ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

Tokyo Olympics 2020: BCCI announces cash rewards for Indian Olympic medallists

ಶನಿವಾರ (ಆಗಸ್ಟ್ 7) ಭಾರತದ ಇಬ್ಬರು ಕ್ರೀಡಾಪಟುಗಳಾದ ಬಜರಂಗ್ ಪೂನಿಯಾ ಮತ್ತು ನೀರಜ್ ಚೋಪ್ರಾ ಪದಕಗಳನ್ನು ಗೆಲ್ಲುವುದರ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆಯನ್ನು ಏಳಕ್ಕೇರುವಂತೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರ

ಪುರುಷರ ರಸ್ಲಿಂಗ್ 65 ಕೆಜಿ ವಿಭಾಗದ ಕಂಚಿನ ಸುತ್ತಿನ ಪಂದ್ಯದಲ್ಲಿ ಭಾಗವಹಿಸಿದ್ದ ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಆರಕ್ಕೇರುವಂತೆ ಮಾಡಿದ್ದರು. ಇದಾದ ಬೆನ್ನಲ್ಲೇ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಚಿನ್ನ ಗೆಲ್ಲುವುದರ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಏಳಕ್ಕೇರುವಂತೆ ಮಾಡಿದರು.

ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಹಿಂದಿನ ಶಕ್ತಿ ಓರ್ವ ಕನ್ನಡಿಗ!ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಹಿಂದಿನ ಶಕ್ತಿ ಓರ್ವ ಕನ್ನಡಿಗ!

ಹೀಗೆ ಒಂದೇ ದಿನ ಭಾರತದ ಇಬ್ಬರು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಎರಡು ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಇನ್ನು ಈ ಇಬ್ಬರೂ ಸಾಧಕರಿಗೂ ಭಾರತ ದೇಶದ ಕ್ರೀಡಾಭಿಮಾನಿಗಳು, ನಟರು, ರಾಜಕಾರಣಿಗಳು ಮತ್ತು ಕ್ರೀಡಾ ಕ್ಷೇತ್ರದ ಹಲವು ಗಣ್ಯರು ಶುಭ ಕೋರುವುದರ ಮೂಲಕ ಪದಕದ ಗೆಲುವನ್ನು ಸಂಭ್ರಮಿಸಿದರು.

'ಆ ಊಹೆಯೇ ನನಗಿರಲಿಲ್ಲ'; ಬಂಗಾರದ ಹುಡುಗ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ'ಆ ಊಹೆಯೇ ನನಗಿರಲಿಲ್ಲ'; ಬಂಗಾರದ ಹುಡುಗ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ

ಪದಕ ಗೆದ್ದವರಿಗೆ ಬಿಸಿಸಿಐ ನಗದು ಪುರಸ್ಕಾರ

ಪದಕ ಗೆದ್ದವರಿಗೆ ಬಿಸಿಸಿಐ ನಗದು ಪುರಸ್ಕಾರ

ಇದೀಗ ಬಿಸಿಸಿಐ ಕೂಡ ಇದುವರೆಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಎಲ್ಲಾ ಸ್ಪರ್ಧಿಗಳಿಗೂ ವಿವಿಧ ನಗದು ಪುರಸ್ಕಾರಗಳನ್ನು ಘೋಷಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶನಿವಾರ ( ಆಗಸ್ಟ್ 7 ) ನಡೆದ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಬಿಸಿಸಿಐ 1 ಕೋಟಿ ನಗದು ಪುರಸ್ಕಾರವನ್ನು ಘೋಷಿಸಿದೆ. ಬೆಳ್ಳಿ ಪದಕವನ್ನು ಗೆದ್ದಿದ್ದ ಮೀರಾಬಾಯಿ ಚಾನು ಮತ್ತು ರವಿ ಕುಮಾರ್ ದಾಹಿಯಾಗೆ ತಲಾ 50 ಲಕ್ಷ ರೂಪಾಯಿ ನಗದು ಪುರಸ್ಕಾರ, ಕಂಚಿನ ಪದಕವನ್ನು ಗೆದ್ದಿರುವ ಪಿ ವಿ ಸಿಂಧು, ಲವ್ಲಿನಾ ಬೊರ್ಗಹೈನ್ ಮತ್ತು ಬಜರಂಗ್ ಪುನಿಯಾಗೆ ತಲಾ ತಲಾ 25 ಲಕ್ಷ ಮತ್ತು ಕಂಚಿನ ಪದಕ ಗೆದ್ದಿರುವ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನಗದು ಪುರಸ್ಕಾರವನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.

ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರದಿಂದ ಬಂಪರ್ ಆಫರ್

ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರದಿಂದ ಬಂಪರ್ ಆಫರ್

ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ ದೊಡ್ಡ ನಗದು ಪುರಸ್ಕಾರ ಮತ್ತು ಉದ್ಯೋಗ ಘೋಷಿಸುವುದರ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕವನ್ನು ಗೆದ್ದಿರುವ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ 6 ಕೋಟಿ ನಗದು ಪುರಸ್ಕಾರ ಮತ್ತು 'ಎ' ಗ್ರೇಡ್ ಉದ್ಯೋಗವನ್ನು ಘೋಷಣೆ ಮಾಡಿದೆ.

ಮಹೀಂದ್ರಾ ಸಂಸ್ಥೆಯಿಂದ ನೀರಜ್ ಚೋಪ್ರಾಗೆ ಎಕ್ಸ್‌ಯುವಿ ಗಿಫ್ಟ್

ಮಹೀಂದ್ರಾ ಸಂಸ್ಥೆಯಿಂದ ನೀರಜ್ ಚೋಪ್ರಾಗೆ ಎಕ್ಸ್‌ಯುವಿ ಗಿಫ್ಟ್


ಇನ್ನು ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ನೂತನ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಭಾರತದ ಪ್ರತಿಷ್ಠಿತ ಮೋಟಾರು ವಾಹನ ಕಂಪನಿ ಮಹೀಂದ್ರಾದ ಅಧ್ಯಕ್ಷ ಆನಂದ್ ಮಹೀಂದ್ರಾ ನೂತನ ಎಕ್ಸ್‌ಯುವಿ 700 ವಾಹನವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಬಹುಮಾನ ಮತ್ತು ಪುರಸ್ಕಾರಗಳು ನೀರಜ್ ಚೋಪ್ರಾಗೆ ಲಭಿಸಿವೆ.

ನೀರಜ್ ಚೋಪ್ರಾ ಮಾತ್ರವಲ್ಲದೆ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಇತರ ಕ್ರೀಡಾಪಟುಗಳಿಗೂ ಸಹ ವಿವಿಧ ರಾಜ್ಯ ಸರಕಾರಗಳು ಮತ್ತು ವಿವಿಧ ಖಾಸಗಿ ಸಂಸ್ಥೆಗಳು ಈಗಾಗಲೇ ಸಾಕಷ್ಟು ನಗದು ಪುರಸ್ಕಾರ ಮತ್ತು ಉದ್ಯೋಗ ಅವಕಾಶಗಳನ್ನು ಘೋಷಿಸಿವೆ.

Story first published: Sunday, August 8, 2021, 0:46 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X