ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ರೋಯಿಂಗ್ ಇತಿಹಾಸದಲ್ಲಿಯೇ ಅತ್ಯುತ್ತಮ ಘಟ್ಟ ತಲುಪಿದ ಅರವಿಂದ್, ಅರ್ಜುನ್

 Tokyo Olympics 2020: Rowers Arjun, Arvind finishes at 11th position in Mens Lightweight Final B

ಟೋಕಿಯೋ ಒಲಿಂಪಿಕ್ಸ್ ಏಳನೇ ದಿನಕ್ಕೆ ಕಾಲಿಟ್ಟಿದ್ದು ಇಂದು (ಜು. 29) ಭಾರತದ ಹಲವಾರು ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸುತ್ತಿದ್ದಾರೆ. ರೋಯಿಂಗ್ ವಿಭಾಗದಲ್ಲಿ ಅರ್ಜುನ್ ಮತ್ತು ಅರವಿಂದ್ ಜೋಡಿ ಭಾಗವಹಿಸುತ್ತಿದ್ದರೆ, 25 ಮೀ. ಮಹಿಳಾ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಮನು ಭಾಕೆರ್ ಮತ್ತು ರಾಹಿ ಸರ್ನೋಬತ್ ಭಾಗವಹಿಸುತ್ತಿದ್ದಾರೆ, ಪುರುಷರ ಹಾಕಿ ವಿಭಾಗದಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಭಾರತದ ಪುರುಷರ ತಂಡ ಸೆಣಸಾಡಲಿದೆ ಹಾಗೂ 16ರ ಸುತ್ತಿನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿ ವಿ ಸಿಂಧು ಸ್ಪರ್ಧಿಸುತ್ತಿದ್ದಾರೆ.

ಭಾರತದ ಅರ್ಜುನ್ ಮತ್ತು ಅರವಿಂದ್ ಜೋಡಿ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ. ರೋಯಿಂಗ್ ವಿಭಾಗದ ಡಬಲ್ಸ್ ಸ್ಕಲ್ಸ್ ಫೈನಲ್ 'ಬಿ'ನಲ್ಲಿ ಭಾಗವಹಿಸಿದ ಅರ್ಜುನ್ ಮತ್ತು ಅರವಿಂದ್ ಜೋಡಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆ 11ನೇ ಸ್ಥಾನವನ್ನು ಪಡೆದುಕೊಂಡಿರುವ ಅರ್ಜುನ್ ಮತ್ತು ಅರವಿಂದ್ 6:29.66 ಟೈಮ್ ಮಾರ್ಕ್‌ನಲ್ಲಿ ಗುರಿಯನ್ನು ತಲುಪಿದ್ದಾರೆ.

ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮುಟ್ಟದಂತಹ ಸ್ಥಾನವನ್ನು ಅರ್ಜುನ್ ಮತ್ತು ಅರವಿಂದ್ ಜೋಡಿ ಮುಟ್ಟಿದ್ದು, ಪದಕವಿಲ್ಲದಿದ್ದರೂ ಸಹ ಹೊಸ ದಾಖಲೆಯನ್ನು ಮಾತ್ರ ನಿರ್ಮಿಸಿದ್ದಾರೆ.

Story first published: Thursday, July 29, 2021, 6:45 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X