ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಭರವಸೆ ಮೂಡಿಸಿ ಸೋತ ಮನು ಮತ್ತು ಸೌರಭ್

Tokyo Olympics 2020: Manu Bhaker fail to qualify for the finals of 10m Air Pistol Mixed Team event

10 ಮೀ. ಏರ್ ಪಿಸ್ತೂಲ್ ಪುರುಷ ಮತ್ತು ಮಹಿಳಾ ಮಿಶ್ರಿತ ಗುಂಪಿನ ಅರ್ಹತಾ ಸುತ್ತಿನ ಮೊದಲನೇ ಪಂದ್ಯದಲ್ಲಿ ಅಗ್ರಸ್ಥಾನ ಪಡೆದುಕೊಂಡು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಎರಡನೇ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪದಕದ ಆಸೆಯನ್ನು ಕೈ ಚೆಲ್ಲಿದ್ದಾರೆ.

ಇಂದು 10 ಮೀ. ಏರ್ ಪಿಸ್ತೂಲ್ ಪುರುಷ ಮತ್ತು ಮಹಿಳೆಯರ ಮಿಶ್ರಿತ ಗುಂಪಿನ ಪಂದ್ಯಗಳು ನಡೆದವು. ಈ ಪಂದ್ಯಗಳ ಮೊದಲನೇ ಅರ್ಹತಾ ಸುತ್ತಿನಲ್ಲಿ ಭಾರತೀಯ ಕ್ರೀಡಾಪಟುಗಳಾದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಅತ್ಯದ್ಭುತ ಪ್ರದರ್ಶನವನ್ನು ನೀಡುವುದರ ಮೂಲಕ ಅಗ್ರಸ್ಥಾನವನ್ನು ಪಡೆದುಕೊಂಡರು. ಮೊದಲನೇ ಸುತ್ತಿನಲ್ಲಿ 582 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಎರಡನೇ ಸುತ್ತಿನಲ್ಲಿ ಸೋಲನ್ನನುಭವಿಸಿದ್ದಾರೆ.

ಮೊದಲನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಈ ಜೋಡಿ ಎರಡನೇ ಸುತ್ತಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಪದಕದ ಸುತ್ತಿಗೆ ಲಗ್ಗೆ ಇಡಲಿದೆ ಎಂದು ಕಾಯುತ್ತಿದ್ದ ಕ್ರೀಡಾಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ 380 ಅಂಕಗಳನ್ನು ಪಡೆದುಕೊಂಡ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಜೋಡಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಸ್ಪರ್ಧೆಯಿಂದ ಹೊರಬಿದ್ದಿದೆ. ಇನ್ನು ಈ ಸುತ್ತಿನಲ್ಲಿ ಭಾಗವಹಿಸಿದ್ದ 8 ಜೋಡಿಗಳ ಪೈಕಿ ಟಾಪ್ 4 ಜೋಡಿಗಳು ಪದಕದ ಸುತ್ತಿಗೆ ಪ್ರವೇಶಿಸಿವೆ.

Story first published: Tuesday, July 27, 2021, 6:59 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X