ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಾಜ್ಯ ಬಜೆಟ್ 2019-20: ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿ ಪ್ರಮುಖಾಂಶಗಳು

State Budget 2019-20 Highlights: Youth Empowerment and Sports

ಬೆಂಗಳೂರು, ಫೆಬ್ರವರಿ 8: ಶುಕ್ರವಾರ (ಫೆಬ್ರವರಿ 8) ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ 2019-20ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಕೆಲ ಅನುದಾನಗಳನ್ನು ನೀಡಲಾಗಿದೆ. ಅವುಗಳಲ್ಲಿ ಪ್ರಮುಖವಾದು ಇಲ್ಲಿವೆ (ಎಲ್ಲವೂ ಸಾಂದರ್ಭಿಕ ಚಿತ್ರಗಳು).

ಆಕ್ಲೆಂಡ್, 2ನೇ ಟಿ20: 7 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್ ಸದೆಬಡಿದ ಭಾರತಆಕ್ಲೆಂಡ್, 2ನೇ ಟಿ20: 7 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್ ಸದೆಬಡಿದ ಭಾರತ

ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣ, ಕ್ರೀಡಾಂಗಣ ಅಭಿವೃದ್ಧಿ, ಕ್ರೀಡಾ ವಸತಿನಿಲಯಗಳಲ್ಲಿನ ಊಟೋಪಚಾರದ ಬಾಬ್ತು ದಿನಭತ್ಯೆ, ಸಾಹಸ ಕ್ರೀಡೋತ್ಸವ ಆಯೋಜನೆ, ಮಿನಿ ಒಲಿಂಪಿಕ್ಸ್ ಗೇಮ್ಸ್ ಆಯೋಜನೆ ವಿಚಾರಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖವಾಗಿ ಪ್ರಾಸ್ತಾಪಿಸಲಾಗಿದೆ. ರಾಜ್ಯ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿ ಒಟ್ಟಾರೆ ಮುಖ್ಯಾಂಶಗಳು ಕೆಳಗಿವೆ.

ಕ್ರೀಡಾ ವಸತಿನಿಲಯಗಳ ನಿರ್ಮಾಣ

ಕ್ರೀಡಾ ವಸತಿನಿಲಯಗಳ ನಿರ್ಮಾಣ

ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 12.5 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರಗಿ, ಕೋಲಾರ, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿನಿಲಯ ಸ್ಥಾಪಿಸಲು 15 ಕೋಟಿ ರೂ. ಅನುದಾನ ನೀಡಲಾಗಿದೆ.

ಕ್ರೀಡಾಂಗಣಗಳ ಸೌಲಭ್ಯ ಮೇಲ್ದರ್ಜೆಗೆ

ಕ್ರೀಡಾಂಗಣಗಳ ಸೌಲಭ್ಯ ಮೇಲ್ದರ್ಜೆಗೆ

4 ಕೋಟಿ ರೂ.ಗಳ ವೆಚ್ಚದಲ್ಲಿ ಮಂಡ್ಯ, ಬೀದರ್, ತುಮಕೂರು ಮತ್ತು ಹಾಸನ ಜಿಲ್ಲಾ ಕ್ರೀಡಾಂಗಣಗಳ ಸೌಲಭ್ಯ ಮೇಲ್ದರ್ಜೆಗೇರಿಕೆ. ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಊಟೋಪಚಾರದ ಬಾಬ್ತು ದಿನಬತ್ಯೆ ಭಾರತೀಯ ಕ್ರೀಡಾ ಪ್ರಾಧಿಕಾರದ ಮಟ್ಟಕ್ಕೆ ಹೆಚ್ಚಳ ; ಇದಕ್ಕೆ 6 ಕೋಟಿ ರೂ. ಅನುದಾನ.

ಸಾಹಸ ಕ್ರೀಡೋತ್ಸವ ಆಯೋಜನೆ

ಸಾಹಸ ಕ್ರೀಡೋತ್ಸವ ಆಯೋಜನೆ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ ರಾಜ್ಯದ 10 ಸ್ಥಳಗಳಲ್ಲಿ ಸಾಹಸ ಕ್ರೀಡೋತ್ಸವ ಆಯೋಜಿಸಲು 2 ಕೋಟಿ ರೂ. ಅನುದಾನ. 13 ರಿಂದ 15 ವಯೋಮಾನದವರಿಗಾಗಿ ಮಿನಿ ಒಲಿಂಪಿಕ್ ಗೇಮ್ಸ್-2019 ಆಯೋಜನೆ.

ಹಾಕಿ ಕ್ರೀಡಾಂಗಣ ಅಭಿವೃದ್ಧಿ

ಹಾಕಿ ಕ್ರೀಡಾಂಗಣ ಅಭಿವೃದ್ಧಿ

ವಿರಾಜಪೇಟೆಯ ಬಾಳುಗೋಡದಲ್ಲಿರುವ ಕೊಡವ ಸಮಾಜದ ಹಾಕಿ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ. ಒಟ್ಟಾರೆ ಬಜೆಟ್‌ನಲ್ಲಿ ಕ್ರೀಡಾ ವಸತಿನಿಲಯಗಳ ನಿರ್ಮಾಣ, ಕ್ರೀಡಾಂಗಣಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯತೆ ನೀಡಿರುವುದನ್ನು ಇಲ್ಲಿ ಗಮನಿಸಬಹುದು. ಆದರೆ ಗ್ರಾಮೀಣ ಕ್ರೀಡಾಕೂಟಗಳಿಗೆ ಸಂಬಂಧಿಸಿ ವಿಚಾರಗಳನ್ನು ಉಲ್ಲೇಖಿಸಿಲ್ಲ.

Story first published: Friday, February 8, 2019, 17:21 [IST]
Other articles published on Feb 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X