ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ ಥೀಮ್ ಬಿಡುಗಡೆ, ಕ್ಷಣಗಣನೆ ಶುರು

By Red Communications
Theme for PhonePe Bengaluru Midnight Marathon Unveiled

ಬೆಂಗಳೂರು, ನವೆಂಬರ್ 27: ದೇಶದ ಅತ್ಯಂತ ಹಳೆಯ ಮ್ಯಾರಥಾನ್‍ಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿರುವ ಮತ್ತು ದೇಶದ ಮೊದಲ ಮಿಡ್‌ನೈಟ್ ಮ್ಯಾರಥಾನ್ ಆಗಿರುವ ಪ್ರತಿಷ್ಠಿತ ಫೋನ್‌ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ (ಬಿಎಂಎಂ)ನ 13ನೇ ಆವೃತ್ತಿಗೆ ಬುಧವಾರ (ನವೆಂಬರ್ 27) ಥೀಮ್ ಬಿಡುಗಡೆ ಮಾಡಲಾಯಿತು.

ಸೌತ್ ಏ‍ಷಿಯನ್ ಗೇಮ್ಸ್‌: ಕಬಡ್ಡಿ ತಂಡದ ನಾಯಕನಾಗಿ ದೀಪಕ್ ಹೂಡಾಸೌತ್ ಏ‍ಷಿಯನ್ ಗೇಮ್ಸ್‌: ಕಬಡ್ಡಿ ತಂಡದ ನಾಯಕನಾಗಿ ದೀಪಕ್ ಹೂಡಾ

ಐಟಿಎಫ್ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಚಿನ್ನದ ಪದಕ ವಿಜೇತ ಯುವ ಸಾಧಕ ಖ್ವಾಯಿಷ್ ಪವಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಥೀಮ್ ಬಿಡುಗಡೆ ಮಾಡಿದರು. ಈ ವರ್ಷದ ಥೀಮ್ 'ರನ್ ಫಾರ್ ಡಿಜಿಟಲ್ ಇಂಡಿಯಾ' (ಡಿಜಿಟಲ್ ಇಂಡಿಯಾಕ್ಕಾಗಿ ಓಡಿ). ದೇಶವು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಪೂರಕವಾಗಿ ಈ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ.

ಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

ಫೋನ್‌ಪೇ ಬಿಎಂಎಂ 2019 ಸಂಪೂರ್ಣ ಡಿಜಿಟಲ್ ಆಗಿಯೇ ನಡೆಯಲಿದ್ದು, ನೋಂದಣಿ ಪ್ರಕ್ರಿಯೆ, ಪ್ರಚಾರ ಚಟುವಟಿಕೆಗಳಿಗೆ ಡಿಜಿಟಲ್ ಸ್ಕ್ರೀನ್‍ಗಳು, ಮಾರ್ಕೆಟಿಂಗ್ ಹಾಗೂ ಮ್ಯಾರಥಾನ್ ದಿನ ಮಾರ್ಗ ಸೂಚಕಗಳನ್ನು ಪ್ರದರ್ಶಿಸಲು ಡಿಜಿಟಲ್ ಸೈನ್‌ನೋರ್ಡ್‌ಗಳನ್ನು ಬಳಸಲಾಗುವುದು.

2,500ಕ್ಕೂ ಹೆಚ್ಚು ಓಟಗಾರರು

2,500ಕ್ಕೂ ಹೆಚ್ಚು ಓಟಗಾರರು

ಸಾವಿರಾರು ವೃತ್ತಿಪರ ಓಟಗಾರರು, ಅಂತಾರಾಷ್ಟ್ರೀಯ ಅಥ್ಲೀಟ್‍ಗಳು, ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕರು, ಕಾರ್ಪೊರೇಟ್‍ಗಳು ಹಾಗೂ ಎನ್‍ಜಿಒ ಸದಸ್ಯರು ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‍ಬಿಐಟಿಸಿ) ವತಿಯಿಂದ ವೈಟ್‌ಫೀಲ್ಡ್‌ ಕೆಟಿಪಿಒದಲ್ಲಿ ಡಿಸೆಂಬರ್ 07, 2019ರ ಶನಿವಾರ ಆಯೋಜಿಸಲಾಗಿರುವ ಫೋನ್‌ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‍ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ 2,500ಕ್ಕೂ ಹೆಚ್ಚು ಓಟಗಾರರು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸಾಮಾಜಿಕ ಕಳಕಳಿಯ ಉದ್ದೇಶ

ಸಾಮಾಜಿಕ ಕಳಕಳಿಯ ಉದ್ದೇಶ

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಫಿಟ್‍ನೆಸ್ ಬಗ್ಗೆ ಅಪಾರ ಕಾಳಜಿಯಿರುವ ಬೆಂಗಳೂರಿನಂತಹ ನಗರಗಳಲ್ಲಿ ಮ್ಯಾರಥಾನ್‍ಗಳು ಅತಿದೊಡ್ಡ ಸಾಮುದಾಯಿಕ ಕ್ರೀಡಾ ಚಟುವಟಿಕೆಯೆಂದು ಹೆಸರು ಪಡೆದಿವೆ. ಪ್ರತಿ ವರ್ಷ 2,00,000ಕ್ಕೂ ಹೆಚ್ಚು ಓಟಗಾರರು ದೇಶದಲ್ಲಿ ನಡೆಯುವ ವಿವಿಧ ಅಂತಾರಾಷ್ಟ್ರೀಯ ಮ್ಯಾರಥಾನ್‍ಗಳಲ್ಲಿ ಪಾಲ್ಗೊಂಡು ನಾನಾ ಸಾಮಾಜಿಕ ಹಾಗೂ ಚಾರಿಯೇಬಲ್ ಉದ್ದೇಶದ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ ಅಂತಹ ವಿಶಿಷ್ಟ ಮ್ಯಾರಥಾನ್‍ಗಳಲ್ಲೊಂದು. 2007ರಿಂದ 2018ರವರೆಗೆ ನಿರಂತರವಾಗಿ ಈ ಅಂತಾರಾಷ್ಟ್ರೀಯ ಮ್ಯಾರಥಾನ್ ನಡೆಯುತ್ತಾ ಬಂದಿದ್ದು, ಈ ವರ್ಷ ಸುಮಾರು 12,000 ಓಟಗಾರರು ನಗರದ ಜನರ ಹಾಗೂ ಸಂಸ್ಕೃತಿಯ ಪ್ರತೀಕವೇ ಆಗಿ ಬೆಳೆದು ಬಂದಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಓಟ, ಮನರಂಜನೆ, ತಿಂಡಿ-ತಿನಿಸುಗಳು

ಓಟ, ಮನರಂಜನೆ, ತಿಂಡಿ-ತಿನಿಸುಗಳು

ಮಿಡ್‌ನೈಟ್ ಮ್ಯಾರಥಾನ್‍ನ ವೈಯಕ್ತಿಕ ಹಾಗೂ ರಿಲೇ ಓಟಗಳಿಗೆ ಈಗಾಗಲೇ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತರು www.midnightmarathon.inಗೆ ಲಾಗಿನ್ ಆಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಡಿಸೆಂಬರ್ 7ರಂದು ನಡೆಯುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿಯಲ್ಲಿ ಫೋನ್‌ಪೇ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, ಅಕಮೈ 10ಕೆ ರನ್, 5ಕೆ ಐಟಿ ಸಿಟಿ ಫನ್ ರನ್, ಎಚ್‍ಪಿಸಿಎಲ್ ಕಮ್ಯುನಿಟಿ ರಿಲೇ, ಏರ್‍ಬಸ್ ಕಾರ್ಪೊರೇಟ್ ರಿಲೇ ಹಾಗೂ ಪ್ರೈಮ್ ವೆಂಚರ್ಸ್ ಪಾರ್ಟ್‌ನರ್ಸ್, ಫಿಟ್‍ನೆಸ್ ಸ್ಟಾರ್ಟಪ್ ರಿಲೇ ಸೇರಿವೆ. ಅಂದು ಇಡೀ ರಾತ್ರಿ ಓಟಗಾರರನ್ನು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಉತ್ಸಾಹದಿಂದ ಇರಿಸಲು ಲೈವ್ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾನಾ ರೀತಿಯ ತಿಂಡಿ ತಿನಿಸುಗಳ ಫುಡ್‌ಕೋರ್ಟ್‌ಗಳು ಇರಲಿವೆ.

ಸಮಾಜ ಕಲ್ಯಾಣ-ಗ್ರಾಮೀಣ ಸಬಲೀಕರಣ

ಸಮಾಜ ಕಲ್ಯಾಣ-ಗ್ರಾಮೀಣ ಸಬಲೀಕರಣ

ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‍ಬಿಐಟಿಸಿ) ಆಯೋಜಿಸುವ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‍ನ ಮೊದಲ ಆವೃತ್ತಿ 2007ರ ಮೇ 19ರಂದು ನಗರದಲ್ಲಿ ನಡೆದಿತ್ತು. 13ನೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ ಬಗ್ಗೆ ಮಾಹಿತಿ ನೀಡಿದ ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‍ಬಿಐಟಿಸಿ) ಅಧ್ಯಕ್ಷ ವಂಶಿಧರ್ ಪೊತುಲಾ ಅವರು, ‘ಆರ್‍ಬಿಐಟಿಸಿಯ ಸಮಾಜ ಸೇವಾ ಯೋಜನೆಗಳಿಗೆ ಬಿಎಂಎಂ ಪ್ರಮುಖ ನಿಧಿ ಸಂಗ್ರಹಣಾ ಕಾರ್ಯಕ್ರಮವಾಗಿದೆ. ಕಳೆದ 12 ಆವೃತ್ತಿಯಲ್ಲಿ ಸಂಗ್ರಹಿಸಲಾದ ನಿಧಿಯನ್ನು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಸಮಾಜ ಕಲ್ಯಾಣ ಹಾಗೂ ಗ್ರಾಮೀಣ ಸಬಲೀಕರಣ ಉದ್ದೇಶಗಳಿಗೆ ಪ್ರಮುಖವಾಗಿ ಬಳಸಲಾಗಿದೆ. ಈ ಕಾರ್ಯಕ್ರಮಗಳನ್ನು ಮಹಿಳೆಯರು ಮತ್ತು ಮಕ್ಕಳನ್ನು ಕೇಂದ್ರಿತವಾಗಿರಿಸಿಕೊಂಡು ರೂಪಿಸಲಾಗಿದೆ. 6 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿರುವುದು, ಜಸ್ಟ್ ಫಾರ್ ಕಿಕ್ಸ್‍ನಂತಹ ಸಂಸ್ಥೆಗಳ ಜೊತೆ ಸೇರಿ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುವುದು, ಎಚ್‌ಪಿ ಕಂಪನಿ ಜೊತೆ ಸೇರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‍ರೂಮ್‍ಗಳನ್ನು ಆರಂಭಿಸಿರುವುದು ಇವು ಕಳೆದ ಕೆಲ ವರ್ಷಗಳಲ್ಲಿ ಆರ್‍ಬಿಐಟಿಸಿ ಕೈಗೊಂಡ ಯೋಜನೆಗಳಾಗಿವೆ' ಎಂದು ತಿಳಿಸಿದರು.

ವಿವಿಧ ವಿಭಾಗಗಳ ಸ್ಪರ್ಧೆಯ ವೇಳಾಪಟ್ಟಿ

ವಿವಿಧ ವಿಭಾಗಗಳ ಸ್ಪರ್ಧೆಯ ವೇಳಾಪಟ್ಟಿ

1. ಎಚ್‍ಪಿಸಿಎಲ್ ಕಮ್ಯುನಿಟಿ ರಿಲೇ, 5 x 1 ಕಿ.ಮೀ., ಸಂಜೆ 4 pm.
2. ಐಟಿ ಸಿಟಿ ಫನ್ ರನ್, 5 ಕಿ.ಮೀ., ಸಂಜೆ 6.30 pm.
3. ಅಕಮೈ 10ಕೆ ರನ್, 10 ಕಿ.ಮೀ., ರಾತ್ರಿ 8.30 pm.
4. ಫೋನ್‌ಪೇ ಫುಲ್ ಮ್ಯಾರಥಾನ್, 42.195 ಕಿ.ಮೀ., ರಾತ್ರಿ 10.30 pm.
5. ಹಾಫ್ ಮ್ಯಾರಥಾನ್, 21.097 ಕಿ.ಮೀ., ರಾತ್ರಿ 10.40 pm.
6. ಏರ್‌ಬಸ್ ಕಾರ್ಪೊರೇಟ್ ರಿಲೇ, 4 X 5 ಕಿ.ಮೀ., ರಾತ್ರಿ 10.50 pm.
7. ಪ್ರೈಮ್ ವೆಂಚರ್ಸ್ ಪಾರ್ಟ್‌ನರ್ಸ್, ಫಿಟ್ನೆಸ್ ಸ್ಟಾರ್ಟಪ್ ಚಾಲೆಂಜ್ ರಿಲೇ, 4 x 5 ಕಿ.ಮೀ., ರಾತ್ರಿ 11.00 pm.

Story first published: Wednesday, November 27, 2019, 19:09 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X