ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಜೊತೆ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್ ಮಹತ್ವದ ಒಪ್ಪಂದ

The MPL Sports Foundation becomes the Indian Olympic Associations Principal Partner

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಜೊತೆಗೆ ಪ್ರಧಾನ ಪಾಲುದಾರನಾಗಿ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್ ಕೈ ಜೋಡಿಸಿದೆ. ಈ ಮೂಲಕ ಟೋಕಿಯೋ ಟೋಕಿಯೋ 2020 ಒಲಿಂಪಿಕ್ಸ್‍ಗೆ ತೆರಳುವ ಭಾರತ ತಂಡಕ್ಕೆ ಮತ್ತು 2022ರ ಕಾಮನ್‍ವೆಲ್ತ್ ಹಾಗೂ ಏಷ್ಯನ್‍ಗೇಮ್ಸ್ ತಂಡಗಳಿಗೆ ಫೌಂಡೇಶನ್ ಪ್ರಧಾನ ಪಾಲುದಾರನಾಗಿರುತ್ತದೆ.

ಈ ಸಹಯೋಗದ ಮೂಲಕ ಟೋಕಿಯೋ 2020 ಒಲಿಂಪಿಕ್ಸ್‍ಗೆ ತೆರಳುವ ಭಾರತ ತಂಡಕ್ಕೆ ಮತ್ತು 2022ರ ಕಾಮನ್‍ವೆಲ್ತ್ ಹಾಗೂ ಏಷ್ಯನ್‍ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡಗಳಿಗೆ ಫೌಂಡೇಶನ್ ಪ್ರಧಾನ ಪಾಲುದಾರನಾಗಿರುತ್ತದೆ. ಇದರ ಜತೆಗೆ ಕ್ರೀಡಾ ಮತ್ತು ಅಥ್ಲೆಟಿಕ್ ಮನೋರಂಜನಾ ಬ್ರಾಂಡ್ ಆಗಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ 2022ರ ಎರಡೂ ಕ್ರೀಡಾಕೂಟಗಳಿಗೆ ಅಧಿಕೃತ ಕಿಟ್ ಪಾಲುದಾರನಾಗಿಯೂ ಹೆಸರಿಸಲಾಗಿದೆ.

ಟೋಕಿಯೋ ಒಲಿಂಪಿಕ್ಸ್: ಭಾರತದ ಸಮವಸ್ತ್ರವನ್ನು ಅನಾವರಣಗೊಳಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜುಟೋಕಿಯೋ ಒಲಿಂಪಿಕ್ಸ್: ಭಾರತದ ಸಮವಸ್ತ್ರವನ್ನು ಅನಾವರಣಗೊಳಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜು

"ಭಾರತ ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಸೂಪರ್‌ ಪವರ್ ಆಗುವ ಶಕ್ತಿ ಹೊಂದಿದೆ. ಎಂಪಿಎಲ್ ಸ್ಪೋಟ್ರ್ಸ್ ಫೌಂಡೇಷನ್ ಮೂಲಕ ಪ್ರತಿಭಾವಂತ ಯುವಕರಿಗೆ ಕ್ರೀಡಾಕ್ಷೇತ್ರದಲ್ಲಿ ಮತ್ತು ಇ-ಸ್ಪೋರ್ಟ್‍ನಲ್ಲಿ ಅವಕಾಶಗಳು ದೊರೆಯುವಂತೆ ಮಾಡುವುದಾಗಿದೆ. ಐಓಎ ಜತೆಗೆ ಪಾಲುದಾರಿಕೆ ಮಾಡಿಕೊಳ್ಳುವುದನ್ನು ನಾವು ಗೌರವ ಎಂದು ಭಾವಿಸಿದ್ದೇವೆ. ಇದು ಧೀರ್ಘಾವಧಿಯ ಸಹಯೋಗವಾಗುತ್ತದೆ ಎಂಬ ನಿರೀಕ್ಷೆ ನಮ್ಮದು. ಭಾರತದ ಕ್ರೀಡೆಯ ಭವಿಷ್ಯವನ್ನು ಅಭಿವೃದ್ಧಿಪಡಿಸಲು ಜಂಟಿಯಾಗಿ ಕಾರ್ಯನಿರ್ವಹಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಮೊಬೈಲ್ ಪ್ರಿಮಿಯರ್ ಲೀಗ್ (ಎಂಪಿಎಲ್) ಸಹಸಂಸ್ಥಾಪಕ ಮತ್ತು ಸಿಇಓ ಸಾಯಿ ಶ್ರೀನಿವಾಸ್ ಹೇಳಿದ್ದಾರೆ.

ಒಲಿಂಪಿಕ್ಸ್ ಮತ್ತು ಇತರ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅಥ್ಲೀಟ್‍ಗಳ ಆಯ್ಕೆ ಪ್ರಕ್ರಿಯೆಯನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಸಿ) ನಡೆಸುತ್ತದೆ. ಟೋಕಿಯೊ ಒಲಿಂಪಿಕ್ಸ್‍ಗೆ ಪೂರ್ವಭಾವಿಯಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಓಸಿ) ಮೊಟ್ಟಮೊದಲ ಒಲಿಂಪಿಕ್ ವರ್ಚುವಲ್ ಸೀರೀಸ್ ಘೋಷಣೆ ಮಾಡಿದ ಬೆನ್ನಲ್ಲೇ ಐಒಸಿ ಜೊತೆಗೆ ಎಂಪಿಎಲ್ ಈ ಒಪ್ಪಂದವನ್ನು ಮಾಡಿಕೊಂಡಿದೆ.

ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್‌ ಆಯೋಜನೆಗೆ ಒಲಿಂಪಿಕ್ಸ್ ಸಮಿತಿ ಒಪ್ಪಿಗೆಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್‌ ಆಯೋಜನೆಗೆ ಒಲಿಂಪಿಕ್ಸ್ ಸಮಿತಿ ಒಪ್ಪಿಗೆ

ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್ ಸಮಾಜದ ಎಲ್ಲ ವರ್ಗಗಳಿಂದ ಅಥ್ಲೀಟ್‍ಗಳನ್ನು ಗುರುತಿಸುವುದು ಮತ್ತು ಅವರಿಗೆ ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಮತ್ತು ಅದನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಮೂಲಕ ಭಾರತದಲ್ಲಿ ಕ್ರೀಡೆ ಮತ್ತು ಇ-ಕ್ರೀಡಾ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಿ ಪರಿವರ್ತಿಸುವ ಉದ್ದೇಶ ಹೊಂದಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Story first published: Friday, June 18, 2021, 19:36 [IST]
Other articles published on Jun 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X