ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶಸ್ತ್ರಚಿಕಿತ್ಸೆಯಿಂದ ಚಿನ್ನದ ಪದಕ; ನೀರಜ್ ಚೋಪ್ರಾ ಸಾಹಸಗಾಥೆ

Tokyo Olympics 2020: Neeraj Chopras old tweet goes viral after becoming Olympic champion

ಶನಿವಾರ ( ಆಗಸ್ಟ್ 7 ) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತದ ಯಾವುದೇ ಅಥ್ಲೀಟ್ ಕೂಡ ಚಿನ್ನದ ಪದಕ ಗೆಲ್ಲುವ ಸಾಧನೆಯನ್ನು ಮಾಡಿಯೇ ಇರಲಿಲ್ಲ. ಇದೀಗ ಭಾರತದ ನೀರಜ್ ಚೋಪ್ರಾ ಈ ಸಾಧನೆಯನ್ನು ಮಾಡುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಹಣ ಮತ್ತು ಬಹುಮಾನಗಳೆಷ್ಟು ಗೊತ್ತಾ?ಟೋಕಿಯೋ ಒಲಿಂಪಿಕ್ಸ್‌: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಹಣ ಮತ್ತು ಬಹುಮಾನಗಳೆಷ್ಟು ಗೊತ್ತಾ?

ಈ ಮೂಲಕ ಪ್ರಸಕ್ತ ಸಾಲಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಒಟ್ಟು ಸಂಖ್ಯೆ 7ಕ್ಕೇರಿದ್ದು, ಚೊಚ್ಚಲ ಚಿನ್ನದ ಪದಕವನ್ನು ಭಾರತ ಪಡೆದುಕೊಂಡಿದೆ. ಶನಿವಾರ (ಆಗಸ್ಟ್ 7) ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ಸಾಧಿಸುವುದರ ಮೂಲಕ ಭಾರತಕ್ಕೆ ಚಿನ್ನ ತಂದು ಕೊಟ್ಟಿದ್ದಾರೆ. ಹೀಗೆ ಚಿನ್ನದ ಪದಕವನ್ನು ಗೆದ್ದ ನಂತರ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಪ್ರಶಂಸೆಯ ಸುರಿಮಳೆಯೇ ಸುರಿದಿದೆ.

11 ಒಲಿಂಪಿಕ್ ಪದಕಗಳೊಂದಿಗೆ ದಾಖಲೆ ಬರೆದ ಆಲಿಸನ್ ಫೆಲಿಕ್ಸ್!11 ಒಲಿಂಪಿಕ್ ಪದಕಗಳೊಂದಿಗೆ ದಾಖಲೆ ಬರೆದ ಆಲಿಸನ್ ಫೆಲಿಕ್ಸ್!

ಹೀಗೆ ಸಾಮಾಜಿಕ ಜಾಲತಾಣದ ತುಂಬೆಲ್ಲಾ ದೊಡ್ಡ ಮಟ್ಟದಲ್ಲಿ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿರುವ ನೀರಜ್ ಚೋಪ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಹಿಂದೆ ಮಾಡಿದ್ದ ಹಳೆಯ ಟ್ವೀಟ್ ಇದೀಗ ವೈರಲ್ ಆಗಿದೆ. ಹೌದು 2019ರ ಮೇ 3ರಂದು ನೀರಜ್ ಚೋಪ್ರಾ ಮುಂಬೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾ. ದಿನ್ಷಾ ಪರ್ಡಿವಾಲಾ ಚಿಕಿತ್ಸೆಯಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಬರ್ ಉಡುಗೊರೆ!ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಬರ್ ಉಡುಗೊರೆ!

ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನೀರಜ್ ಚೋಪ್ರಾ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಸಕ್ರಿಯಗೊಳ್ಳಲಿದ್ದೇನೆ ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದರು. ಹೀಗೆ 2 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆದಷ್ಟು ಬೇಗ ಮತ್ತೆ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ಎಂದಿದ್ದ ನೀರಜ್ ಚೋಪ್ರಾ ಇಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೊಡ್ಡ ಇತಿಹಾಸ ನಿರ್ಮಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

ಈ ಸಂದರ್ಭದಲ್ಲಿ ನೀರಜ್ ಚೋಪ್ರಾ ಮಾಡಿದ್ದ ಆ ಹಳೆ ಟ್ವೀಟ್ ವೈರಲ್ ಆಗಿದ್ದು ಅಂದು ನೀರಜ್ ಚೋಪ್ರಾ ಎದುರಿಸಿದ ಕಷ್ಟ ಮತ್ತು ಇಂದು ನೀರಜ್ ಚೋಪ್ರಾ ಮಾಡಿರುವ ಸಾಧನೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ನೀರಜ್ ಚೋಪ್ರಾ ಪಟ್ಟ ಕಷ್ಟ ಮತ್ತು ಕ್ರೀಡೆಯ ಮೇಲೆ ಅವರು ತೋರಿಸಿರುವ ಆಸಕ್ತಿಯನ್ನು ಪ್ರಶಂಸಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರ

Story first published: Saturday, August 7, 2021, 23:37 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X