ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೆಸ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ

Tokyo Olympic bronze medalist Bajrang Punia will miss wrestling world championships

ನವದೆಹಲಿ, ಆಗಸ್ಟ್ 23: ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತದ ರೆಸ್ಲರ್ ಭಜರಂಗ್ ಪೂನಿಯಾ ಈ ಮುಂಬರುವ ರೆಸ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಭಜರಂಗ್ ಪೂನಿಯಾ ಗಾಯಗೊಂಡಿದ್ದು ಅವರಿಗೆ ಆರು ವಾರಗಳ ವಿಶ್ರಾಂತಿಯನ್ನು ಸೂಚಿಸಲಾಗಿದೆ.

ಮುಂಬರುವ ಅಕ್ಟೋಬರ್‌ನಲ್ಲಿ ರೆಸ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್‌ ನಡೆಯಲಿದೆ. ಆದರೆ ಭಜರಂಗ್ ಪೂನಿಯಾ ಒಲಿಂಪಿಕ್ಸ್‌ಗೆ ಮುನ್ನವೇ ಲಿಗಮೆಂಟ್ ಗಾಯಕ್ಕೆ ತುತ್ತಾಗಿದ್ದರು. ಈ ನೋವಿನಲ್ಲೇ ಭಜರಂಗ್ ಪೂನಿಯಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಜೊತೆಗೆ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ರೆಸ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್‌್ಗೆ ಮುನ್ನ ಆರು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದೆ. ಅದಾದ ಬಳಿಕವೇ ಭಜರಂಗ್ ಪೂನಿಯಾ ಅಭ್ಯಾಸವನ್ನು ಆರಂಬಿಸಬೇಕಾಗುತ್ತದೆ. ಹೀಗಾಗಿ ಈ ಚಾಂಪಿಯನ್‌ಶಿಪ್‌ನಿಮದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ ಭಜರಂಗ್ ಪೂನಿಯಾ. ಅಕ್ಟೋಬರ್ 2 ರಿಂದ10ರ ವರೆಗೆ ನಾರ್ವೆಯ ಓಸ್ಲೋದಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ.

ರಷ್ಯಾದಲ್ಲಿ ನಡೆದ ಅಲಿ ಅಲೀವ್ ಪಂದ್ಯಾವಳಿಯಲ್ಲಿ ಭಜರಂಗ್ ಗಾಯಗೊಂಡಿದ್ದರು. ಅಲ್ಲಿ ಈ ಕಾರಣದಿಂದಾಗಿಯೇ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಈಗ ಭಜರಂಗ್ ಅವರು ರಿಹ್ಯಾಬಿಲಿಟೇಶನ್ ಪೂರ್ಣಗೊಳ್ಳುವವರೆಗೂ ತರಬೇತಿಯನ್ನು ಆರಂಭಿಸುವಂತಿಲ್ಲ.

"ಇದು ಲಿಗಮೆಂಟ್ ಟಿಯರ್. ಹೀಗಾಗಿ ಆರು ವಾರಗಳವರೆಗೆ ರಿಹ್ಯಾಬಿಲಿಟೇಶನ್ ನಡೆಸಲು ನನಗೆ ಡಾ ದಿನ್ಶಾ ಸೂಚಿಸಿದ್ದಾರೆ. ಹೀಗಾಗಿ ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ" ಎಂದು ಭಜರಂಗ್ ಪೂನಿಯಾ ಮಾಹಿತಿ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಗದಗೆಯೂ ಪ್ರತಿಕ್ರಿಯಿಸಿದ್ದಾರೆ." ಇದು ನನ್ನ ಪ್ರಥಮ ಒಲಿಂಪಿಕ್ಸ್ ಕ್ರೀಡಾಕೂಟವಾಗಿತ್ತು. ನಾನು ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ಹೊಂದಿದ್ದರಿಂದ ನಾನು ಟೋಕಿಯೋದಲ್ಲಿ ನೋವಿನ ಮಧ್ಯೆಯೂ ಸ್ಪರ್ಧಿಸಲು ನಿರ್ಧರಿಸಿದ್ದೆ. ನನ್ನ ಕನಸನ್ನು ಪೂರೈಸಲು ನಾನು ಅದನ್ನು ಮಾಡಲೇಬೇಕಾಗಿತ್ತು" ಎಂದಿದ್ದಾರೆ ಭಜರಂಗ್ ಪೂನಿಯಾ.

Story first published: Monday, August 23, 2021, 23:38 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X