ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿಗೆ ಹೊಸ ಕಾರು ಗಿಫ್ಟ್!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಭಾರತದ ಪ್ರತಿಷ್ಠಿತ ಕಾರು ಉತ್ಪಾದನಾ ಕಂಪನಿ ರೆನಾಲ್ಟ್ ಇಂಡಿಯಾ ನೂತನ ಮಾದರಿಯ ಕಾರನ್ನು ಉಡುಗೊರೆಯಾಗಿ ನೀಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾನು ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದ ಮೊದಲ ಪದಕವಾಗಿತ್ತು.

ಐಪಿಎಲ್ ಆಡಲು ಸ್ಟೀವ್ ಸ್ಮಿತ್ ರೆಡಿ, ಟಿ20 ವಿಶ್ವಕಪ್ ವೇಳೆ ಆ್ಯರನ್ ಫಿಂಚ್ ಚೇತರಿಕೆ ನಿರೀಕ್ಷೆಐಪಿಎಲ್ ಆಡಲು ಸ್ಟೀವ್ ಸ್ಮಿತ್ ರೆಡಿ, ಟಿ20 ವಿಶ್ವಕಪ್ ವೇಳೆ ಆ್ಯರನ್ ಫಿಂಚ್ ಚೇತರಿಕೆ ನಿರೀಕ್ಷೆ

ರೆನಾಲ್ಟ್ ಇಂಡಿಯಾದ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಸುದೀರ್ ಮಲ್ಹೋತ್ರ ಅವರು ಮೀರಾಬಾಯಿ ಚಾನುಗೆ ಉಡುಗೊರೆಯಾಗಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ SUVಯ ಕೀ ಹಸ್ತಾಂತರಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ಕಾರಿಗೆ 5.64 ಲಕ್ಷ ರೂ. ಆರಂಭಿಕ ಬೆಲೆಯಿದೆ. 999 ಸಿಸಿ ಇಂಜಿನ್‌ನ ಈ ಕಾರು ಸುಮಾರು 20 ಕಿ.ಮೀ. ಮೈಲೇಜ್ ಹೊಂದಿದೆ.

ಓಡಾಟಕ್ಕೆ ಪರದಾಡುತ್ತಿದ್ದ ಮೀರಾಗೆ ಭರ್ಜರಿ ಉಡುಗೊರೆ

ಓಡಾಟಕ್ಕೆ ಪರದಾಡುತ್ತಿದ್ದ ಮೀರಾಗೆ ಭರ್ಜರಿ ಉಡುಗೊರೆ

ಭಾರತೀಯ ಮಾರುಕಟ್ಟೆಯಲ್ಲಿ ತಯಾರಕರ ಇತ್ತೀಚಿನ ಕೊಡುಗೆಯಾಗಿರುವ ಕಿಗರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಿಗರ್‌ನ ಯಶಸ್ಸಿನ ಹಿಂದಿನ ಒಂದು ಪ್ರಮುಖ ಕಾರಣವೆಂದರೆ ಅದರ ಕಡಿಮೆ ಬೆಲೆ. ನಮ್ಮ ದೇಶದಲ್ಲಿ ಜನ ಪಡೆಯಬಹುದಾದ ಅತ್ಯಂತ ಒಳ್ಳೆ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಕಿಗರ್ ಒಂದಾಗಿದೆ. ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಯಸಿದ ಜನ ಅದನ್ನು ಪಡೆಯಬಹುದು. ಕಿಗರ್‌ ಎಕ್ಸ್‌ ಶೋರೂಂ ಆರಂಭಿಕ ಬೆಲೆ 5.64 ಲಕ್ಷ ರೂ. ಎಕ್ಸ್‌ ಶೋರೂಮ್ ಗರಿಷ್ಠ ಬೆಲೆ 10.09 ಲಕ್ಷ ರೂ. ಅಂತೂ ಒಲಿಂಪಿಕ್ಸ್‌ಗೂ ಮುನ್ನ ಇಂಪಾಲದಲ್ಲಿರುವ ಕ್ರೀಡಾ ಕೇಂದ್ರದಲ್ಲಿ ಅಭ್ಯಾಸ ಮಾಡುವುದಕ್ಕಾಗಿ ತಾನಿರುವ ಊರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದ ಇಂಪಾಲಕ್ಕೆ ಪ್ರಯಾಣಿಸಲು ಟ್ರಕ್ ಡ್ರೈವರ್‌ಗಳಲ್ಲಿ ಫ್ರೀ-ಲಿಫ್ಟ್ ಸಹಾಯ ಕೇಳಿ ಪರದಾಡಿದ್ದ ಮೀರಾ ಇನ್ಮುಂದೆ ತನ್ನದೇ ಸ್ವಂತ ಕಾರಿನಲ್ಲಿ ಓಡಾಡಬಹುದಾಗಿದೆ.

ಒಲಿಂಪಿಕ್ಸ್‌ನಲ್ಲಿ ಎರಡನೇ ಬಾರಿಗೆ ವೇಟ್ ಲಿಫ್ಟಿಂಗ್‌ನಲ್ಲಿ ಪದಕ

ಒಲಿಂಪಿಕ್ಸ್‌ನಲ್ಲಿ ಎರಡನೇ ಬಾರಿಗೆ ವೇಟ್ ಲಿಫ್ಟಿಂಗ್‌ನಲ್ಲಿ ಪದಕ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಒದಕ ಗೆದ್ದಿದ್ದು ವಿಶೇಷ ದಾಖಲೆಗಳಿಗೆ ಕಾರಣರಾಗಿತ್ತು. ಟೋಕಿಯೋದಲ್ಲಿ ಭಾರತಕ್ಕೆ ಲಭಿಸಿದ್ದ ಮೊದಲ ಪದಕ ಅದಾಗಿದ್ದರೆ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ್ದ ಎರಡನೇ ಪದಕವಾಗಿ ಗುರುತಿಸಿಕೊಂಡಿತ್ತು. ಇದಕ್ಕೂ ಮುನ್ನ ವೇಟ್‌ ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದರು. 2000ರ ಸಿಡ್ನಿ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಮಲ್ಲೇಶ್ವರಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ಪದಕ ಗೆದ್ದ ಮೀರಾಗೆ ಈಗಾಗಲೇ ಬಹಳಷ್ಟು ಪುರಸ್ಕಾರಗಳು ಸಿಕ್ಕಿವೆ. ಅಶ್ವಿನಿ ವೈಷ್ಣವ್ ಅವರಿಂದ (ರೈಲ್ವೇ ಮಂತ್ರಿ) 2 ಕೋಟಿ ರೂಪಾಯಿ, ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರಿಂದ 1 ಕೋಟಿ ರೂಪಾಯಿ, ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಮೀರಾಬಾಯಿಯನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ನೇಮಿಸಿದ್ದಾರೆ, ಬಿಸಿಸಿಐನಿಂದ 50 ಲಕ್ಷ ರೂಪಾಯಿ, ಐಒಎಯಿಂದ 40 ಲಕ್ಷ ರೂಪಾಯಿ * BYJU'S ನಿಂದ 1 ಕೋಟಿ ರೂಪಾಯಿ ನಗದು ಪುರಸ್ಕಾರಗಳು ಮೀರಾಗೆ ಸಿಕ್ಕಿವೆ.

ಭಾರತಕ್ಕೆ ದಾಖಲೆಯ ಪದಕಗಳು

ಭಾರತಕ್ಕೆ ದಾಖಲೆಯ ಪದಕಗಳು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತಕ್ಕೆ ದಾಖಲೆ ಸಂಖ್ಯೆಯ ಪದಕಗಳು ಲಭಿಸಿದ್ದವು. ಈ ಬಾರಿ ಭಾರತ ನಾಲ್ಕು ಕಂಚು, 2 ಬೆಳ್ಳಿ ಮತ್ತು 1 ಬಂಗಾರ ಸೇರಿ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧುಗೆ ಕಂಚು, ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ಗೆ ಕಂಚಿನ ಪದಕ, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚಿನ ಪದಕ, ಪುರುಷರ ಹಾಕಿ ತಂಡಕ್ಕೆ ಕಂಚಿನ ಗೌರವ, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಬಂಗಾರದ ಪದಕ ಸಿಕ್ಕಿತ್ತು. ಇದಕ್ಕೂ ಹಿಂದೆ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಗೆದ್ದಿದ್ದೆ ದೊಡ್ಡ ದಾಖಲೆಯಾಗಿತ್ತು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರು ಪದಕಗಳು ಬಂದಿದ್ದವು. ಟೋಕಿಯೋದಲ್ಲಿ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ತೀವ್ರ ನಿರಾಸೆಯಾಗಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 18, 2021, 21:24 [IST]
Other articles published on Aug 18, 2021

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X