ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಎನ್‌ಬಿಎ 2019 ಏಷ್ಯಾ ಪೆಸಿಫಿಕ್ ಚಾಂಪಿಯನ್‌ಷಿಪ್ ಗೆದ್ದ ಶೆಲ್ಲಿ ಅರೋರ

Shelly Arora won the Asia Pacific Championship at INBA 2019

ಬೆಂಗಳೂರು, ಆಗಸ್ಟ್ 2: ಮಾಂಸಖಂಡಗಳು ಮತ್ತು ಸಿಕ್ಸ್ ಪ್ಯಾಕ್ಸ್ ಕೂಡ ಮಹಿಳೆಯರ ಗುಣಲಕ್ಷಣವಾಗಬಹುದು. ಇದನ್ನೇ ಸ್ಫೂರ್ತಿನ್ನಾಗಿಸಿಕೊಂಡಿರುವ ಮಾರ್ಕೆಟಿಂಗ್ ಕ್ಷೇತ್ರದ ಹಿರಿಯ ವೃತ್ತಿಪರರಾದ 40ರ ಹರೆಯದ ಶೆಲ್ಲಿ ಅರೋರಾ, ಇಂಟರ್ ನ್ಯಾಷನಲ್ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ (ಐಎನ್‌ಬಿಎ) 2019ರ ಏಷ್ಯಾ ಪೆಸಿಫಿಕ್ ಚಾಂಪಿಯನ್‌ಷಿಪ್‌ನ ಮಹಿಳಾ ಫಿಸಿಕ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XIವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ಬೆಂಗಳೂರಿನಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶೆಲ್ಲಿ, 'ಬಾಡಿಬಿಲ್ಡಿಂಗ್ ಎಂಬುದು ಈಗಲೂ ಕೂಡ ಪುರುಷ ಪ್ರಧಾನ ವಿಚಾರವಾಗಿದೆ. ಹೀಗಾಗಿ ಭಾರತದ ಮಹಿಳೆಯರಲ್ಲಿ ಬಾಡಿಬಿಲ್ಡಿಂಗ್ ಬಗ್ಗೆ ಆಸಕ್ತಿ ತೀರಾ ಅಪರೂಪವೆಂಬಂತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ವಯೋವರ್ಗದ ಮಹಿಳೆಯರು ಬಾಡಿಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಾಡಿಬಿಲ್ಡಿಂಗ್ ವೃತ್ತಿಪರತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಡಿ ಬಿಲ್ಡಿಂಗ್‌ನಲ್ಲಿ ನನ್ನ ಪಾಲ್ಗೊಳ್ಳುವಿಕೆ ಭಾರತದಲ್ಲಿ ಬದಲಾವಣೆಗೆ ಸಾಧ್ಯವಾಗಲಿ ಎಂದು ಆಶಿಸುತ್ತೇನೆ,' ಎಂದರು.

ವಿಶ್ವಕಪ್‌ ಸೆ.ಫೈನಲ್‌ನಲ್ಲಿ ಧೋನಿ ನಂ.7ರಲ್ಲಿ ಬಂದಿದ್ದರ ಸತ್ಯ ಬಿಚ್ಚಿಟ್ಟ ಬಂಗಾರ್!ವಿಶ್ವಕಪ್‌ ಸೆ.ಫೈನಲ್‌ನಲ್ಲಿ ಧೋನಿ ನಂ.7ರಲ್ಲಿ ಬಂದಿದ್ದರ ಸತ್ಯ ಬಿಚ್ಚಿಟ್ಟ ಬಂಗಾರ್!

'ಪ್ರತಿಯೊಬ್ಬ ಮಹಿಳೆಗೂ ತನ್ನೊಳಗಿನ ಸಾಮರ್ಥ್ಯ ಅರಿವಾಗಲಿ ಎಂದು ಬಯಸುತ್ತೇನೆ. ತಮ್ಮೊಳಗಿನ ತುಡಿತವನ್ನು ಅರಿತು ಅದರತ್ತ ಸಾಗುವಂತಾಗಲಿ. ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದುಕುವುದು ದೂರವಾಗಬೇಕು,' ಎಂದು ಶೆಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಆರೋಗ್ಯ ಸಮಸ್ಯೆಗೆ ತಲೆ ಬಾಗಲಿಲ್ಲ

ಆರೋಗ್ಯ ಸಮಸ್ಯೆಗೆ ತಲೆ ಬಾಗಲಿಲ್ಲ

ಹಲವು ಆರೋಗ್ಯ ಸಮಸ್ಯೆಗಳ ನಡುವೆ, ಪುರುಷ ಪ್ರಧಾನ ಸಮಾಜದ ಹಲವು ಸವಾಲುಗಳನ್ನು ಮೆಟ್ಟಿನಿಂತು, ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು ಕೂಡ ಈ ಚಾಂಪಿಯನ್‌ಷಿಪ್ ಗೆದ್ದಿರುವ ಶೆಲ್ಲಿ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ. ಸ್ವಯಂ-ನಿರೋಧಕ ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ಶೆಲ್ಲಿ ಅವರಿಗೆ 2017ರಲ್ಲಿ ವೈದ್ಯರು ಯಾವುದೇ ರೀತಿಯ ಕಠಿಣ ವ್ಯಾಯಾಮಗಳನ್ನು ಮಾಡದೇ ಇರುವಂತೆ ಸಲಹೆ ನೀಡಿದ್ದರು.

ಕುಟುಂಬಸ್ಥರ ಸ್ಫೂರ್ತಿ

ಕುಟುಂಬಸ್ಥರ ಸ್ಫೂರ್ತಿ

'ಭಾರ ಎತ್ತಬಾರದೆಂದು ನನ್ನ ವೈದ್ಯರು ಸಲಹೆ ನೀಡಿದ್ದರು. ಅಷ್ಟೇ ಅಲ್ಲ, ಯಾವುದೇ ರೀತಿಯ ಕಠಿಣ ವ್ಯಾಯಾಮಗಳನ್ನು ಮಾಡದೇ ಇರುವಂತೆ ಸೂಚಿಸಿದ್ದರು. ಇದರಿಂದ ಬಹಳ ಖಿನ್ನತೆಗೆ ಒಳಗಾಗಿದ್ದೆ. ನನ್ನ ಆತ್ಮವಿಶ್ವಾಸ ಕುಗ್ಗಲು ಆರಂಭಿಸಿತ್ತು. ಆದರೆ ನನಗೆ ನನ್ನ ಕುಟುಂಬದ ಸದಸ್ಯರು ಆತ್ಮವಿಶ್ವಾಸ ತುಂಬಿದ್ದರು. ನಿಧಾನವಾಗಿ ವ್ಯಾಯಾಮ ಆರಂಭಿಸುವಂತೆ ಪ್ರೇರೇಪಿಸಿದರು. ಇದರಿಂದ ನನ್ನೆಲ್ಲಾ ಅಂಜಿಕೆಗಳನ್ನು ಬದಿಗಿರಿಸಿ ನಾನು ಮತ್ತೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯ್ತು,' ಎಂದು ಅರೋರಾ ವಿವರಿಸಿದರು.

ಇನ್ನಷ್ಟು ಸಾಧಿಸುವ ತುಡಿತ

ಇನ್ನಷ್ಟು ಸಾಧಿಸುವ ತುಡಿತ

ಕಳೆದ 17 ವರ್ಷಗಳಿಂದ ಕಾರ್ಪೋರೇಟ್ ಜಗತ್ತಿನಲ್ಲಿ ವಿವಿಧ ಸಂಸ್ಥೆಗಳಲ್ಲಿ ಶೆಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆ್ಯಪಲ್, ಸ್ಯಾಮ್‌ಸಂಗ್‌ನಂತಹ ದೈತ್ಯ ಟೆಲಿಕಾಮ್ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಸದ್ಯ ಅತ್ಯಂತ ಮುಂಚೂಣಿಯಲ್ಲಿರುವ ಟೆಲಿಕಾಮ್ ಸಂಸ್ಥೆಯೊಂದರಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ ಶೆಲ್ಲಿ, ಆರೋಗ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ತುಡಿತ ಹೊಂದಿದ್ದಾರೆ.

ತುಡಿತವಿದ್ದರೆ ಸಾಧನೆ

ತುಡಿತವಿದ್ದರೆ ಸಾಧನೆ

ಮಾತು ಮುಂದುವರೆಸಿದ ಶೆಲ್ಲಿ ಅರೋರಾ, 'ಈ ಚಾಂಪಿಯನ್‌ಶಿಪ್‌ ಗೆಲುವು ನನ್ನೊಳಗೆ ದೃಢ ಆತ್ಮವಿಶ್ವಾಸವನ್ನು ತುಂಬಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಫೂರ್ತಿ ನೀಡಿದೆ. ನಿಮ್ಮೊಳಗೂ ತುಡಿತವಿದ್ದಲ್ಲಿ ಮಾತ್ರ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಸದಾ ನಂಬುತ್ತೇನೆ,' ಎಂದಿರು. ಶೆಲ್ಲಿ ಅವರಿಗೆ ಗ್ಲೋಬಲ್ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿನ ಸಾಧನೆಗಾಗಿ 2019ರ ಟೈಮ್ಸ್ ಪವರ್ ವಿಮೆನ್ ಪ್ರಶಸ್ತಿಯೂ ಲಭಿಸಿದೆ.

ಬಿಕಿನಿ ತೊಟ್ಟು ವೇದಿಕೆಯೇರಲು ಅಂಜಿದ್ದೆ

ಬಿಕಿನಿ ತೊಟ್ಟು ವೇದಿಕೆಯೇರಲು ಅಂಜಿದ್ದೆ

'ನಾನು ಕಾರ್ಪೊರೇಟ್ ಜಗತ್ತಿಗೆ ಸೇರಿದವಳು. ಹೀಗಿರುವಾಗ ಬಿಕಿನಿ ತೊಟ್ಟು ವೇದಿಕೆ ಮೇಲೆ ಹೆಜ್ಜೆ ಹಾಕಿದರೆ ನನ್ನ ಸಹ ವರ್ತಿಗಳು ಏನೆಂದುಕೊಳ್ಳುತ್ತಾರೆ? ಎಂದೆಲ್ಲ ಅಂಜಿಕೊಂಡಿದ್ದೆ. ಆದರೆ ಈ ಗೊಂದಲ ಸಂದರ್ಭದಲ್ಲಿ ನನಗೆ ಧೈರ್ಯ ಹೇಳಿದ್ದು ನನ್ನ ತಾಯಿ. ನನ್ನೆಲ್ಲಾ ಅಂಜಿಕೆಗಳನ್ನು ದೂರಮಾಡಿ ನಾನು ಗುರಿಯತ್ತ ಸಾಗುವಂತೆ ಪ್ರೇರೇಪಿಸಿದರು,' ಎಂದು ಶೆಲ್ಲಿ ದೇಹದಾರ್ಡ್ಯ ಸ್ಪರ್ಧೆಗಿಳಿಯುವ ಮುನ್ನ ಎದುರಾದ ಸವಾಲಿನ ಸನ್ನಿವೇಷವನ್ನು ಸ್ಮರಿಸಿಕೊಂಡರು. ಒಂದು ವರ್ಷದ ಕಠಿಣ ವ್ಯಾಯಾಮದ ಪರಿಣಾಮ ಶೆಲ್ಲಿ ಅದ್ಭುತ ರೀತಿಯ ಮೈಕಟ್ಟನ್ನು ಪಡೆದಿದ್ದರು. 2019ರ ಆರಂಭದಲ್ಲಿ ಅವರಿಗೆ ಐಎನ್‌ಬಿಎ ಬಗ್ಗೆ ತಿಳಿದು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

Story first published: Friday, August 2, 2019, 13:28 [IST]
Other articles published on Aug 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X