ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Tokyo Olympics 2020: India Beat Spain 3-0 In Mens Hockey Pool A Match

ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಕಂಗಾಲಾಗಿದ್ದ ಭಾರತೀಯ ಪುರುಷರ ಹಾಕಿ ತಂಡ ಇದೀಗ ಸ್ಪೇನ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಗೆಲುವಿನ ಹಾದಿಗೆ ಮರಳಿದೆ. ಟೋಕಿಯೋ ಒಲಿಂಪಿಕ್ಸ್ ಹಾಕಿ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ಸ್ಪೇನ್ ತಂಡಗಳು ಸೆಣಸಾಡಿದವು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತೀಯ ಆಟಗಾರರು ಮೊದಲ ಕ್ವಾರ್ಟರ್‌ನಲ್ಲಿಯೇ 2-0 ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ರೈಲ್ವೆ ಸಚಿವರ ಬಂಪರ್ ಗಿಫ್ಟ್ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ರೈಲ್ವೆ ಸಚಿವರ ಬಂಪರ್ ಗಿಫ್ಟ್

ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತೀಯ ಹಾಕಿ ಆಟಗಾರರು ಉತ್ತಮ ಪ್ರದರ್ಶನ ತೋರಿದ ಪರಿಣಾಮ ಸ್ಪೇನ್ ತಂಡ ಯಾವುದೇ ಗೋಲ್ ಭರಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಪಂದ್ಯದ ಆಫ್ ಟೈಮ್‌ಗೆ ಭಾರತ ಹಾಕಿ ತಂಡ 2-0 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು. ಮೊದಲನೇ ಕ್ವಾರ್ಟರ್‌ನಲ್ಲಿ ಭಾರತ ತಂಡದ ಸಿಮ್ರಾನ್ ಜೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ 1 ಗೋಲು ಬಾರಿಸಿದರು.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಭಾರತದ ರೂಪಿಂದರ್ ಪಾಲ್ ಸಿಂಗ್ ಗೋಲು ಬಾರಿಸುವುದರ ಮೂಲಕ ಭಾರತ ತನ್ನ ಮೂರನೇ ಗೋಲನ್ನು ಸಂಪಾದಿಸಿತು. ಈ ಮೂಲಕ ಸ್ಪೇನ್ ವಿರುದ್ಧ ಭಾರತ ಹಾಕಿ ತಂಡ 3-0 ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನಕ್ಕೇರಿದೆ.

ಸಿಮ್ರಾನ್ ಜೀತ್ ಮತ್ತು ರೂಪಿಂದರ್ ಆಕರ್ಷಕ ಆಟ

ಸಿಮ್ರಾನ್ ಜೀತ್ ಮತ್ತು ರೂಪಿಂದರ್ ಆಕರ್ಷಕ ಆಟ

ಸ್ಪೇನ್ ವಿರುದ್ಧ ಭಾರತ ತಂಡ 3-0 ಅಂತರದಲ್ಲಿ ಗೆಲುವು ಸಾಧಿಸಲು ಪ್ರಮುಖ ಕಾರಣ ತಂಡದ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಾನ್ ಜೀತ್ ಸಿಂಗ್. ರೂಪಿಂದರ್ ಪಾಲ್ ಸಿಂಗ್ ಭಾರತದ ಪರ 2 ಗೋಲುಗಳನ್ನು ಬಾರಿಸಿದರೆ ಸಿಮ್ರಾನ್ ಜೀತ್ ಸಿಂಗ್ ಒಂದು ಗೋಲು ಬಾರಿಸಿ ಆಕರ್ಷಕ ಆಟವನ್ನಾಡಿದರು.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ಕಳೆದ ಬಾರಿಯ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ ತಂಡ ಸ್ಪೇನ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಎ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಒಂದನೇ ಸ್ಥಾನದಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ತಂಡ ಸ್ಥಾನ ಪಡೆದುಕೊಂಡಿದೆ.

ಹಾಕಿ ತಂಡ ಪದಕ ಗೆಲ್ಲಲಿದೆ ಎನ್ನುತ್ತಿದ್ದಾರೆ ಹಾಕಿ ತಜ್ಞರು

ಹಾಕಿ ತಂಡ ಪದಕ ಗೆಲ್ಲಲಿದೆ ಎನ್ನುತ್ತಿದ್ದಾರೆ ಹಾಕಿ ತಜ್ಞರು

ಆಸ್ಟ್ರೇಲಿಯಾ ವಿರುದ್ಧದ ಕಳಪೆ ಪ್ರದರ್ಶನದ ನಂತರವೂ ಭಾರತ ಹಾಕಿ ತಂಡದ ಪರ ಹಲವಾರು ಹಾಕಿ ತಜ್ಞರು ಬ್ಯಾಟ್ ಬೀಸಿದ್ದರು. ಇದೊಂದು ಕಳಪೆ ಪ್ರದರ್ಶನದಿಂದ ಭಾರತ ಹಾಕಿ ತಂಡವನ್ನು ಟೀಕಿಸುವುದು ಸರಿಯಲ್ಲ, ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪದಕ ಗೆದ್ದೇ ಗೆಲ್ಲಲಿದೆ ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದರು. ತಜ್ಞರ ಅಭಿಪ್ರಾಯದಂತೆ ಪುಟಿದೆದ್ದಿರುವ ಹಾಕಿ ತಂಡ ಸ್ಪೇನ್ ವಿರುದ್ಧ ಗೆಲ್ಲುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.

Story first published: Tuesday, July 27, 2021, 12:55 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X