ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌ರಿಂದ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್!

Special Gift For Kichcha Sudeepa Sent By 1983 World Cup Winning Captain Kapil Dev

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಕ್ರಿಕೆಟ್ ಪ್ರೀತಿ ಎಲ್ಲರಿಗೂ ಗೊತ್ತಿರುವಂತದ್ದು. 17 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಕಾಲೇಜಿನ ಭಾಗವಾಗಿ ಆಡಿದ್ದರು. ಸಿಸಿಎಲ್, ಕೆಪಿಎಲ್‌ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದರು.

ಇನ್ನು ಇತ್ತೀಚೆಗೆ ರಣವೀರ್ ಸಿಂಗ್ ಅಭಿನಯದ ಹಿಂದಿ ಸ್ಪೋರ್ಟ್ಸ್ ಚಲನಚಿತ್ರ 83ರ ಕನ್ನಡ ಅವತರಣಿಕೆಯನ್ನು ಕರ್ನಾಟಕದಲ್ಲಿ ಹಂಚಿದ್ದರು. ಇಂದು (ಭಾನುವಾರ) ನಟ ಕಿಚ್ಚ ಸುದೀಪ್ ಅವರು ವಿಶ್ವದ ಅತ್ಯಂತ ಎತ್ತರದ ಖುಷಿಯ ಭಾವನೆಯನ್ನು ಅನುಭವಿಸಿದರು. ಇದಕ್ಕೆ ಕಾರಣ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಬಿಗ್ ಸರ್ಪ್ರೈಸ್‌ನೊಂದಿಗೆ ವಿಶೇಷ ಗಿಫ್ಟ್ ಕಳುಹಿಸಿದ್ದಾರೆ.

ನಟ ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕಳುಹಿಸಿದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟ್ಸ್‌ಮನ್ನಟ ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕಳುಹಿಸಿದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟ್ಸ್‌ಮನ್

ಈ ಬಗ್ಗೆ ಕಿಚ್ಚ ಸುದೀಪ್ ಟ್ವಿಟ್ಟರ್‌ನಲ್ಲಿ ದೇಶಕ್ಕಾಗಿ ವಿಶ್ವಕಪ್ ಗೆದ್ದ 1983 ಕ್ರಿಕೆಟ್ ತಂಡದ ಸದಸ್ಯರ ಸಹಿಯನ್ನು ಹೊಂದಿರುವ ಐಕಾನಿಕ್ ಬ್ಯಾಟ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಲೆಜೆಂಡರಿ ಕ್ರಿಕೆಟ್ ಐಕಾನ್ ಕಪಿಲ್ ದೇವ್ ಅವರಿಂದ ಉಡುಗೊರೆಯನ್ನು ಸ್ವೀಕರಿಸಿ ಕಿಚ್ಚ ಸುದೀಪ್ ಹೆಚ್ಚು ಸಂತೋಷಪಟ್ಟಿದ್ದಾರೆ.

ಐತಿಹಾಸಿಕ ವಿಶ್ವಕಪ್ ಗೆಲುವಿನ ಸ್ಮರಣಿಕೆ

ಸುದೀಪ್ ಪೋಸ್ಟ್‌ಗೆ ಶೀರ್ಷಿಕೆಯ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, ""Wohhhhhhhhhhhhhhhhhhhhhh... ಎಂಥ ಭಾನುವಾರ.. ಧನ್ಯವಾದಗಳು ಕಪೀಲ್ ದೇವ್ ಸರ್‌ಗೆ. ಇದು ನಿಜನಾ ಎಂದು ಎಚ್ಚೆತ್ತುಕೊಳ್ಳುತ್ತಿದ್ದೇನೆ, ಇದನ್ನು ನಿರೀಕ್ಷಿಸಿರಲಿಲ್ಲ. ಇದು ಕ್ಲಾಸಿಕ್ ಪೀಸ್ ಮತ್ತು ನಾನು ಇದೀಗ ಪ್ರಪಂಚದ ಅತ್ಯುನ್ನತ ಸಂತೋಷದ ತುದಿಯಲ್ಲಿದ್ದೀನಿ ಎಂದು ಫೀಲ್ ಆಗುತ್ತಿದೆ, ಧನ್ಯವಾದಗಳು ಸರ್,'' ಎಂದು ಬರೆದುಕೊಡಿದ್ದಾರೆ. ಕಪಿಲ್ ದೇವ್ ಉಡುಗೊರೆಯಾಗಿ ನೀಡಿರುವ ಐಕಾನಿಕ್ ಬ್ಯಾಟ್ 1983ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಸ್ಮರಣಿಕೆಯಾಗಿದೆ ಮತ್ತು ವಿಶ್ವಕಪ್ ವಿಜೇತ ಆಟಗಾರರ ಆಟೋಗ್ರಾಫ್ ಇದೆ.

ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್‌ರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಸಹ ವಿಶೇಷ ಬ್ಯಾಟ್ ಗಿಫ್ಟ್ ನೀಡಿರುವುದು ಸುದೀಪ್ ಅವರ ಅಭಿಮಾನಿಗಳಿಗೆ ಭಾರೀ ಖುಷಿ ನೀಡಿದೆ.

ಸುದೀಪ್‌ಗೆ ಬ್ಯಾಟ್ ಗಿಫ್ಟ್ ನೀಡಿದ್ದ ಜೋಸ್ ಬಟ್ಲರ್

ಸುದೀಪ್‌ಗೆ ಬ್ಯಾಟ್ ಗಿಫ್ಟ್ ನೀಡಿದ್ದ ಜೋಸ್ ಬಟ್ಲರ್

ಜೋಸ್ ಬಟ್ಲರ್ 2022ರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ, ಇದಕ್ಕಾಗಿ ಅವರು ಆರೆಂಜ್ ಕ್ಯಾಪ್ ಸಹ ಪಡೆದಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ನಾಲ್ಕು ಶತಕ ಗಳಿಸಿದ್ದರು. ಐಪಿಎಲ್ ಮುಗಿದ ನಂತರ ತಾವು ಆಡಿದ್ದ ಬ್ಯಾಟ್ ಅನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದರು. ಅವರ ಸಹಿ ಕೂಡ ಅದರಲ್ಲಿತ್ತು. ಕಿಚ್ಚ ಸುದೀಪ್ ಈ ಕುರಿತಾಗಿ ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದರು.

ನಾನು ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ

ನಾನು ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ

"ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಧನ್ಯವಾದ ಹೇಳುತ್ತೇನೆ. ಆದರೆ ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಥ್ಯಾಂಕ್ಸ್. ಇದನ್ನು ನಾನು ಇಂದು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ," ಎಂದು ಕಿಚ್ಚ ಸುದೀಪ್ ವಿಡಿಯೋದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದರು.

ಬ್ಯಾಟಿಂಗ್ ಜೊತೆಗೆ ಕೀಪಿಂಗ್‌ನಲ್ಲೂ ಎತ್ತಿದ ಕೈ

ಬ್ಯಾಟಿಂಗ್ ಜೊತೆಗೆ ಕೀಪಿಂಗ್‌ನಲ್ಲೂ ಎತ್ತಿದ ಕೈ

ಸುದೀಪ್‌ಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಆಗಾಗ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಾರೆ. ಸಿನಿಮಾ ಕ್ಷೇತ್ರದ ಸ್ನೇಹಿತರೊಂದಿಗೆ ಅನೇಕ ಬಾರಿ ಕ್ರಿಕೆಟ್ ಆಡಲು ಹೋಗುತ್ತಾರೆ. ಇತ್ತೀಚೆಗೆ ಪೊಲೀಸ್ ತಂಡದ ಜೊತೆ ಕ್ರಿಕೆಟ್ ಆಡಿದ್ದರು. ಉತ್ತಮವಾಗಿ ಬ್ಯಾಟ್ ಬೀಸುವ ಸುದೀಪ್, ಕೀಪಿಂಗ್‌ನಲ್ಲೂ ಎತ್ತಿದ ಕೈ. ಇದೀಗ ಭಾರತ ಲೆಜೆಂಡ್ ಕ್ರಿಕೆಟಿಗ ಗಿಫ್ಟ್ ಕಳುಹಿಸಿರುವುದು ಮತ್ತಷ್ಟು ಸಂತಸ ತರಿಸಿದೆ.

ಕಿಚ್ಚ ಸುದೀಪ್ ಅವರು ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದು, ಎರಡು ದಿನಗಳ ಹಿಂದೆ 3ಡಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದು, ಈಗಾಗಲೇ ಒಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗಾಗಲೇ ಕಿಚ್ಚ ಅಂಡ್ ಟೀಂ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು, ಭಾರತದಾದ್ಯಂತ ಸಂಚರಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ 'ವಿಕ್ರಾಂತ್ ರೋಣ' ಜುಲೈ 28ಕ್ಕೆ ತೆರೆಗೆ ಬರುತ್ತಿದೆ.

Story first published: Monday, June 27, 2022, 10:31 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X