ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ದೃಢ

Sprint King Usain Bolt Tests Positive For Covid-19

ಜಮೈಕಾದ ವಿಶ್ವ ದಾಖಲೆಯ ಓಟಗಾರ ಉಸೇ್ ಬೋಲ್ಟ್‌ಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರು ತಮ್ಮ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೂನ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಉಸೇನ್ ಬೋಲ್ಟ್‌ಗೆ ಯಾವುದೇ ರೀತಿಯ ಕೊರೊನಾ ಲಕ್ಞಣಗಳು ಇಲ್ಲದೆ ಆರೋಗ್ಯವಾಗಿದ್ದಾರೆ.

ಜಮೈಕಾದ ಆರೋಗ್ಯ ಸಚಿವಾಲಯ ಸೋಮವಾರ ತಡರಾತ್ರಿ 100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ವಿಶ್ವದಾಖಲೆಯನ್ನು ಬರೆದಿರುವ ಉಸೇನ್ ಬೋಲ್ಟ್ ಕೊವಿಡ್-19ಗೆ ತುತ್ತಾಗಿರುವ ವಿಚಾರವನ್ನು ಬಹಿರಂಗಪಡಿಸಿದೆ. ಬಳಿಕ ಉಸೇನ್ ಬೋಲ್ಟ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಮ್ಮ ಆರೋಗ್ಯ ಸ್ಥಿತಿಯನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷ

ಕೇವಲ ಸುರಕ್ಷಿತಗಿರುವ ಕಾರಣ ನಾನು ನನ್ನಷ್ಟಕ್ಕೇ ಕ್ವಾರಂಟೈನ್‌ಗೆ ಒಳಪಡುತ್ತಿದ್ದೇನೆ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬೇಡಿ" ಎಂದು ಉಸೇನ್ ಬೋಲ್ಟ್ ಈ ವಿಡಿಯೋದಲ್ಲಿ ಹೇಳಿದ್ದಾರೆ. ಉಸೇನ್ ಬೋಲ್ಟ್ ಅವರ ಈ ವಿಡಿಯೋಗೆ ಅಭಿಮಾನಿಗಳು ಶೀಘ್ರವಾಗಿ ಗುಣಮುಖರಾಗಿ ಬರುವಂತೆ ಶುಭ ಹಾರೈಸುತ್ತಿದ್ದಾರೆ.

ಉಸೇನ್ ಬಲ್ಟ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನ ಶನಿವಾರ ಕೊರನಾ ಟೆಸ್ಟ್‌ಗೆ ಒಳಗಾಗಿದ್ದರು. ಕೊರೊನಾ ವೈರಸ್‌ನ ಭೀತಿಯ ಮಧ್ಯೆ ಉಸೇನ್ ಬೋಲ್ಟ್ ಅತ್ಯಂತ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ "ಹಿಂದೆಂದಿಗಿಂತಲೂ ಅತ್ಯುತ್ತಮ ಹುಟ್ಟುಹಬ್ಬ" ಎಂದು ಬರೆದುಕೊಂಡಿದ್ದರು.

8 ಒಲಿಂಪಿಕ್ಸ್ ಪದವನ್ನು ಗೆದ್ದಿರುವ ಉಸೇನ್ ಬೋಲ್ಟ್ 2008, 2012 ಹಾಗೂ 2016ರ ಒಲಿಂಪಿಕ್ಸ್‌ನ 100 ಹಾಗೂ 200 ಮೀಟರ್ ಅಂತರದ ಸ್ಪರ್ಧೆಯಲ್ಲಿ ಸತತ ಗೆಲುವುಗಳನ್ನು ಸಾಧಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 2017ರಲ್ಲಿ ಅಂತಾರಾಷ್ಟ್ರೀಯ ಕೆರಿಯರ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು.

Story first published: Tuesday, August 25, 2020, 15:06 [IST]
Other articles published on Aug 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X