ಬರೋಬ್ಬರಿ 20.2 ಅಡಿ ಪೋಲ್ ವಾಲ್ಟ್ ಮಾಡಿ ವಿಶ್ವದಾಖಲೆ ಬರೆದ ಮೊಂಡೋ ಡುಪ್ಲಾಂಟಿಸ್; ವಿಡಿಯೋ ಇಲ್ಲಿದೆ

ಸ್ವೀಡನ್ ದೇಶದ 22ರ ಹರೆಯದ ಪೋಲ್ ವಾಲ್ಟರ್ ಅರ್ಮಾಂಡ್ ಮೋಂಡೋ ಡುಪ್ಲಾಂಟಿಸ್ ಪೋಲ್ ವಾಲ್ಟ್ ಕ್ರೀಡೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 30ರ ಗುರುವಾರದಂದು ಸ್ವೀಡನ್ ದೇಶದ ರಾಜಧಾನಿ ಸ್ಟಾಕ್ಹೋಮ್ ನಗರದಲ್ಲಿ ನಡೆದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೋಂಡೋ ಡುಪ್ಲಾಂಟಿಸ್ 6.16 ಮೀಟರ್ ಎತ್ತರಕ್ಕೆ ಹೊರಾಂಗಣ ಪೋಲ್ ವಾಲ್ಟ್ ಕ್ರೀಡೆಯಲ್ಲಿ ಜಿಗಿದಿದ್ದಾರೆ. ಅಂದರೆ 20 ಅಡಿ 2.5 ಇಂಚು ಎತ್ತರಕ್ಕೆ ಮೊಂಡೋ ಡುಪ್ಲಾಂಟಿಸ್ ಪೋಲ್ ವಾಲ್ಟ್ ಮಾಡಿದ್ದು, ಇದು ಹೊರಾಂಗಣ ಪೋಲ್ ವಾಲ್ಟ್ ಕ್ರೀಡೆಯಲ್ಲಿ ನಿರ್ಮಾಣವಾದ ನೂತನ ವಿಶ್ವ ದಾಖಲೆಯಾಗಿದೆ.

IND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆIND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆ

ಹೀಗೆ ವಿಶ್ವ ದಾಖಲೆ ನಿರ್ಮಿಸಿರುವ ಮೊಂಡೋ ಡುಪ್ಲಾಂಟಿಸ್ ತಮ್ಮದೇ ಆದ ಹಳೆ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ. 2020ರಲ್ಲಿ ರೋಮ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೊಂಡೋ ಡುಪ್ಲಾಂಟಿಸ್ 6.15 ಮೀಟರ್ ಎತ್ತರಕ್ಕೆ ಪೋಲ್ ವಾಲ್ಟ್ ಮಾಡಿ 26 ವರ್ಷದ ಸರ್ಜಿ ಬುಬ್ಕಾ ನಿರ್ಮಿಸಿದ್ದ ಹೊರಾಂಗಣ ಪೋಲ್ ವಾಲ್ಟ್ ವಿಶ್ವದಾಖಲೆಯನ್ನು ಮುರಿದು ಹಾಕಿದ್ದರು.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಸದ್ಯ ಮೊಂಡೋ ಡುಪ್ಲಾಂಟಿಸ್ 6.16 ಮೀಟರ್ ಎತ್ತರಕ್ಕೆ ಪೋಲ್ ವಾಲ್ಟ್ ಮಾಡಿ ಜಿಗಿದಿರುವ ಮೈನವಿರೇಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರ ಸ್ಲೋ ಮೋಷನ್ ತುಣುಕು ಮುಂದೆ ಇದೆ ವೀಕ್ಷಿಸಿ.

ಇನ್ನು ಹೊರಾಂಗಣ ಪೋಲ್ ವಾಲ್ಟ್ ವಿಭಾಗದಲ್ಲಿ ನೂತನ ವಿಶ್ವದಾಖಲೆ ಬರೆದು ಸುದ್ದಿ ಮಾಡುತ್ತಿರುವ ಮೊಂಡೋ ಡುಪ್ಲಾಂಟಿಸ್ ಒಳಾಂಗಣ ಪೋಲ್ ವಾಲ್ಟ್‌ನಲ್ಲೂ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಹೌದು, ಇದೇ ವರ್ಷ ಸರ್ಬಿಯಾದಲ್ಲಿ ನಡೆದಿದ್ದ ವಿಶ್ವ ಒಳಾಂಗಣ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೊಂಡೋ ಡುಪ್ಲಾಂಟಿಸ್ 6.20 ಮೀಟರ್ ಎತ್ತರಕ್ಕೆ ಪೋಲ್ ವಾಲ್ಟ್‌ನಲ್ಲಿ ಜಿಗಿದಿದ್ದರು. ಅಂದರೆ ಬರೋಬ್ಬರಿ 20 ಅಡಿ 4 ಇಂಚು ಎತ್ತರಕ್ಕೆ ಮೊಂಡೋ ಡುಪ್ಲಾಂಟಿಸ್ ಪೋಲ್ ವಾಲ್ಟ್ ಮಾಡಿದ್ದರು. ಇದು ಒಳಾಂಗಣ ಪೋಲ್ ವಾಲ್ಟ್‌ನಲ್ಲಿ ವಿಶ್ವದಾಖಲೆ ಎನಿಸಿಕೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: record ದಾಖಲೆ
Story first published: Monday, July 4, 2022, 10:38 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X