ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಶುಭಾಶಯಗಳ ಸುರಿಮಳೆ

Tokyo Olympics 2020: Sachin Tendulkar and Virender Sehwag Wish Mirabai Chanu for Winning Silver

ಶುಕ್ರವಾರದಿಂದ ಆರಂಭವಾಗಿರುವ ಟೊಕಿಯೊ ಒಲಿಂಪಿಕ್ಸ್ 2020ರಲ್ಲಿ ಭಾರತ ಪದಕದ ಖಾತೆ ತೆರೆದಿದೆ. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ರಜತ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯನ್ನು ಶುರುಮಾಡಿದೆ.

49 ಕೆಜಿ ವೇಟ್ ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಭಾರತದ ಸೈಕೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ವೇಟ್ ಲಿಫ್ಟಿಂಗ್‍ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸೈಕೋಮ್ ಮೀರಾಬಾಯಿ ಚಾನು ಪಾತ್ರರಾಗಿದ್ದಾರೆ.

ಮೊದಲನೇ ಪ್ರಯತ್ನದಲ್ಲಿ ಮೀರಾಬಾಯಿ ಚಾನು ಅವರು ಸ್ನ್ಯಾಚ್ ವಿಭಾಗದಲ್ಲಿ 84 ಕೆಜಿ ತೂಕವನ್ನು ಸುಲಭವಾಗಿ ಎತ್ತುವಲ್ಲಿ ಯಶಸ್ವಿಯಾದರು. ನಂತರ ನಡೆದ 87 ಕೆಜಿ ತೂಕವನ್ನು ಎತ್ತುವ ಸ್ನ್ಯಾಚ್ ವಿಭಾಗದಲ್ಲಿ ಸೈಕೋಮ್ ಮೀರಾಬಾಯಿ ಚಾನು ಅವರು ಎರಡನೇ ಸ್ಥಾನವನ್ನು ಪಡೆದುಕೊಂಡರು.

ಹೀಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊದಲನೇ ಪದಕ ಗೆದ್ದ ಸೈಕೋಮ್ ಮೀರಾಬಾಯಿ ಚಾನು ಅವರಿಗೆ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಸೈಕೋಮ್ ಮೀರಾಬಾಯಿ ಚಾನು ಅವರಿಗೆ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರಿದ್ದಾರೆ.


ಇನ್ನು ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡಾ ಮೀರಾಬಾಯಿ ಚಾನು ಅವರ ಸಾಧನೆಯನ್ನು ಪ್ರಶಂಸಿಸಿದ್ದು ಅವರು ಕೂಡ ಟ್ವಿಟ್ಟರ್ ಮೂಲಕ ಚಾನುಗೆ ಶುಭಾಶಯವನ್ನು ಕೋರಿದ್ದಾರೆ. ಬ್ಯಾಡ್ಮಿಂಟನ್ ಟಾಕ್ ಕೂಡಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮೀರಾಬಾಯಿ ಚಾನು ಅವರಿಗೆ ಶುಭಾಶಯವನ್ನು ಕೋರಿದೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಚೆನ್ನೈ ಸೂಪರ್ ಕಿಂಗ್ಸ್ ತಂಡ, ದಿನೇಶ್ ಕಾರ್ತಿಕ್, ವೆಂಕಟೇಶ್ ಪ್ರಸಾದ್, ಸುನಿಲ್ ಚೆಟ್ರಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದಂತೆ ಇನ್ನೂ ಹಲವಾರು ಕ್ರಿಕೆಟಿಗರು ಮತ್ತು ಕ್ರೀಡಾ ಸಂಸ್ಥೆಗಳು ಮೀರಾಬಾಯಿ ಚಾನು ಅವರಿಗೆ ಶುಭಕೋರಿವೆ.

ಇತ್ತ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಹ ಮೀರಾಬಾಯಿ ಚಾನು ಅವರು ಬೆಳ್ಳಿ ಗೆದ್ದಿರುವುದಕ್ಕೆ ಟ್ವಿಟ್ಟರ್ ಮೂಲಕ ಶುಭಾಶಯವನ್ನು ಕೋರಿದ್ದಾರೆ. 'ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರತದ ಪರ ಮೊದಲನೇ ಪದಕವನ್ನು ಗೆದ್ದಿದ್ದಕ್ಕೆ ನಿಮಗೆ ಕೃತಜ್ಞತೆಗಳು, ನೀವು ಭಾರತೀಯರ ಉತ್ಸಾಹವನ್ನು ಎತ್ತಿದ್ದೀರಿ ಹಾಗೂ ದೇಶಕ್ಕೆ ಹೆಮ್ಮೆಯನ್ನು ತಂದಿದ್ದೀರಿ' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Who is Mirabai Chanu , ಭಾರತಕ್ಕೆ ಈ ಬಾರಿಯ ಮೊದಲ ಪದಕ | Oneindia Kannada

Story first published: Sunday, July 25, 2021, 1:23 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X