ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2021 ಜುಲೈ 23ರಿಂದ ಆಗಸ್ಟ್ 8ಕ್ಕೆ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

Tokyo Olympics 2020 to be held from July 23 to August 8 next year

ಟೋಕಿಯೋ, ಮಾರ್ಚ್ 31: ಜಪಾನ್‌ನ ಟೋಕಿಯೋದಲ್ಲಿ ನಡೆಯಬೇಕಿದ್ದ 2020ರ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್, ಮುಂದಿನ ವರ್ಷ ಅಂದರೆ 2021ರ ಜುಲೈ 23ರಿಂದ ಆಗಸ್ಟ್ 8ರವರೆಗೆ ಮುಂದೂಡಲ್ಪಟ್ಟಿದೆ. ಮಾರಕ ಕೊರೊನಾವೈರಸ್‌ನಿಂದಾಗಿ ವಿಶ್ವಖ್ಯಾತ ಕ್ರೀಡಾಕೂಟದ ದಿನಾಂಕ ಬದಲಾಗಿದೆ.

ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!

ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೋವಿಡ್-19 ಅಥವಾ ಕೊರೊನಾವೈರಸ್‌ನಿಂದಾಗಿ ವಿಶ್ವದಗಲ ಎಲ್ಲಾ ಕ್ರೀಡಾಕೂಟಗಳೂ ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಅದರಂತೆ ಟೋಕಿಯೋ ಒಲಿಂಪಿಕ್ಸ್ ಕೂಡ ಒಂದು ವರ್ಷದ ಕಾಲ ಮುಂದಕ್ಕೆ ಹೋಗಿದೆ.

ಟೀಮ್ ಇಂಡಿಯಾವನ್ನು ಯಾವತ್ತೂ ಮುನ್ನಡೆಸದ 3 ಸೂಪರ್ ಸ್ಟಾರ್‌ಗಳು ಇವರುಟೀಮ್ ಇಂಡಿಯಾವನ್ನು ಯಾವತ್ತೂ ಮುನ್ನಡೆಸದ 3 ಸೂಪರ್ ಸ್ಟಾರ್‌ಗಳು ಇವರು

ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಸೋಮವಾರ (ಮಾರ್ಚ್ 30) ಈ ವಿಚಾರವನ್ನು ತಿಳಿಸಿದೆ. ಈ ವರ್ಷವೇ ಕ್ರೀಡಾಕೂಟ ನಡೆಸಲು ಜಪಾನ್ ಸಿದ್ಧವಾಗಿತ್ತು. ಆದರೆ ಡೆಡ್ಲಿ ಸೋಂಕು ಕೊರೊನಾದಿಂದಾಗಿ ಕ್ರೀಡಾಕೂಟ ರದ್ದುಗೊಳಿಸಬೇಕಾಗಿ ಬಂದಿದೆ.

ಕೊರೊನಾವೈರಸ್‌ಗೆ ಪಾಕಿಸ್ತಾನ ಸ್ಕ್ವಾಶ್ ದಂತಕತೆ ಅಝಾಮ್ ಖಾನ್ ಬಲಿಕೊರೊನಾವೈರಸ್‌ಗೆ ಪಾಕಿಸ್ತಾನ ಸ್ಕ್ವಾಶ್ ದಂತಕತೆ ಅಝಾಮ್ ಖಾನ್ ಬಲಿ

ಅಂದ್ಹಾಗೆ 124 ವರ್ಷಗಳ ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಒಲಿಂಪಿಕ್ಸ್ ಕ್ರೀಡೆ ಮುಂದೂಡಲ್ಪಟ್ಟಿದ್ದು ಇದೇ ಮೊದಲಬಾರಿ. ಕ್ರೀಡಾಕೂಟ ಮುಂದೂಡಿದ್ದರಿಂದ ಜಪಾನ್‌ಗೆ ಭಾರೀ ಹಿನ್ನಡೆಯಾಗಿದೆ. ತಯಾರಿಗಾಗಿ ವ್ಯಯಿಸಿದ್ದ ಹಣವೂ ವ್ಯರ್ಥಗೊಂಡಿದೆ. ಸೋಮವಾರ (ಮಾರ್ಚ್ 30) ಭಾರತದಲ್ಲಿ ಸುಮಾರು 1071 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 100 ಮಂದಿ ಈಗಾಗಲೇ ಗುಣಮುಖರಾಗಿದ್ದರೆ, 29 ಮಂದಿ ಸಾವನ್ನಪ್ಪಿದ್ದರು.

Story first published: Monday, March 30, 2020, 23:46 [IST]
Other articles published on Mar 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X