ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾದ ಭಾರತೀಯ ಕ್ರೀಡಾಪಟುಗಳಿಗೆ ಟಾಟಾ 'ಗೋಲ್ಡನ್' ಗಿಫ್ಟ್

ಕಳೆದ ವರ್ಷ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ನ್ನು ಕೊರೊನಾ ವೈರಸ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟು ಈ ವರ್ಷ ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿದೆ. ಹಾಗೂ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮಾಡಲಾಗದಂತಹ ಪದಕ ಸಾಧನೆಯನ್ನು ಮಾಡಿದೆ.

ಭಾರತೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕೆಟ್ಟ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್!ಭಾರತೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕೆಟ್ಟ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್!

ಹೌದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತೀಯರು ಒಟ್ಟು 7 ಪದಕಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದೆಡೆ ಒಲಿಂಪಿಕ್ಸ್ ಆರಂಭವಾದಾಗಿನಿಂದಲೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಯಾವುದೇ ಅಥ್ಲೀಟ್ ಕೂಡ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಆದರೆ ಈ ಬಾರಿ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆದರು.

ಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿ

ಭಾರತದ ಪುರುಷರ ಹಾಕಿ ತಂಡ ಕೂಡ ಕಂಚಿನ ಪದಕವನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಬರೋಬ್ಬರಿ 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಹೊಸ ಸಾಧನೆಯನ್ನು ನಿರ್ಮಿಸಿದೆ. ಇನ್ನುಳಿದಂತೆ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧೂ ಕಂಚು, ಮಹಿಳಾ ಬಾಕ್ಸಿಂಗ್‌‌ನಲ್ಲಿ ಬಾಕ್ಸರ್ ಲವ್ಲಿನಾ ಬರ್ಗಹೈನ್ ಕಂಚು, ಕುಸ್ತಿಪಟುಗಳಾದ ರವಿ ದಾಹಿಯಾ ಮತ್ತು ಬಜರಂಗ್ ಪೂನಿಯಾ ಕಂಚಿನ ಪದಕಗಳು ಹಾಗೂ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿಯ ಪದಕವನ್ನು ಗೆಲ್ಲುವುದರ ಮೂಲಕ ಪದಕದ ಖಾತೆಯನ್ನು ಆರಂಭಿಸಿದ್ದರು.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಈ ಬಲಿಷ್ಠ ತಂಡ ವಿಫಲವಾಗಲಿದೆ ಎಂದು ಭವಿಷ್ಯ ನುಡಿದ ಹರ್ಷೆಲ್ ಗಿಬ್ಸ್!ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಈ ಬಲಿಷ್ಠ ತಂಡ ವಿಫಲವಾಗಲಿದೆ ಎಂದು ಭವಿಷ್ಯ ನುಡಿದ ಹರ್ಷೆಲ್ ಗಿಬ್ಸ್!

ಹೀಗೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಒಟ್ಟು 7 ಕ್ರೀಡಾಪಟುಗಳಿಗೆ ವಿವಿಧ ರಾಜ್ಯ ಸರಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಭಿನ್ನವಿಭಿನ್ನವಾದ ನಗದು ಪುರಸ್ಕಾರ, ಉಚಿತ ಪ್ರಯಾಣ ಸೇವೆ ಮತ್ತು ಹುದ್ದೆಗಳನ್ನು ಘೋಷಿಸಿವೆ. ಆದರೆ ಪದಕವನ್ನು ಗೆಲ್ಲುವ ಹೊಸ್ತಿಲಿಗೆ ಬಂದು ಕೊನೆ ಕ್ಷಣದಲ್ಲಿ ಪದಕ ವಂಚಿತರಾದ ಕೆಲ ಭಾರತೀಯ ಕ್ರೀಡಾಪಟುಗಳಿಗೆ ಇದೀಗ ಭಾರತದ ಮೋಟಾರು ವಾಹನ ದೈತ್ಯ ಸಂಸ್ಥೆ ಟಾಟಾ ಮೋಟಾರ್ಸ್ ತಮ್ಮ ಸಂಸ್ಥೆಯ ನೂತನ ಕಾರೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ.

ಹೌದು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊನೆ ಕ್ಷಣದಲ್ಲಿ ಪದಕವನ್ನು ಕೈತಪ್ಪಿಸಿಕೊಂಡ ಭಾರತೀಯ ಕ್ರೀಡಾಪಟುಗಳಿಗೆ ಟಾಟಾ ಮೋಟಾರ್ಸ್ ಸಂಸ್ಥೆ ನೂತನ ಅಲ್ಟ್ರೋಜ್ ಕಾರುಗಳನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದೆ. ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ಮಾತ್ರವಲ್ಲ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಿ ಉತ್ತಮ ಪೈಪೋಟಿ ನಡೆಸುವ ಪ್ರತಿಯೊಬ್ಬ ಕ್ರೀಡಾಪಟುಗೂ ಸಹ ಗೌರವ ಸಿಗಬೇಕು, ಅವರು ಪಟ್ಟ ಕಷ್ಟಕ್ಕೆ ಪ್ರತಿಫಲವಾಗಿ ತಮ್ಮ ಸಂಸ್ಥೆಯ ಚಿನ್ನದ ಬಣ್ಣದ ಅಲ್ಟ್ರೋಜ್ ಕಾರನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿರುವುದಾಗಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

'ವಿರಾಟ್ ಕೊಹ್ಲಿ 42 ರನ್' ಆಟದ ಕುರಿತು ಪ್ರತಿಕ್ರಿಯಿಸಿದ ಅಜಿತ್ ಅಗರ್ಕರ್'ವಿರಾಟ್ ಕೊಹ್ಲಿ 42 ರನ್' ಆಟದ ಕುರಿತು ಪ್ರತಿಕ್ರಿಯಿಸಿದ ಅಜಿತ್ ಅಗರ್ಕರ್

ಒಲಿಂಪಿಕ್ಸ್‌ನಲ್ಲಿ ಪದಕವನ್ನು ಕೊನೆ ಕ್ಷಣದಲ್ಲಿ ಕೈ ತಪ್ಪಿಸಿಕೊಂಡಿದ್ದರೂ ಸಹ ಈ ಕ್ರೀಡಾಪಟುಗಳು ದೇಶದ ಇತರ ಯುವಜನತೆಗೆ ಮಾದರಿಯಾಗಿದ್ದಾರೆ ಮತ್ತು ಕ್ರೀಡಾಸ್ಫೂರ್ತಿಯನ್ನು ತುಂಬಿದ್ದಾರೆ. ಹೀಗಾಗಿ ಈ ಕ್ರೀಡಾಪಟುಗಳಿಗೆ ತಮ್ಮ ಸಂಸ್ಥೆಯಿಂದ ಈ ಸಣ್ಣ ಗೌರವವನ್ನು ನೀಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಸಂಸ್ಥೆ ತಿಳಿಸಿದೆ. ಇನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಗಾಲ್ಫರ್ ಅದಿತಿ ಅಶೋಕ್, ಭಾರತೀಯ ಮಹಿಳಾ ಹಾಕಿ ತಂಡ ಹಾಗೂ ರಸ್ಲರ್ ದೀಪಕ್ ಪೂನಿಯಾ ಇನ್ನೇನು ಪದಕ ಗೆಲ್ಲುವ ಹೊಸ್ತಿಲಲ್ಲಿ ಎಡವಿದರು. ಹೀಗಾಗಿ ಈ ಆಟಗಾರರಿಗೆ ಟಾಟಾ ಮೋಟಾರ್ಸ್ ನೀಡುವ ಚಿನ್ನದ ಅಲ್ಟ್ರೋಜ್ ಕಾರಿನ ಗೌರವ ಸಲ್ಲಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 14, 2021, 9:57 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X