ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 3ಕ್ಕೆ ಭಾರತೀಯರ ವೇಳಾಪಟ್ಟಿ

Tokyo Olympics 2020: Indian athletes schedule on august 3rd

ಟೋಕಿಯೋ ಆಗಸ್ಟ್ 2: ಟೋಕಿಯೋ ಒಲಿಂಪಿಕ್ಸ್‌ನ 11ನೇ ದಿನ ಭಾರತ ಯಾವುದೇ ಪದಕವನ್ನು ಗೆಲ್ಲಲು ವಿಫಲವಾಗಿದೆ. ನಿರೀಕ್ಷೆ ಮೂಡಿಸಿದ್ದ ಕಮಲ್‌ಪ್ರೀತ್ ಕೌರ್ ಫೈನಲ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಹೀಗಾಗಿ ಭಾರತ ಮತ್ತೊಮ್ಮೆ ನಿರಾಸೆಯನ್ನು ಅನುಭವಿಸಿದೆ.

ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗೆಲ್ಲಲು ಸಫಲವಾಗಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ ಬಳಿಕ ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಸೋಮವಾರ ಭಾರತದ ಮಹಿಳಾ ಹಾಕಿ ತಂಡ ದೊಡ್ಡ ಭರವಸೆ ಮೂಡಿಸಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವ ಮೂಲಕ ಭಾರತೀಯರಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದರು ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್. ಆದರೆ ಫೈನಲ್‌ನಲ್ಲಿ ಕೌರ್ ಎಡವಿದ್ದಾರೆ. ಆದರೂ ಫೈನಲ್‌ನಲ್ಲಿ 6ನೇ ಸ್ಥಾನವನ್ನು ಸಂಪಾದನೆ ಮಾಡುವ ಮೂಲಕ ಭಾರತದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಮಲ್‌ಪ್ರೀತ್ ಕೌರ್ ಪದಕ ಗೆಲ್ಲಲು ವಿಫಲವಾದರು ಕೂಡ ಭಾರತೀಯ ಕ್ರೀಡಾ ಪ್ರೇಮಿಗಳು ಹೆಮ್ಮೆಪಡುವಂತಾ ಸಾಧನೆ ಮಾಡಿದ್ದಾರೆ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಪಡೆದ ಕಮಲ್‌ಪ್ರೀತ್ ಮೊದಲ ಪ್ರಯತ್ನದಲ್ಲಿಯೇ ಅತ್ಯುತ್ತಮ ಪ್ರದರ್ಶನ ನಿಡುವ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದರು. ಈ ನಿರೀಕ್ಷೆಗೆ ಕಾರಣವೂ ಇತ್ತು. ಪಾಟಿಯಾಲದಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್‌ ಕಪ್‌ನಲ್ಲಿ ಕಮಲ್‌ಪ್ರೀತ್ 66.69 ಮೀಟರ್ ದೂರಕ್ಕೆ ಎಸೆದು ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಿದ್ದರೂ ಪದಕಗಳಿಸಿರುತ್ತಿದ್ದರು ಕಮಲ್‌ಪ್ರೀತ್.

ಇನ್ನು ಮಂಗಳವಾರ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿರುವುದು ಕುತೂಹಲ ಮೂಡಿಸಿದೆ. ಈವರೆಗಿನ ಪ್ರದರ್ಶನದಲ್ಲಿ ಭಾರೀ ಭರವಸೆ ಮೂಡಿಸಿರುವ ಕಾರಣ ಮಂಗಳವಾರದ ಪಂದ್ಯದ ಮೇಲೆ ಭಾರತದ ಕೋಟ್ಯಂತರ ಕ್ರೀಡಾಪ್ರೇಮಿಗಳು ಚಿತ್ತ ನೆಟ್ಟಿದ್ದಾರೆ.

ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗೆಲ್ಲಲು ಸಫಲವಾಗಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ ಬಳಿಕ ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಸೋಮವಾರ ಭಾರತದ ಮಹಿಳಾ ಹಾಕಿ ತಂಡ ದೊಡ್ಡ ಭರವಸೆ ಮೂಡಿಸಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಮಂಗಳವಾರ ಒಲಿಂಪಿಕ್ಸ್ ಕ್ರೀಡಾಕೂಟದ 12ನೇ ದಿನವಾಗಿದ್ದು ಭಾರತದ ಕ್ರೀಡಾಪಟುಗಳ ವೇಳಾಪಟ್ಟಿಯ ಮಾಹಿತಿಯನ್ನು ಬನ್ನಿ ನೋಡೋಣ:

ಪುರುಷರ ಹಾಕಿ ಸೆಮಿಫೈನಲ್ ಪಂದ್ಯ: ಟೋಕಿಯೋ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಪುರುಷರ ಸೆಮಿಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ. ಭಾರತ 41 ವರ್ಷಗಳ ಬಳಿಕ ಹಾಕಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಓಯಿ ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 7:00 ಗಂಟೆಗೆ ಆರಂಭವಾಗಲಿದೆ.

ಅಥ್ಲೆಟಿಕ್ಸ್
ಜಾವೆಲಿನ್ ಎಸೆತ: ಅಥ್ಲೆಟಿಕ್ಸ್‌ನಲ್ಲಿ ಮಹಿಳಾ ವಿಭಾಗದ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದೆ. ಗ್ರೂಪ್‌ 'ಎ'ನಲ್ಲಿ ಭಾರತದ ಅನ್ನು ರಾಣಿ ಸ್ಪರ್ಧೆಗೆ ಇಳಿಯಲಿದ್ದಾರೆ. ಭಾರತೀಯ ಕಾಲಮಾನ ಬೆಳಿಗ್ಗೆ 5:50 ಕ್ಕೆ ಈ ಸ್ಪರ್ಧೆ ಆರಂಭವಾಗಲಿದೆ.

ಪುರುಷರ ಶಾಟ್ ಪುಟ್
ಪುರುಷರ ಶಾಟ್‌ಪುಟ್‌ ಎಸೆತದ ಅರ್ಹತಾ ಸುತ್ತಿನಲ್ಲಿ ಭಾರತದ ತಜಿಂದರ್ ಪಾಲ್ ಸಿಂಗ್ ತೂರ್ ಕಣಕ್ಕಿಳಿಯಲಿದ್ದಾರೆ. ಸಂಜೆ 3:45 ಗಂಟೆಗೆ ಈ ಸ್ಪರ್ಧೆ ಆರಂಭವಾಗಲಿದೆ.

ರೆಸ್ಲಿಂಗ್
ಮಹಿಳೆಯರ ಫ್ರೀಸ್ಟೈಲ್ 62 ಕೆಜಿ ವಿಭಾಗದ 16ನೇ ಘಟ್ಟದ ಪಂದ್ಯಗಳು ನಡೆಯಲಿದೆ. ಭಾರತದ ಸೋನಮ್ ಮಲಿಕ್ ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಈ ಪಂದ್ಯದಲ್ಲಿ ಗೆದ್ದರೆ ಸೋನಮ್ ಮಲಿಕ್ ಕ್ವಾರ್ಟರ್‌ಫೈನಲ್ ಹಂತಕ್ಕೇರಲಿದ್ದಾರೆ. ಅದಾದ ಬಳಿಕ ಸೆಮಿಫೈನಲ್ ಹಂತದ ಪಂದ್ಯ ಕೂಡ ಮಂಗಳವಾರವೇ ಆಯೋಜನೆಯಾಗಲಿದೆ.

Story first published: Monday, August 2, 2021, 23:00 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X