ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ಭೀತಿ, ಟೋಕಿಯೋ ಒಲಿಂಪಿಕ್ಸ್‌ 2020 ರದ್ದು ಸಾಧ್ಯತೆ

Tokyo Olympics 2020 could be cancelled if coronavirus not contained by late May
Olympics 2020 might be cancelled ,no thanks to Corona virus | Olympics 2020 tokyo

ಟೋಕಿಯೋ, ಫೆಬ್ರವರಿ 26: ಮಾರಕ ಸೋಂಕು ಕೊರೊನಾ ವೈರಸ್ ಹತೋಟಿಗೆ ಬಾರದೆ ಹೋದರೆ 2020ರ ಟೋಕಿಯೋ ಒಲಿಂಪಿಕ್ಸ್ ರದ್ದಾಗುವ ಸಾಧ್ಯತೆಯಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿಯ (ಐಒಸಿ) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕ್ರೀಡಾಕೂಟವನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಮುಂದೂಡುವುದಕ್ಕಿಂತ ರದ್ದುಪಡಿಸುವ ಸಾಧ್ಯತೆಯೇ ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ.

ಅರುಣಾಂಚಲ ವಿರುದ್ಧ 10ಕ್ಕೆ 10 ವಿಕೆಟ್‌ ಉರುಳಿಸಿದ ಚಂಡೀಗಢ ಆಟಗಾರ್ತಿಅರುಣಾಂಚಲ ವಿರುದ್ಧ 10ಕ್ಕೆ 10 ವಿಕೆಟ್‌ ಉರುಳಿಸಿದ ಚಂಡೀಗಢ ಆಟಗಾರ್ತಿ

1978ರಿಂದಲೂ ಐಒಸಿಯಲ್ಲಿರುವ, ಸ್ವಿಮ್ಮಿಂಗ್ ಚಾಂಪಿಯನ್ ಕೂಡ ಆಗಿರುವ ಕೆನಡಾದ ಡಿಕ್ ಪೌಂಡ್ ಈ ಬಗ್ಗೆ ಮಾತನಾಡಿ, ಟೋಕಿಯೋ ಒಲಿಂಪಿಕ್ಸ್ ನಡೆಯುತ್ತೋ ಇಲ್ಲವೋ ಅನ್ನೋದು 3 ತಿಂಗಳಲ್ಲಿ ನಿರ್ಧಾರವಾಗಲಿದೆ. ಅಂದರೆ ಮೇ ತಿಂಗಳವರೆಗೂ ಕಾದು ನೋಡಬೇಕಾಗುತ್ತದೆ ಎಂದಿದ್ದಾರೆ.

ತಮ್ಮ ಪಾಲಿನ ಕರಾಳ ಅಂಗಳದಲ್ಲಿ ಸ್ಮಿತ್, ವಾರ್ನರ್ ಮತ್ತೆ ಕಣಕ್ಕೆ!ತಮ್ಮ ಪಾಲಿನ ಕರಾಳ ಅಂಗಳದಲ್ಲಿ ಸ್ಮಿತ್, ವಾರ್ನರ್ ಮತ್ತೆ ಕಣಕ್ಕೆ!

'ಕ್ರೀಡಾಕೂಟದ ದಿನಾಂಕ ಹತ್ತಿರವಾಗುತ್ತಿರುವುದರಿಂದ ಅನೇಕ ಕೆಲಸಗಳು ಆರಂಭವಾಗಬೇಕಿದೆ. ಭದ್ರತೆ, ಆಹಾರ, ಒಲಿಂಪಿಕ್ ವಿಲ್ಲೇಜ್, ಹೋಟೆಲ್‌ ವ್ಯವಸ್ಥೆಗಳಿಗೆಲ್ಲ ಸಿದ್ಧತೆ ನಡೆಯಬೇಕಿದೆ. ಆದರೆ ಕ್ರೀಡಾ ಕೂಟ ನಡೆಯುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಇನ್ನೂ ಕೊಂಚ ಕಾಲ ಕಾಯಬೇಕಿದೆ,' ಎಂದು ಡಿಕ್ ಮಾಹಿತಿ ನೀಡಿದ್ದಾರೆ.

ಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನ

ಚೀನಾದಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಈಗಾಗಲೇ ಸುಮಾರು 80,000 ಜನ ಒಳಗಾಗಿದ್ದಾರೆ. ಸುಮಾರು 2,700 ಸಾವಿಗೀಡಾಗಿದ್ದಾರೆ. ಒಲಿಂಪಿಕ್ಸ್ ನಡೆಯಲಿರುವ ಜಪಾನ್‌ನಲ್ಲೂ 4 ಮಂದಿ ಸಾವನ್ನಪ್ಪಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2020ರ ಜುಲೈ 24ರಿಂದ ಆಗಸ್ಟ್ 9ರ ವರೆಗೆ ನಡೆಸಲು ನಿರ್ಧಾರವಾಗಿತ್ತು.

Story first published: Wednesday, February 26, 2020, 12:33 [IST]
Other articles published on Feb 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X