ಟೋಕಿಯೊ ಒಲಿಂಪಿಕ್ಸ್ ಎಂಟನೇ ದಿನಕ್ಕೆ ಕಾಲಿಟ್ಟಿದ್ದು ಭಾರತದ ಪರ ಇದುವರೆಗೂ ಮೀರಾಬಾಯಿ ಚಾನು ಮಾತ್ರ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೀರಾಬಾಯಿ ಚಾನು ನಂತರ ಇದೀಗ ಭಾರತೀಯ ಮಹಿಳಾ ಬಾಕ್ಸರ್ ಲೊವ್ಲಿನಾ ಬರ್ಗಹೈನ್ ಸೆಮಿಫೈನಲ್ ಪ್ರವೇಶಿಸಿದ್ದು ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.
ಈ ನಡುವೆ ನಡೆದ 100 ಮೀ. ಓಟದಲ್ಲಿ ಭಾಗವಹಿಸಿದ್ದ ಒಟ್ಟು 8 ಸ್ಪರ್ಧಿಗಳ ಪೈಕಿ ಭಾರತದ ದುಟಿ ಚಾಂದ್ ಏಳನೇ ಸ್ಥಾನ ಪಡೆದು ಕೊಳ್ಳುವುದರ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದಾರೆ. 100 ಮೀಟರ್ ದೂರವನ್ನು ಕ್ರಮಿಸಲು 11.54 ಸೆಕೆಂಡ್ಗಳನ್ನು ತೆಗೆದುಕೊಂಡ ದುಟಿ ಚಾಂದ್ ಏಳನೇ ಸ್ಥಾನವನ್ನು ಪಡೆದುಕೊಂಡರು. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ದುಟಿ ಚಾಂದ್ ಕಳೆದುಕೊಂಡಿದ್ದಾರೆ.
ಅತ್ತ ಮಹಿಳಾ ವಿಭಾಗದ ಅರ್ಚರಿಯಲ್ಲಿ ಭಾರತದ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಹಾಗೂ 25 ಮೀ. ಮಹಿಳಾ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಫೈನಲ್ ಪ್ರವೇಶಿಸುವಲ್ಲಿ ಎಡವಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ಆರಂಭವಾಗುವ ಮುನ್ನ ಭಾರತದ ದ್ಯುತಿ ಚಾಂದ್ ಪದಕ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಶುಕ್ರವಾರ ನಡೆದ 100 ಮೀ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿ ದ್ಯುತಿ ಚಾಂದ್ 100 ಮೀ ದೂರವನ್ನು 11.54 ಸೆಕೆಂಡ್ಗಳಲ್ಲಿ ಕ್ರಮಿಸುವುದರ ಮೂಲಕ ಏಳನೇ ಸ್ಥಾನ ಪಡೆದುಕೊಂಡು ಮೊದಲ ಸುತ್ತಿನಲ್ಲಿಯೇ ಸ್ಪರ್ಧೆಯಿಂದ ಹೊರಬಿದ್ದರು.
ಇತ್ತ ದ್ಯುತಿ ಚಾಂದ್ ಮೊದಲನೇ ಸುತ್ತಿನಲ್ಲಿಯೇ ಸೋಲುವುದರ ಮೂಲಕ ನಿರಾಸೆಯುಂಟು ಮಾಡಿದರೆ ಆತ ಪಿಸ್ತೂಲ್ ವಿಭಾಗದಲ್ಲಿ ಭಾರತದ ಆಟಗಾರ್ತಿಯರಾದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಅರ್ಹತೆ ಪಡೆದುಕೊಳ್ಳುವುದರಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೋಲುವುದರ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಆದರೆ ಭಾರತದ ಮಹಿಳಾ ಸ್ಪರ್ಧಿಗಳಾದ ಪಿವಿ ಸಿಂಧು ಮತ್ತು ಲವ್ಲಿನಾ ಬರ್ಗಹೈನ್ ಪದಕದ ಆಸೆಯನ್ನು ಇನ್ನೂ ಜೀವಂತವಾಗಿರಿಸಿದ್ದಾರೆ. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಈಗಾಗಲೇ ಸೆಮಿಫೈನಲ್ ಹಂತವನ್ನು ತಲುಪಿರುವ ಪಿವಿ ಸಿಂಧು ಭಾರತಕ್ಕೆ ಮತ್ತೊಂದು ಪದಕ ಲಭಿಸುವುದು ಖಚಿತವಾಗಿದೆ. ಪಿವಿ ಸಿಂಧು ನಂತರ ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬರ್ಗಹೈನ್ ಮಹಿಳಾ ಸಿಂಗಲ್ಸ್ ಬಾಕ್ಸಿಂಗ್ ವಿಭಾಗದಲ್ಲಿ ಯಶಸ್ವಿಯಾಗಿ ಸೆಮಿಫೈನಲ್ ಹಂತವನ್ನು ತಲುಪಿದ್ದು ಮತ್ತೊಂದು ಪದಕ ಭಾರತಕ್ಕೆ ಸಿಗುವುದು ಖಚಿತವಾಗಿದೆ. ಹೀಗೆ ಪಿವಿ ಸಿಂಧು ಮತ್ತು ಲವ್ಲಿನಾ ಬರ್ಗಹೈನ್ ಸೆಮಿ ಫೈನಲ್ ಪ್ರವೇಶಿಸಿರುವುದರಿಂದ ಭಾರತಕ್ಕೆ ಮತ್ತೆರಡು ಪದಕಗಳು ಸೇರಿಕೊಳ್ಳುವುದು ಖಚಿತವಾಗಿದೆ.
ಭಾರತದ ಮಹಿಳಾ ಕ್ರೀಡಾಪಟು ದ್ಯುತಿ ಚಾಂದ್ ತಮ್ಮ ಕ್ರೀಡಾ ವೃತ್ತಿಜೀವನದಲ್ಲಿ ಈಗಾಗಲೇ ಹಲವಾರು ಕಂಚು, ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕೂಡ ಪದಕ ಗೆಲ್ಲುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ದ್ಯುತಿಚಾಂದ್ 2 ಬಾರಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ, ಏಷ್ಯನ್ ಚಾಂಪಿಯನ್ಸ್ ಕ್ರೀಡಾಕೂಟದಲ್ಲಿ 4 ಬಾರಿ ಕಂಚಿನ ಪದಕಗಳನ್ನು ಭಾರತದ ಮಹಿಳಾ ಆಟಗಾರ್ತಿ ದ್ಯುತಿಚಾಂದ್ ಗೆದ್ದುಕೊಂಡಿದ್ದಾರೆ, ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಕೂಡ ದ್ಯುತಿ ಚಾಂದ್ ಕಂಚಿನ ಪದಕವನ್ನು ಗೆದ್ದಿದ್ದಾರೆ, ಸೌತ್ ಏಷಿಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಕ್ರೀಡಾಪಟು ದ್ಯುತಿ ಚಾಂದ್ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ, ಸಮ್ಮತಿ ಯೂನಿವರ್ಸಿಡ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಕೂಡ ದ್ಯುತಿ ಚಾಂದ್ ಗೆದ್ದಿದ್ದಾರೆ ಹಾಗೂ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪಟು 2 ಬಾರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.