ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ರೈಲ್ವೆ ಸಚಿವರ ಬಂಪರ್ ಗಿಫ್ಟ್

Tokyo Olympics 2020: Minister Vaishnaw announces Rs 2 crore reward, promotion for Mirabai Chanu

ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಹೀಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆಲ್ಲುವುದರ ಮೂಲಕ ಮೀರಾಬಾಯಿ ಚಾನು ದೇಶದ ಹಲವಾರು ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿ ನಿಂತಿದ್ದಾರೆ.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

ತಾವು ಪಟ್ಟ ಶ್ರಮ ಮತ್ತು ತಮ್ಮ ಪ್ರತಿಭೆಯಿಂದ ಮೀರಾಬಾಯಿ ಚಾನು ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಮೀರಾಬಾಯಿ ಚಾನುಗೆ 2 ಕೋಟಿ ರೂಪಾಯಿ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್‌: ಸೋಲಿನ ಸೇಡು ತೀರಿಸಿಕೊಂಡ ಕಾಂಗರೂಗಳುಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್‌: ಸೋಲಿನ ಸೇಡು ತೀರಿಸಿಕೊಂಡ ಕಾಂಗರೂಗಳು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮೀರಾಬಾಯಿ ಚಾನು 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ರಜತ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 21 ವರ್ಷಗಳ ಬಳಿಕ ಭಾರತ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದಂತಾಯಿತು. ಕೇವಲ ಕೇಂದ್ರ ರೈಲ್ವೆ ಸಚಿವರು ಮಾತ್ರವಲ್ಲದೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಕೂಡಾ ಮೀರಾಬಾಯಿ ಚಾನುಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮತ್ತು 1 ಕೋಟಿ ಬಹುಮಾನವನ್ನು ಘೋಷಿಸಿದ್ದರು. ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಚೆಕಿಂಗ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೀರಾಬಾಯಿ ಚಾನುಗೆ ಇದೀಗ ಅದೇ ಹುದ್ದೆಯಲ್ಲಿ ಬಡ್ತಿ ಮತ್ತು 2 ಕೋಟಿಯನ್ನು ರೈಲ್ವೆ ಸಚಿವರು ಘೋಷಿಸಿದ್ದರೆ, ಅತ್ತ ಮಣಿಪುರ ಸಿಎಂ 1 ಕೋಟಿ ಬಹುಮಾನ ಮತ್ತು ಪೊಲೀಸ್ ಇಲಾಖೆಯಲ್ಲಿ ಹುದ್ದೆಯನ್ನು ಘೋಷಿಸಿದ್ದಾರೆ.

ಮಣಿಪುರ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ

ಮಣಿಪುರ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ

ಮೊದಲೇ ಹೇಳಿದ ಹಾಗೆ ಮಣಿಪುರ ಸಿಎಂ ಎನ್ ಬಿರೇನ್ ಮೀರಾಬಾಯಿ ಚಾನು ಅವರಿಗೆ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮೀರಾಬಾಯಿ ಚಾನುಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆ ನೀಡುವುದಾಗಿ ಎನ್ ಬಿರೇನ್ ತಿಳಿಸಿದ್ದಾರೆ. ಇದರ ಜತೆಗೆ ಮೀರಾಬಾಯಿ ಚಾನುಗೆ 1 ಕೋಟಿ ರೂಪಾಯಿ ಬಹುಮಾನವನ್ನು ಸಹ ಘೋಷಣೆ ಮಾಡಲಾಗಿದೆ.

ಜೀವಮಾನ ಉಚಿತ ಪಿಜಾ ಘೋಷಣೆ ಮಾಡಿದ ಡೋಮಿನೋ'ಸ್

ಜೀವಮಾನ ಉಚಿತ ಪಿಜಾ ಘೋಷಣೆ ಮಾಡಿದ ಡೋಮಿನೋ'ಸ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಮ್ಮೆ ತಂದ ಮೀರಾಬಾಯಿ ಚಾನುಗೆ ಪಿಜಾ ದೈತ್ಯ ಡೊಮಿನೋಸ್ ಜೀವನ ಪೂರ್ತಿ ಉಚಿತ ಪಿಜಾ ಕೊಡುವುದಾಗಿ ಘೋಷಣೆ ಮಾಡಿದೆ. ಅಷ್ಟೆ ಅಲ್ಲದೆ ಮೀರಾಬಾಯಿ ಚಾನು ಕುಟುಂಬದವರನ್ನು ಭೇಟಿ ಮಾಡಿರುವ ಡೊಮಿನೋಸ್ ಕುಟುಂಬದವರಿಗೂ ಉಚಿತ ಪಿಜಾ ನೀಡುವುದರ ಮೂಲಕ ಮೀರಾಬಾಯಿ ಚಾನು ಗೆಲುವನ್ನು ಸಂಭ್ರಮಿಸಿದೆ.

ಮೀರಾಬಾಯಿ ಚಾನುಗೆ ಜಾಹೀರಾತು ಕಂಪೆನಿಗಳ ಬೇಡಿಕೆ

ಮೀರಾಬಾಯಿ ಚಾನುಗೆ ಜಾಹೀರಾತು ಕಂಪೆನಿಗಳ ಬೇಡಿಕೆ

ಇಷ್ಟು ಮಾತ್ರವಲ್ಲದೆ ಮೀರಾಬಾಯಿ ಚಾನುಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಂತೆ ದೊಡ್ಡಮಟ್ಟದ ಬೇಡಿಕೆಗಳು ಬರುತ್ತಿವೆ ಎಂಬ ಸುದ್ದಿಯೂ ಇದೆ. ರಜತ ಪದಕ ಗೆದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ಮೀರಾಬಾಯಿ ಚಾನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಹೀಗಾಗಿ ಬೃಹತ್ ಜಾಹೀರಾತು ಕಂಪನಿಗಳು ಮೀರಾಬಾಯಿ ಚಾನು ಹಿಂದೆ ಬಿದ್ದಿರುವುದು ಸತ್ಯ.

Story first published: Tuesday, July 27, 2021, 12:33 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X