ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಕ್ರೀಡಾಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ: ಆಘಾತಕಾರಿ ಆರ್‌ಟಿಐ ಮಾಹಿತಿ ಬಹಿರಂಗ!

Sexual Harassment Cases In Sports Authority Of India’s Training Centre

ಲೈಂಗಿಕ ದೌರ್ಜನ್ಯ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಕ್ರೀಡಾ ಲೋಕವೂ ಈ ನಾಚಿಕೆಗೇಡಿನ ಸಂಗತಿಗಳಿಂದ ಹೊರತಾಗಿಲ್ಲ. ಸರ್ಕಾರಿ ಸ್ವಾಮ್ಯದ ಕ್ರೀಡಾ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣ ಹೆಚ್ಚಾಗಿದೆ ಎನ್ನುವುದಕ್ಕೆ ಆರ್‌ಟಿಐ ದಾಖಲೆ ಸಾಕ್ಷಿ ಹೇಳುತ್ತಿದೆ.

ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಲೈಂಗಿ ದೌರ್ಜನ್ಯ ಪ್ರಕರಣಕ್ಕೆ ಬಂದಂಧ ಪಟ್ಟಂತೆ ದಾಖಲಾಗಿರುವ ಪ್ರಕರಣಗಳ ಕುರಿತಾಗಿ "ದಿ ಇಂಡಿಯನ್ ಎಕ್ಸ್‌ಪ್ರೆಸ್" ಪತ್ರಿಕೆ ಆರ್‌ಟಿಐ ಮೂಲಕ ಮಾಹಿತಿಯನ್ನು ಕೇಳಿತ್ತು. ಕಳೆದ ಒಂದು ದಶಕದ ಅವಧಿಯ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆಯಲಾಗಿದ್ದು ಬಂದ ಉತ್ತರ ಆಘಾತ ನೀಡುವಂತಿದೆ.

ಏಷ್ಯಾಕಪ್ ಆತಿಥ್ಯ ಪಾಕಿಸ್ತಾನಕ್ಕಿಲ್ಲ: ಕಾರಣ ಭಾರತ !ಏಷ್ಯಾಕಪ್ ಆತಿಥ್ಯ ಪಾಕಿಸ್ತಾನಕ್ಕಿಲ್ಲ: ಕಾರಣ ಭಾರತ !

ಸರ್ಕಾರಿ ಸ್ವಾಮ್ಯದ ವಿವಿಧ 24 ಸಂಸ್ಥೆಗಳಲ್ಲಿ ಕಳೆದ 10 ವರ್ಷಗಳಲ್ಲಿ ಕನಿಷ್ಠ 45 ಪ್ರಕರಣ ದಾಖಲಾಗಿದೆ ಎಂದು ಈ ವರದಿ ಬಹಿರಂಗಪಡಿಸುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ವರ್ಗಾವಣೆ, ವೇತನ ಅಥವಾ ಪಿಂಚಣಿಯಲ್ಲಿ ಕಡಿತದಂತಾ ಸಾಮಾನ್ಯ ಕನಿಷ್ಠ ಶಿಕ್ಷೆಯೊಂದಿಗೆ ಪಾರಾಗುತ್ತಿದ್ದಾರೆ.

ಇದಕ್ಕಿಂತಲೂ ಆಘಾತಕಾರಿ ವಿಚಾರವೇನೆಂದರೆ ಇದರಲ್ಲಿ 12ಕ್ಕೂ ಹೆಚ್ಚು ಪ್ರಕರಣ ವರ್ಷಾನುಗಟ್ಟಲೆ ಯಾವುದೇ ತೀರ್ಮಾನವಾಗದೆ ಪ್ರಕರಣವನ್ನು ಎಳೆಯಲಾಗುತ್ತಿದೆ. ಈ ಮೂಲಕ ದೌರ್ಜನ್ಯಕ್ಕೊಳಗಾದವರನ್ನೇ ಮತ್ತಷ್ಟು ಶಿಕ್ಷೆಗೊಳಪಡಿಸಿದಂತಾಗುತ್ತಿದೆ.

ಅದೃಷ್ಟವಿಲ್ಲದ ಅಂಗಳದಲ್ಲಿ ಅದೃಷ್ಟ ಹುಡುಕಲು ಹೊರಟ ಭಾರತಅದೃಷ್ಟವಿಲ್ಲದ ಅಂಗಳದಲ್ಲಿ ಅದೃಷ್ಟ ಹುಡುಕಲು ಹೊರಟ ಭಾರತ

ಆರ್‌ಟಿಐ ಮಾಹಿತಿಯ ಪ್ರಕಾರ 45 ಪ್ರಕರಣಗಳಲ್ಲಿ 25 ಪ್ರಕರಣ ಕೋಚ್‌ಗಳ ವಿರುದ್ಧವೇ ದಾಖಲಾಗಿದೆ. ಜಿಮ್ನ್ಯಾಸ್ಟಿಕ್, ಆ್ಯಥ್ಲಿಟಿಕ್ಸ್, ವೈಟ್‌ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ರೆಸ್ಲಿಂಗ್‌ನಂತಾ ವಿಭಾಗಗಳಲ್ಲಿ ಇದು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ನೀಲಮ್ ಕಪೂರ್ ಪ್ರತಿಕ್ರಿಯಿಸಿದ್ದು 'ವಾಸ್ತವದಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಆದರೆ ಕಾರಣಾಂತರಗಳಿದ್ದ ಈ ಪ್ರಖರಣಗಳು ದಾಖಲಾಗದೆ ಮುಚ್ಚಿ ಹೋಗುತ್ತಿವೆ ಎಂದು ಹೇಳಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರು ಪ್ರಕರಣ ದಾಖಲಿಸಲು ಹಿಂಜರಿಯುತ್ತಾರೆ ಎಂದು ಹೇಳಿದ್ದಾರೆ

Story first published: Sunday, May 3, 2020, 10:59 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X