ಎಂದಿದ್ದಾರೆ ಸೌರವ್. ಕೌಲಲಾಂಪುರದಲ್ಲಿ ನಡೆದ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೌರವ್ ಘೋಸಲ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

"ಫೈನಲ್ ಪಂದ್ಯ ಮಾತ್ರ ತುಂಬಾ ಉತ್ಕೃಷ್ಟ ಮಟ್ಟದ ಪಂದ್ಯವಾಗಿತ್ತು. ಮೂರನೇ ಪಂದ್ಯದ ರೀತಿಯಲ್ಲಿಯೇ ಇದು ಇತ್ತು. ಎರಡನೆಯದ್ದು ಕೂ ಬಹಳ ಕಠಿಣವಾಗಿತ್ತು. ನಾನು 0-7ರಿಂದ ಹಿನ್ನಡೆಯಲ್ಲಿದ್ದೆ. ಈ ಗೆಲುವು ನನ್ನ ಎಲ್ಲಾ ಪರಿಶ್ರಮಕ್ಕೆ ದೊರೆತ ಫಲವಾಗಿದೆ" ಎಂದು ವಿಶ್ವದ 15ನೇ ಶ್ರೇಯಾಂಕಿತ ಆಟಗಾರ ಸೌರವ್ ಘೋಸಲ್ ಗೆಲುವಿನ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Story first published: Sunday, November 28, 2021, 14:38 [IST]
Other articles published on Nov 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X