ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

350,000 ಡಾಲರ್ ಪ್ರಶಸ್ತಿ ಗೆಲ್ಲಲು ಭಾರತದ ಗಾಲ್ಫರ್ ಸಜ್ಜು

By Mahesh
 TAKE Solutions Masters 2018- Strong Indian challenge ready for Asian Tour stars

ಬೆಂಗಳೂರು, ಆಗಸ್ಟ್ 7: ಶ್ರೇಷ್ಠ ಫಾರ್ಮ್‍ನಲ್ಲಿರುವ ಗಗನ್ ಜೀತ್ ಭಲ್ಲೂರ್ ಪ್ರಬಲ ಭಾರತ ತಂಡವನ್ನು ಮುಂದಿನ ವಾರ ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಆರಂಭವಾಗಲಿರುವ ಟೇಕ್ ಸೋಲ್ಯೂಷನ್ಸ್ ಮಾಸ್ಟರ್ಸ್‍ನ ದ್ವಿತೀಯ ಆವೃತ್ತಿಯ ಇಂಡಿಯನ್ ಚಾಲೆಂಜ್‍ನಲ್ಲಿ ಮುನ್ನೆಡಸಲಿದ್ದಾರೆ.

ಹ್ಯಾಬಿಟಾಟ್ ಫಾರ್ ಹ್ಯುಮಾನಿಟಿ ಸ್ಟ್ಯಾಂಡಿಂಗ್ ಫಾರ್ ದಿ ಏಷ್ಯನ್ ಟೂರ್‍ನಲ್ಲಿ ಹತ್ತನೇ ರಾಂಕ್ ಹೊಂದಿರುವ ಭಲ್ಲೂರ್, ಭಾರತೀಯರ ಫೈಕಿ ಅತ್ಯಧಿಕ ರ್ಯಾಂಕ್ ಹೊಂದಿರುವ ಆಟಗಾರ ಎನಿಸಿದ್ದು, ಪ್ರಸಕ್ತ ವರ್ಷ ಐದು ಟೂರ್ನಿಗಳಲ್ಲಿ ಅಗ್ರ ಹತ್ತರಲ್ಲಿ ಹೋರಾಟ ಕೊನೆಗೊಳಿಸಿದ್ದಾರೆ.

ತವರಿನ ಸ್ಟಾರ್‍ಗಳಾದ ಆರು ಬಾರಿಯ ಏಷ್ಯನ್ ಟೂರ್ ವಿಜೇತ ಎಸ್.ಎಸ್.ಪಿ ಚವ್ರಾಸಿಯಾ, ಸ್ಥಳೀಯ ಬೆಂಗಳೂರಿನ ಆಟಗಾರ ಖಾಲಿನ್ ಜೋಶಿ ಮತ್ತು ಋತುವಿನ ಶ್ರೇಷ್ಠ ಆಟಗಾರ ಚಿರಾಗ್ ಕುಮಾರ್ ಅವರನ್ನೊಳಗೊಂಡ ತಂಡವನ್ನು ಭಲ್ಲೂರ್ ಮುನ್ನಡೆಸಲಿದ್ದಾರೆ. ಜೀವ್ ಮಿಲ್ಖಾ ಸಿಂಗ್ ಇತರ ಭಾರತೀಯರ ಪೈಕಿ ಕಣಕ್ಕಿಳಿಯುತ್ತಿರುವ ಆಟಗಾರರಲ್ಲಿ ಮತ್ತೋರ್ವ ಪ್ರಮುಖರೆನಿಸಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಮುಂದಿನ ವಾರ ಆರಂಭವಾಗಲಿರುವ ಟೇಕ್ ಸೋಲ್ಯೂಷನ್ ಮಾಸ್ಟರ್ಸ್‍ನ ದ್ವಿತೀಯ ಆವೃತ್ತಿಯ ಟೂರ್ನಿಯಲ್ಲಿ 25ಕ್ಕೂ ಹೆಚ್ಚು ಟೂರ್ ವಿಜೇತರು ಪಾಲ್ಗೊಳ್ಳುತ್ತಿದ್ದಾರೆ. ಆಗಸ್ಟ್ 9ರಿಂದ 12ರವರೆಗೆ ನಡೆಯಲಿರುವ ಏಷ್ಯನ್ ಟೂರ್‍ಗೆ ಹೆಚ್ಚಿಸಲಾಗಿರುವ 350,000 ಅಮೆರಿಕ ಡಾಲರ್ ಮೊತ್ತವನ್ನು ಗಳಿಸಲು 20 ವಿಭಿನ್ನ ರಾಷ್ಟ್ರಗಳ ಪ್ರತಿಭಾನ್ವಿತ 156 ಮಂದಿ ಕಣಕ್ಕಿಳಿಯುತ್ತಿದ್ದಾರೆ.

ಇತ್ತೀಚಿನ ಏಷ್ಯನ್ ಟೂರ್ ಹ್ಯಾಬಿಟಾಟ್ ಫಾರ್ ಹ್ಯುಮಾನಿಟಿ ಆರ್ಡರ್ ಆಫ್ ಮೆರಿಟ್‍ನಲ್ಲಿ ಅತ್ಯಧಿಕ 9ನೇ ರ್ಯಾಂಕ್‍ನಲ್ಲಿರುವ ಜಿಂಬಾಬ್ವೆಯ ಸ್ಕಾಟ್ ವಿನ್ಸೆಂಟ್, ಪ್ರಬಲ ಸ್ಥಳೀಯ ತಂಡದ ವಿರುದ್ಧ ವಿದೇಶಿ ತಂಡದ ಸಾರಥ್ಯವಹಿಸಿದ್ದಾರೆ.

ಪ್ರಸಕ್ತ ಋತುವಿನ ಆರು ಟೂರ್ನಿಗಳಲ್ಲಿ ಅಗ್ರ ಹತ್ತರಲ್ಲಿ ಪೂರ್ಣಗೊಳಿಸಿ ಉತ್ತಮ ಫಾರ್ಮ್‍ನಲ್ಲಿರುವ ವಿನ್ಸೆಂಟ್, ಭಾರತದಲ್ಲಿ ಮುಂದಿನ ವಾರ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದು, ಪ್ರೀಮಿಯರ್ ಟೂರ್ ಜಯಿಸಿ ಗೆಲುವಿನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.

ಟೂರ್ನಿ ಕುರಿತು ಪ್ರತಿಕ್ರಿಯಿಸಿರುವ 26 ವರ್ಷದ ವಿನ್ಸೆಂಟ್, ಇಲ್ಲಿಗೆ ಆಗಮಿಸಿರುವುದಕ್ಕೆ ರೋಮಾಂಚನಗೊಂಡಿದ್ದೇನೆ. ಖಾಲಿನ್ ಜೋಶಿ ಅವರ ತವರಿದು ಎಂಬುದು ನನಗೆ ಅರಿವಿದೆ. ಮುಂದಿನ ವಾರ ಅವರೊಂದಿಗೆ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ.

ಹೊಸ ಸ್ಥಳಕ್ಕೆ ಭೇಟಿ ನೀಡುವುದು ಎಂದೂಗ ರೋಮಾಂಚನಗೊಳಿಸುತ್ತದೆ. ಕೆಲವು ಆಟಗಾರರೊಂದಿಗೆ ಮಾತನಾಡಿದ್ದು, ಅವರೆಲ್ಲರು ಗಾಲ್ಫ್ ಕೋರ್ಸ್ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ," ಎಂದು ಹೇಳಿದ್ದಾರೆ.

ಹಾಲಿ ಚಾಂಪಿಯನ್ ಥಾಯ್ಲೆಂಡ್‍ನ ಪೂಮ್ ಸಕ್ಸನ್ಸಿನ್ ಫಿಲಿಪ್ಪಿನ್ಸ್‍ನ ಮಿಗ್ಯುಲ್ ಟಬ್ಯೆನಾ ಮತ್ತು ಥಾಯ್ಲೆಂಡ್‍ನ ಫೋರಮ್ ಮೆಸವಾಟ್ ಮತ್ತು ದಂಥಾಯ್ ಬೂನ್ಮಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಇತರ ಹೆಸರಾಂತ ಆಟಗಾರರಾಗಿದ್ದಾರೆ.

ಜೀವ ವಿಜ್ಞಾನ ಮತ್ತು ಸಪ್ಲೆ ಚೈನ್ ನಿರ್ವಹಣೆಯಲ್ಲಿ ಟೇಕ್ ಸೋಲ್ಯೂಷನ್ಸ್ ಜಾಗತಿಕವಾಗಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿದೆ. ಮೊದಲ ವರ್ಷದ ಆವೃತ್ತಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು 50,000 ಅಮೆರಿಕನ್ ಡಾಲರ್ ಮೊತ್ತ ಟೇಕ್ ಸೋಲ್ಯೂಷನ್ಸ್ ಏರಿಸಿದೆ.

ವಿಶ್ವದರ್ಜೆಯ ಕೂಟಗಳನ್ನು ಆಯೋಜಿಸುವ ಕ್ರೀಡಾ ಈವೆಂಟ್ಸ್ ಈ ಟೂರ್ನಿಯನ್ನು ಉತ್ತೇಜಿಸುತ್ತಿದೆ. ಕಳೆದ ವರ್ಷ ಯಶಸ್ವಿಯಾಂದತೆ ಈ ಬಾರಿಯೂ ಯಶಸ್ವಿಗೊಳಿಸಿ ಏಷ್ಯಾ ಟೂರ್ ಗಳಲ್ಲಿ ಅತಿ ದೊಡ್ಡ ಟೂರ್ ಆಗಿ ಬೆಳೆಸುವುದು ಇದರ ಉದ್ದೇಶವಾಗಿದೆ.

Story first published: Tuesday, August 7, 2018, 12:56 [IST]
Other articles published on Aug 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X