ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಸಿದ್ಧತೆಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್

Sports Minister Anurag Thakur chairs meeting to review Indias Olympic preparation

ನವದೆಹಲಿ, ಜುಲೈ 12: ಭಾರತದ ನೂತನ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಧಿಕಾರವನ್ನು ವಹಿಸಿಕೊಂಡ ನಂತರ ಮೊದಲ ಬಾರಿಗೆ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂದಿಸಿದಂತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಉನ್ನತಮಟ್ಟದ ಅಧಿಕಾರಿಗಳು ಹಾಗೂ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಸ್‌ಎಐ) ಹಾಗೂ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ನ ಪ್ರಮುಖರು ಭಾಗಿಯಾಗಿದ್ದರು.

ಇದು ಒಲಿಂಪಿಕ್ಸ್ ಸಮಿತಿಯ 7ನೇ ಸಭೆಯಾಗಿದೆ. ಆದರೆ ಕಳೆದ ವಾರವಷ್ಟೇ ಕ್ರೀಡಾ ಸಚಿವಾಲಯದ ಅಧಿಕಾರವನ್ನು ವಹಿಸಿಕೊಂಡ ಅನುರಾಗ್ ಠಾಕೂರ್ ಹಾಗೂ ನಿತೀಶ್ ಪ್ರಾಮಾಣಿಕ್ ಅವರಿಗೆ ಮೊದಲ ಸಭೆಯಾಗಿದೆ. ಕಳೆದ ವಾರ ನಡೆದ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕಿರಣ್ ರಿಜಿಜು ಅವರಲ್ಲಿದ್ದ ಕ್ರೀಡಾ ಇಲಾಖೆಯ ಹೊಣೆ ಅನುರಾಗ್ ಠಾಕೂರ್‌ಗೆ ವಹಿಸಲಾಗಿದೆ.

ಈ ಸಭೆಯಲ್ಲಿ ಅನುರಾಗ್ ಠಾಕೂರ್ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಇದರಲ್ಲಿ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳಿಗಾಗಿ ವಿಶ್ವದರ್ಜೆಯ ತರಬೇತಿ ವ್ಯವಸ್ಥೆಯನ್ನು ಏರ್ಪಡಿಸುವ ಬಗ್ಗೆಯೂ ಚರ್ಚಿಸಲಾಗಿದೆ.

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

"ಇದೊಂದು ಉನ್ನ ಮಟ್ಟದ ಸಾಮಾನ್ಯ ಸಭೆಯಾಗಿದ್ದು ದೀರ್ಘ ಕಾಲದವರೆಗೆ ನಡೆಯುತ್ತದೆ. ಈ ಸಭೆಗಳಲ್ಲಿ ನಾವು ಒಲಿಂಪಿಕ್ಸ್‌ಗಾಗಿ ಭಾರತೀಯ ಕ್ರೀಡಾಪಟುಗಳ ತಯಾರಿಯ ಬಗ್ಗೆ ಮಾಹಿತಿಯನ್ನು ಪಡೆಯುತ್ತೇವೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೇ ಅಥವಾ ಏನಾದರೂ ಅವಶ್ಯಕತೆಗಳು ಇವೆಯೇ ಎಂಬುದರ ಬಗ್ಗೆ ಗಮನಹರಿಸಲಾಗುತ್ತದೆ" ಎಂದು ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ಮಾಹಿತು ನೀಡಿದೆ.

ಇನ್ನು ಇದಲ್ಲದೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀಯರ್ ಫೊರ್ ಇಂಡಿಯಾ ಕ್ಯಾಂಪೇನ್ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಮಡಿದ್ದಾರೆ. ಅಲ್ಲದೆ ಮಂಗಳವಾರ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳ ಜೊತೆಗೆ ಪ್ರಧಾನಿ ಮೋದಿ ಸಂವಾದವನ್ನು ನಡೆಸಲಿದ್ದು ಅದರ ಸಿದ್ಧತೆಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಮಂಗಳವಾರ ಪ್ರಧಾನಿ ಮೋದಿ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ವರ್ಚುವಲ್ ವೇದಿಕೆಯಲ್ಲಿ ಸಂವಾದವನ್ನು ನಡೆಸಲಿದ್ದು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಲಿದ್ದಾರೆ.

Story first published: Monday, July 12, 2021, 21:58 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X