ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯಾನ್ ರಸ್ಲಿಂಗ್: ಕನ್ನಡಿಗ ಅರ್ಜುನ್‌ಗೆ ಕಂಚು, ಸುನಿಲ್‌ಗೆ ದಾಖಲೆಯ ಚಿನ್ನ!

Sunil Kumar ends Indias 27-year wait for gold in Greco-Roman at Asian Wrestling Championships

ದಾವಣಗೆರೆ, ಫೆಬ್ರವರಿ 18: ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯಾನ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗ ಅರ್ಜುನ್ ಹಲಕುರ್ಕಿಗೆ ಕಂಚಿನ ಪದಕ ಲಭಿಸಿದೆ. ಪುರುಷರ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಲಕುರ್ಕಿ ಇರಾನ್‌ ಪೌಯಾ ಮೊಹಮ್ಮದ್ ನಾಸರ್ಪೋರ್ ಎದುರು ಸೋತು ಕಂಚಿಗೆ ತೃಪ್ತಿಪಟ್ಟಿದ್ದಾರೆ. ಇನ್ನೊಂದು ಸ್ಪರ್ಧೆಯಲ್ಲಿ ಭಾರತದ ಸುನಿಲ್ ಕುಮಾರ್, ದಾಖಲೆಯ ಬಂಗಾರದ ಪದಕ ಗೆದ್ದಿದ್ದಾರೆ.

ದೆಹಲಿ ಏಷ್ಯಾನ್ ಚಾಂಪಿಯನ್‌ಶಿಪ್‌ಲ್ಲಿ ಚೀನಾ ರಸ್ಲರ್‌ಗಳು ಸ್ಪರ್ಧಿಸುತ್ತಿಲ್ಲದೆಹಲಿ ಏಷ್ಯಾನ್ ಚಾಂಪಿಯನ್‌ಶಿಪ್‌ಲ್ಲಿ ಚೀನಾ ರಸ್ಲರ್‌ಗಳು ಸ್ಪರ್ಧಿಸುತ್ತಿಲ್ಲ

ಮಂಗಳವಾರ (ಫೆಬ್ರವರಿ 18) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜುನ್ ಹಲಕುರ್ಕಿ, ಪ್ರತಿಸ್ಪರ್ಧಿ ಪೌಯಾ ಮೊಹಮ್ಮದ್ ನಾಸರ್ಪೋರ್ ಎದುರು 7-8ರ ಅಂತರದಿಂದ ಪರಾಭಗೊಂಡರು. ಅಸಲಿಗೆ ಅರ್ಜುನ್ ಗೆಲ್ಲಬೇಕಿದ್ದ ಪಂದ್ಯವಿದು. ಆದರೆ ಸ್ಪಲ್ಪದರಲ್ಲಿ ಹಿನ್ನಡೆ ಅನುಭವಿಸಿದರು.

ಕಳೆದ ಎಂಟು ವರ್ಷಗಳಿಂದ ದಾವಣಗೆರೆ ಕ್ರೀಡಾ ಹಾಸ್ಟೆಲ್ ನಲ್ಲಿ ಇರುವ ಅರ್ಜುನ್ ಮೂಲತಃ ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದವರು. ಮಂಗಳವಾರವೇ ನಡೆದ ಪುರುಷರ 87 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸುನಿಲ್ ಕುಮಾರ್ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಫೆ.22ರಿಂದ 25ರವರೆಗೆ ಧಾರವಾಡದಲ್ಲಿ ಕರ್ನಾಟಕ ಕುಸ್ತಿ ಹಬ್ಬಫೆ.22ರಿಂದ 25ರವರೆಗೆ ಧಾರವಾಡದಲ್ಲಿ ಕರ್ನಾಟಕ ಕುಸ್ತಿ ಹಬ್ಬ

ಫೈನಲ್ ಸ್ಪರ್ಧೆಯಲ್ಲಿ ಸುನಿಲ್ ಕುಮಾರ್ ಅವರು ಕಿರ್ಗಿಸ್ತಾನ್‌ನ ಅಜತ್ ಸಾಲಿಡಿನೋವ್ ಎದುರು 5-0ರ ಗೆಲುವು ದಾಖಲಿಸಿದರು. ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತಕ್ಕೆ 27 ವರ್ಷಗಳ ಬಳಿಕ ಲಭಿಸುತ್ತಿರುವ ಚಿನ್ನದ ಪದಕವಿದು. 1993ರಲ್ಲಿ ನಡೆದಿದ್ದ ಏಷ್ಯಾನ್ ರಸ್ಲಿಂಗ್‌ನಲ್ಲಿ ಪಪ್ಯು ಯಾದವ್ 48 ಕೆಜಿ ವಿಭಾಗದಲ್ಲಿ ದೇಶಕ್ಕೆ ಬಂಗಾರದ ಮೆರಗು ತಂದಿದ್ದರು. ಈ ರಸ್ಲಿಂಗ್ ಚಾಂಪಿಯನ್‌ಶಿಪ್ ಫೆಬ್ರವರಿ 18ರಿಂದ 23ರ ವರೆಗೆ ನಡೆಯಲಿದೆ.

Story first published: Tuesday, February 18, 2020, 23:03 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X