ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಥ್ಲೀಟ್ ಸ್ವಪ್ನಾಳ ಚಿನ್ನದ ಕನಸು ನನಸಾಗಲು ದ್ರಾವಿಡ್ ಕೂಡಾ ಕಾರಣ

By Mahesh
Swapna Barmans Heptathlon Gold-winning journey and its connection with Rahul Dravid

ಬೆಂಗಳೂರು, ಆಗಸ್ಟ್ 31: ಏಳು ಬಗೆಯ ಕಠಿಣ ಇವೆಂಟ್ ಗಳನ್ನು ಒಳಗೊಂಡ ಹೆಪ್ಟಾಥ್ಲಾನ್ ನಲ್ಲಿ ಉತ್ತಮ ಸಾಧನೆ ತೋರಿ, ಚಿನ್ನದ ಪದಕಕ್ಕೆ ಮುತ್ತಿಟ್ಟ ಸ್ವಪಾ ಬರ್ಮನ್ ಅವರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರ ಹರಿದು ಬರುತ್ತಿದೆ.

800ಮೀ. ಹರ್ಡಲ್ಸ್, ಹೈ ಜಂಪ್, ಶಾಟ್​ ಪುಟ್, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ ಹೀಗೆ ಒಟ್ಟು ಏಳು ವಿವಿಧ ಕ್ರೀಡೆಗಳನ್ನೊಳಗೊಂಡ ಒಟ್ಟಾರೆ ಆಟ ಹೆಪ್ಟಥ್ಲಾನ್​ನಲ್ಲಿ 6024 ಅಂಕ ಕಲೆಹಾಕಿದ ಸಾಧನೆ ಮೆರೆದ ಸ್ಪಪ್ನಾ ಬರ್ಮನ್​ ಸಾಧನೆಯಿಂದ ಶಕ್ತಿ ರಾಹುಲ್​ ದ್ರಾವಿಡ್​ ಹಾಗೂ ಸ್ಪೋರ್ಟ್ಸ್​ ಅಥಾರಿಟಿ ಆಫ್​ ಇಂಡಿಯಾ ಎಂದು ಸ್ವಪ್ನಾ ಅವರ ಕೋಚ್ ಹೇಳಿದ್ದಾರೆ.

ಏಷ್ಯನ್ ಸ್ವರ್ಣ ಗೆದ್ದ ಸ್ವಪ್ನಾ ಬದುಕನ್ನು ಬಿಚ್ಚಿಡುವ ಭಾವುಕ ಚಿತ್ರವಿದು.. ಏಷ್ಯನ್ ಸ್ವರ್ಣ ಗೆದ್ದ ಸ್ವಪ್ನಾ ಬದುಕನ್ನು ಬಿಚ್ಚಿಡುವ ಭಾವುಕ ಚಿತ್ರವಿದು..

ಬಡ ಕುಟುಂಬದಿಂದ ಬಂದಿರುವ ಈ ಅದ್ಭುತ ಪ್ರತಿಭೆ ಈ ಕಷ್ಟಕರ ಇವೆಂಟ್ ಗಳಿಗೆ ಸಿದ್ಧವಾಗುವ ಹೊತ್ತಿಗೆ ಹಲ್ಲು , ದವಡೆ ನೋವು, ಜ್ವರ, ಬೆನ್ನುನೋವು ಕಾಣಿಸಿಕೊಂಡಿದೆ. ಆದರೂ ಛಲಬಿಡದೆ ತಮ್ಮ ಗುರಿಯನ್ನು ಮುಟ್ಟಿದ್ದಾರೆ. ರಿಕ್ಷಾ ಎಳೆಯುವಾತನ ಮಗಳ ಸಾಹಸಗಾಥೆಯ ಬಗ್ಗೆ ಇಲ್ಲಿ ಓದಿ

ದ್ರಾವಿಡ್ ನೆರವು: ಕ್ರಿಕೆಟ್ ಜಗತ್ತಿಗೆ ಯುವ ಕ್ರಿಕೆಟರ್ ಗಳಾದ ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಸೇರಿದಂತೆ ಹಲವಾರು ಕ್ರಿಕೆಟರ್ ಗಳನ್ನು ಪರಿಚಯಿಸಿದ ದ್ರಾವಿಡ್ ಅವರು ಇತರೆ ಕ್ರೀಡೆಗಳ ಪ್ರತಿಭೆಗಳನ್ನು ಪೋಷಿಸುತ್ತಾ ಬಂದಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ: ಆರು ಬೆರಳಿನ ಹುಡುಗಿ ಈಗ ದೇಶದ ಹೆಮ್ಮೆ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ: ಆರು ಬೆರಳಿನ ಹುಡುಗಿ ಈಗ ದೇಶದ ಹೆಮ್ಮೆ

ದ್ರಾವಿಡ್ ಅಥ್ಲೆಟ್ ಮೆಂಟರ್ ಶಿಪ್ ಕಾರ್ಯಕ್ರಮದಡಿಯಲ್ಲಿ ದತ್ತು ಭೋಕನಾಲ್, ಬಿ ಸಾಯಿ ಪ್ರಣೀತ್, ಕಿಡಾಂಬಿ ಶ್ರೀಕಾಂತ್ ಅಂಜುಮ್ ಮೌಡ್ಗಿಲ್ ಬೆಳಕಿಗೆ ಬಂದಿದ್ದಾರೆ. ಈಗ ಏಷ್ಯನ್ ಗೇಮ್ಸ್ 2018ರ ಚಿನ್ನದ ಹುಡುಗಿ ಸ್ವಪ್ನಾ ಕೂಡಾ ಸೇರಿದ್ದಾರೆ..

ಏಷ್ಯನ್ ಗೇಮ್ಸ್ ನ 11ನೇ ದಿನದಂದು ಇತಿಹಾಸ ಬರೆದ ಸ್ವಪ್ನಾ ಸೇರಿದಂತೆ ಆಯ್ದ 20 ಕ್ರೀಡಾಪಟುಗಳಿಗೆ ಏಷ್ಯನ್ ಗೇಮ್ಸ್ ಅಲ್ಲದೆ 2020ರ ಟೋಕಿಯೋ ಒಲಿಂಪಿಕ್ಸ್ ತನಕ ಎಲ್ಲಾ ರೀತಿಯ ಆರ್ಥಿಕ ನೆರವು, ಮಾರ್ಗದರ್ಶನ ಸಿಗುತ್ತಿದೆ.

Story first published: Friday, August 31, 2018, 18:00 [IST]
Other articles published on Aug 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X