ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಭೀತಿ: ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಿಕೆ

Tokyo 2020: Olympics to be postponed until 2021

ಟೋಕಿಯೋ, ಮಾರ್ಚ್ 24: ಮಾರಕ ಕೊರೊನಾವೈರಸ್ ಸೋಂಕಿನಿಂದಾಗಿ ವಿಶ್ವದಾದ್ಯಂತ ಎಲ್ಲಾ ಪ್ರಮುಖ ಕ್ರೀಡಾಸ್ಪರ್ಧೆಗಳು ರದ್ದಾಗುತ್ತಿದೆ ಇಲ್ಲವೆ ಮುಂದೂಡಲ್ಪಡುತ್ತಿದೆ. ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್‌ 2020 ಕೂಡ ಮುಂದೂಡಲ್ಪಟ್ಟಿದೆ. ಒಂದು ವರ್ಷದ ಮಟ್ಟಿಗೆ ಅಂದರೆ 2021ಕ್ಕೆ ಜಪಾನ್‌ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಲಾಗಿದೆ.

ಸಮಾಜಕ್ಕೆ ಅಪಾಯಕಾರಿಯಾಗಬೇಡಿ ಎಂದ ಗೌತಮ್ ಗಂಭೀರ್ಸಮಾಜಕ್ಕೆ ಅಪಾಯಕಾರಿಯಾಗಬೇಡಿ ಎಂದ ಗೌತಮ್ ಗಂಭೀರ್

ಕೊರೊನಾವೈರಸ್‌ನಿಂದಾಗಿ ಅನೇಕ ರಾಷ್ಟ್ರಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದವು. ಅನೇಕ ರಾಷ್ಟ್ರಗಳು ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾಕೂಡ ಮುಂದೂಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ(ಐಒಸಿ)ಯನ್ನು ಕೋರಿಕೊಂಡಿದ್ದವು ಕೂಡ.

ಆರಂಭದಲ್ಲಿ ಐಒಸಿ, ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಕೆನಡಾ, ಆಸ್ಟ್ರೇಲಿಯಾ ಮತ್ತು ಬ್ರಿಟಿಷ್ ಒಲಿಂಪಿಕ್ ಅಸೋಸಿಯೇಶನ್ ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದಿರುವ ನಿಲುವು ಪ್ರಕಟಿಸಿದಾಗ ಒಲಿಂಪಿಕ್ಸ್ ಮುಂದೂಡಲಾಗಿದೆ.

ಎರಡನೇ ಮಗುವಿನ ಖುಷಿಯಲ್ಲಿ ಸುರೇಶ್ ರೈನಾ-ಪ್ರಿಯಾಂಕಾ ರೈನಾ ದಂಪತಿಎರಡನೇ ಮಗುವಿನ ಖುಷಿಯಲ್ಲಿ ಸುರೇಶ್ ರೈನಾ-ಪ್ರಿಯಾಂಕಾ ರೈನಾ ದಂಪತಿ

ಐಒಸಿ ಸದಸ್ಯ ಡಿಕ್ ಪೌಂಡ್, ಟೋಕಿಯೋ ಒಲಿಂಪಿಕ್ ಮುಂದೂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಪ್ರತಿಷ್ಟಿತ ಒಲಿಂಪಿಕ್ ಕ್ರೀಡಾಕೂಟ ಮುಂದೂಡಲ್ಪಟಟಿದ್ದು ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲಬಾರಿ.

Story first published: Tuesday, March 24, 2020, 10:39 [IST]
Other articles published on Mar 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X