ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಜಿನ್ಸನ್ ಜಾನ್ಸನ್ ಮತ್ತು ಗೋಪಿಗೆ ಬಲ ತಂದ ಎಸಿಕ್ಸ್

ಬೆಂಗಳೂರು, ಆಗಸ್ಟ್ 23: ಓಟ ಎಂಬ ಪದದೊಡನೆ ಅನುರಣಿಸುವಂಥ ಬ್ರಾಂಡ್ ಆಗಿರುವ ಎಸಿಕ್ಸ್, ದೋಹಾದಲ್ಲಿ ನಡೆಯಲಿರುವ 2019ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಶ್ರೇಷ್ಠ ರನ್ನರ್ ಗಳಾದ- ಜಿನ್ಸನ್ ಜಾನ್ಸನ್ ಮತ್ತು ಗೋಪಿ ಥೋನಕಲ್ ಅವರ ಆತಿಥ್ಯವನ್ನು ವಹಿಸಿಕೊಂಡಿದೆ. ಮಾತ್ರವಲ್ಲದೆ, ಪದಕ ಪಡೆಯುವ ಅವರ ಹಂಬಲಕ್ಕೆ ಬೆಂಬಲವನ್ನೂ ಗುರುವಾರ ಎಸಿಕ್ಸ್ ಬೆಂಗಳೂರಿನ ಇಂದಿರಾನಗರ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದೆ.

ಸಿಯೋಲ್ ಅಂತಾರಾಷ್ಟ್ರೀಯ ಮ್ಯಾರಥಾನ್‍ನಲ್ಲಿ 2 ಗಂಟೆ 13 ನಿಮಿಷಗಳು ಮತ್ತು 39 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ, ವಿಶ್ವ ಚಾಂಪಿಯನ್ ಶಿಪ್‍ಗೆ ಅರ್ಹತೆ ಪಡೆದಿರುವ ಗೋಪಿ ಥೋನಕಲ್, ಭಾರತದಲ್ಲೇ 2:12:00 ಗಳಲ್ಲಿ ಗುರಿ ತಲುಪಿ ಸಾಧನೆ ಮಾಡಿರುವಂಥ ಶಿವನಾಥ್ ಸಿಂಗ್‍ರನ್ನು ಹಿಂದಿಕ್ಕುವ ಯತ್ನದಲ್ಲಿದ್ದಾರೆ.

ದಶಕಗಳಷ್ಟು ಹಳೆಯ ರಾಷ್ಟ್ರಮಟ್ಟದ ದಾಖಲೆಯನ್ನು ಸರಿಗಟ್ಟುವ ಯೋಚನೆಯಲ್ಲಿದ್ದರೆ, ಅತ್ತ ಜಿನ್ಸನ್ ಅವರು ತಮ್ಮ ಬೇಸ್ ಅನ್ನು ಯುಎಸ್‍ಎಯಲ್ಲಿನ ಕೊಲೊರಾಡೋಗೆ ಶಿಫ್ಟ್ ಮಾಡಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಗಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತರಬೇತಿ ಪಡೆಯುವ ಉಮೇದಿನಲ್ಲಿ ಇವರಿದ್ದಾರೆ.

ಭಾರತದ ಬ್ಯಾಟಿಂಗ್ ಕೋಚ್ ಬಂಗಾರ್ ಸ್ಥಾನಕ್ಕೆ ರಾತೋರ್ ಆಯ್ಕೆ ಭಾರತದ ಬ್ಯಾಟಿಂಗ್ ಕೋಚ್ ಬಂಗಾರ್ ಸ್ಥಾನಕ್ಕೆ ರಾತೋರ್ ಆಯ್ಕೆ

ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ, ಅಥ್ಲೀಟ್‍ಗಳು ಪದಕ ಬೇಟೆಗೆ ಹೊರಟಿದ್ದರೆ, ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದಿರುವ ಟಿ. ಗೋಪಿ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್‍ನ ಪದಕದ ಕನಸು ಹೊತ್ತಿರುವ ಜಿನ್ಸನ್ ಜಾನ್ಸನ್ ಅವರೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಎಸಿಕ್ಸ್ ಸಂಸ್ಥೆಯು ತನ್ನ ಸ್ಥಾಪನಾ ಸಿದ್ಧಾಂತವಾದ ಎನಿಮಾ ಸಾನಾ ಇನ್ ಕಾಪೆರ್ ಸಾನೋ'- ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ ಎಂಬ ತತ್ವದ ಸಾಂಪ್ರದಾಯಿಕ ಅಭಿವ್ಯಕ್ತಿ ಹಾಗೂ ಈ ಬ್ರಾಂಡ್‍ನ ಪ್ರಮುಖ ಧ್ಯೇಯವಾದ ಐ ಮೂವ್ ಮೀ'ಯನ್ನು ಎತ್ತಿಹಿಡಿದಿದೆ.

ಸೆಕೆಂಡ್ ಬೆಸ್ಟ್ ಟೈಮ್ ರನ್ನರ್ ಟಿ ಗೋಪಿ

ಸೆಕೆಂಡ್ ಬೆಸ್ಟ್ ಟೈಮ್ ರನ್ನರ್ ಟಿ ಗೋಪಿ

ಬ್ರಾಂಡ್ ಜತೆಗಿನ ಸಹಭಾಗಿತ್ವ ಕುರಿತು ಮಾತನಾಡಿದ, ದೇಶದಲ್ಲೇ ಸೆಕೆಂಡ್ ಬೆಸ್ಟ್ ಟೈಮ್ ರನ್ನರ್ ಎಂಬ ಹೆಗ್ಗಳಿಕೆ ಗಳಿಸಿರುವ ಟಿ. ಗೋಪಿ, ``ರನ್ನರ್ ಗಳಾದ ನಾವು, ಸೂಕ್ತವಾದ ಹಾಗೂ ಸಮರ್ಪಕವಾದ ಶೂಗಳನ್ನು ಧರಿಸಿಯೇ ನಮ್ಮ ರೇಸ್‍ಗಳ ಕಡೆಗೆ ಗಮನ ಹರಿಸಬೇಕಾದ್ದು ಅತ್ಯಂತ ಮುಖ್ಯ. ಜಗತ್ತಿನ ಎಲ್ಲ ಅಥ್ಲೀಟ್‍ಗಳಿಗೂ ನೆರವಾಗುವಂಥ ತಂತ್ರಜ್ಞಾನವು ಅಸಿಕ್ಸ್ ಬಳಿಯಿದೆ. ಈ ಪಟ್ಟಿಗೆ ನಾನು ಸೇರ್ಪಡೆಯಾಗುತ್ತಿರುವುದು ರೋಮಾಂಚಕ ಅನುಭವ ನೀಡಿದೆ,'' ಎಂದರು.

ಅರ್ಜುನ ಪ್ರಶಸ್ತಿ ಪುರಸ್ಕೃತ ಜಿನ್ಸನ್

ಅರ್ಜುನ ಪ್ರಶಸ್ತಿ ಪುರಸ್ಕೃತ ಜಿನ್ಸನ್

ಗೋಪಿ ಅವರು ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಅರ್ಜುನ ಪ್ರಶಸ್ತಿ ಪುರಸ್ಕೃತ ಜಿನ್ಸನ್ ಅವರು ಬ್ರಾಂಡ್‍ನ ಬೆಂಬಲದ ಕುರಿತು ಮಾತನಾಡಿದರು. ``ಒಬ್ಬ ಅಥ್ಲೀಟ್‍ಗೆ ಅಗತ್ಯವಾದ ಬೆಂಬಲವನ್ನು ಎಸಿಕ್ಸ್ ಸಂಸ್ಥೆಯು ನೀಡುತ್ತಾ ಬಂದಿದೆ ಮತ್ತು ನಮಗೆ ನಮ್ಮ ಶರೀರ ಮತ್ತು ಮನಸ್ಸಿಗೆ ಸೂಕ್ತ ತರಬೇತಿ ನೀಡಲು ಅಗತ್ಯವಾದುದನ್ನು ಒದಗಿಸುವ ಬೆನ್ನೆಲುಬಾಗಿಯೂ ಎಸಿಕ್ಸ್ ಕಾರ್ಯನಿರ್ವಹಿಸಿದೆ. ಜಗತ್ತಿನಾದ್ಯಂತದ ಟ್ರ್ಯಾಕ್ ರನ್ನರ್‍ಗಳು ಬಳಸುವಂಥ ಬ್ರಾಂಡ್ ಜತೆ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ'' ಎಂದರು.

ಎಸಿಕ್ಸ್ ಇಂಡಿಯಾ ಎಂಡಿ ರಜತ್

ಎಸಿಕ್ಸ್ ಇಂಡಿಯಾ ಎಂಡಿ ರಜತ್

ಸಹಭಾಗಿತ್ವದ ಕುರಿತು ಮಾತನಾಡಿದ ಎಸಿಕ್ಸ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನಾ, ``ನಾವು ಒಂದು ಬ್ರಾಂಡ್ ಆಗಿ ರನ್ನರ್‍ಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದೇವೆ. ನಾನು ಕೂಡ ಒಬ್ಬ ಮ್ಯಾರಥಾನ್ ರನ್ನರ್ ಆಗಿದ್ದು, ನಮ್ಮ ರೋಸ್ಟರ್‍ನಲ್ಲಿ ಇಂಥ ಇಬ್ಬರು ವಿಶ್ವದರ್ಜೆಯ ಅಥ್ಲೀಟ್ ಗಳನ್ನು ಹೊಂದುತ್ತಿರುವುದಕ್ಕೆ ಸಂತೋಷ ಪಡುತ್ತೇನೆ. ಒಲಿಂಪಿಕ್ಸ್ ಸಮೀಪಿಸಿದಂತೆ ಮುಂದಿನ ದಿನಗಳಲ್ಲಿ ನಾವು ಈ ಪಟ್ಟಿಗೆ ಇನ್ನಷ್ಟು ಸೇರಿಸಿಕೊಳ್ಳಲಿದ್ದೇವೆ'' ಎಂದರು.

ಎಸಿಕ್ಸ್ ಬಗ್ಗೆ : ಎನಿಮಾ ಸಾನಾ ಇನ್ ಕಾಪೆರ್ ಸಾನೋ

ಎಸಿಕ್ಸ್ ಬಗ್ಗೆ : ಎನಿಮಾ ಸಾನಾ ಇನ್ ಕಾಪೆರ್ ಸಾನೋ

ಎನಿಮಾ ಸಾನಾ ಇನ್ ಕಾಪೆರ್ ಸಾನೋ, ಅಂದರೆ ``ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ,'' ಎಂಬ ಪುರಾತನ ಲ್ಯಾಟಿನ್ ಪದದ ಸಂಕ್ಷಿಪ್ತ ರೂಪವೇ ಎಸಿಕ್ಸ್. ಇದೇ ಮೂಲಭೂತ ಧ್ಯೇಯದೊಂದಿಗೆ ಈ ಬ್ರಾಂಡ್ ಈಗಲೂ ನಿಂತಿದೆ. 1949ರಲ್ಲಿ ಅಂದರೆ 70 ವರ್ಷಗಳಿಗಿಂತಲೂ ಹಿಂದೆ ಕಿಹಾಚಿರೋ ಒನಿಟ್ಸುಕಾ ಎಂಬವರು ಈ ಕಂಪನಿಯನ್ನು ಸ್ಥಾಪಿಸಿದರು. ಈಗ ಇದು ರನ್ನಿಂಗ್ ಶೂಗಳು ಮತ್ತು ಇತರೆ ಅಥ್ಲಿಟಿಕ್ ಫೂಟ್‍ವೇರ್‍ಗಳು, ಉಡುಗೆಗಳು ಮತ್ತು ಪರಿಕರಗಳ ತಯಾರಿಯಲ್ಲಿ ಮುಂಚೂಣಿಯಲ್ಲಿದೆ. ಎಸಿಕ್ಸ್ ಇಂಡಿಯಾ ಮೆಟ್ರೋಗಳು, ಟೈರ್ 1 ಮತ್ತು ಟೈರ್ 2 ಪಟ್ಟಣಗಳ 25 ನಗರಗಳಲ್ಲಿ ಒಟ್ಟಾರೆ 37 ಮಳಿಗೆಗಳನ್ನು ಹೊಂದಿದೆ. 2019ರಲ್ಲಿ ಇನ್ನೂ ಕೆಲವು ಮಳಿಗೆಗಳನ್ನು ತೆರೆಯುವ ಉದ್ದೇಶವನ್ನೂ ಎಸಿಕ್ಸ್ ಹೊಂದಿದ್ದು, ನಿರಂತರವಾಗಿ ಈ ಸಂಖ್ಯೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.

Story first published: Friday, August 23, 2019, 10:31 [IST]
Other articles published on Aug 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X